ಅಹಮದಾಬಾದ್: ಭಾರತದ ಲೆಜೆಂಡರಿ ಬ್ಯಾಟರ್ ಸುನೀಲ್ ಗವಾಸ್ಕರ್ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿಯ ಇತ್ತೀಚಿನ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿರಾಟ್ ಗೆ ಫಾರ್ಮ್ ಸಮಸ್ಯೆಯಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಅದೃಷ್ಟವು ಅವನ ಕಡೆ ಇಲ್ಲ ಎಂದು ಗಾವಸ್ಕರ್ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ವಿಫಲವಾದ ನಂತರ ಗಾವಸ್ಕರ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ಬ್ಯಾಟರ್‌ಗೆ ಸ್ವಲ್ಪ ಅದೃಷ್ಟ ಬೇಕು. ಪ್ರತಿಯೊಬ್ಬ ಬ್ಯಾಟರ್ ಗೆ ಅವನು ಆಡುವಾಗ ಎಡ್ಜ್ ತಪ್ಪಿಸುವ ಅದೃಷ್ಟ ಬೇಕು. ಪ್ರತಿಯೊಬ್ಬ ಬ್ಯಾಟರ್‌ಗೆ ಅವನು ಚೆಂಡನ್ನು ಎಡ್ಜ್ ಮಾಡುವಾಗ ಫೀಲ್ಡರ್ ಇರದ ಕಡೆ ಬೀಳುವ ಅದೃಷ್ಟ ಬೇಕು ಎಂದು ಗಾವಸ್ಕರ್ ಹೇಳಿದರು.
ಇದನ್ನೂ ಓದಿ:ಹಿಂದುತ್ವ ಗುಂಪುಗಳು ಮುಸ್ಲಿಂ ಹುಡುಗಿಯರಿಗೆ ಕಿರುಕುಳ ನೀಡುತ್ತಿದೆ: ಫುಟ್ ಬಾಲ್ ತಾರೆ ಪೋಗ್ಬಾ
“ಕಳೆದ ಹಲವು ಪಂದ್ಯಗಳಲ್ಲಿ ಅವರು ಅದೃಷ್ಟವನ್ನು ಹೊಂದಿರಲಿಲ್ಲ, ಅವರು ದಕ್ಷಿಣ ಆಫ್ರಿಕಾದಲ್ಲಿ ಅರ್ಧಶತಕಗಳನ್ನು ಗಳಿಸಿದ್ದರು ಎಂದು ಮರೆಯಬಾರದು” ಗಾವಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲಿ 4 ಎಸೆತದಲ್ಲಿ 8 ರನ್ ಗಳಿಸಿದ್ದರೆ, ಎರಡನೇ ಪಂದ್ಯದಲ್ಲಿ 18 ರನ್ ಗಳಿಸಿದ್ದ ವಿರಾಟ್ ಸ್ಲಿಪ್ ಫೀಲ್ಡರ್ ಗೆ ಕ್ಯಾಚ್ ನೀಡಿ ಔಟಾಗಿದ್ದರು.