ಮುಂಬಯಿ: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ.
ರಾಹುಲ್ ನೀತಿ ಸಂಹಿತೆಯ ಲೆವೆಲ್ 1 ಅಪರಾಧ ಎಸೆಗಿದ್ದಾರೆ ಮತ್ತು ಈ ಅಪರಾಧ ಕ್ಕಾಗಿ ವಿಧಿಸಲಾದ ದಂಡವನ್ನು ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ:ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ: ಆ್ಯಪ್ ಬಿಡುಗಡೆ
ಇದೇ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಲಕ್ನೋ ತಂಡದ ಸದಸ್ಯ ಮಾರ್ಕಸ್ ಸ್ಟೋಯಿನಿಸ್ ಅವರಿಗೆ ಎಚ್ಚರಿಕೆ ನೀಡಲಾಯಿತು. ಜೋಶ್ ಹ್ಯಾಝಲ್‌ವುಡ್ ಬೌಲಿಂಗ್ ಮಾಡುತ್ತಿದ್ದ ವೇಳೆ ಸ್ಟೋಯಿನಿಸ್ ಮೈದಾನದಲ್ಲಿದ್ದ ಅಂಪಾಯರ್ ಜತೆ ವಾದ ಮಾಡಿದ್ದರು. ಅವರ ಎಸೆತವೊಂದನ್ನು ವೈಡ್ ನೀಡದ ಕಾರಣಕ್ಕೆ ರೊಚ್ಚಿಗೆದ್ದಿದ್ದರು. ಇದು ನೀತಿ ಸಂಹಿತೆಯ ಲೆವೆಲ್ 1 ಅಪರಾಧವಾಗಿದೆ ಮತ್ತು ಅದಕ್ಕಾಗಿ ಎಚ್ಚರಿಕೆ ನೀಡಲಾಗಿದೆ.
ಲೆವೆಲ್ 1 ಅಪರಾಧಕ್ಕೆ ಮ್ಯಾಚ್ ರೆಫ್ರಿ ನಿರ್ಧಾರ ಅಂತಿಮವಾಗಿರುತ್ತದೆ ಮತ್ತು ಇದಕ್ಕೆ ಸಂಬಂಧಪಟ್ಟವರು ಬದ್ಧ ವಾಗಿರಬೇಕಾಗುತ್ತದೆ.