Advertisement

LS Polls: ವಿಜಯಪುರ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಆಲಗೂರ ವಿರುದ್ಧ ಸಂಬಂಧಿಯ ಸ್ಪರ್ಧೆ

12:27 PM Apr 03, 2024 | Team Udayavani |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ವೈ.ಬೆಳ್ಳುಬ್ಬಿ ಹೇಳಿದರು.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಯಾವುದೇ ಪಕ್ಷದ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷೇತರನಾಗಿ ಸ್ಪರ್ಧೆಗೆ ಇಳಿಯಲಿದ್ದೇನೆ ಎಂದರು.

ದಲಿತ ಬಲಗೈ ಸಮುದಾಯದ ಚಲವಾದಿ ಸಮಾಜಕ್ಕೆ ಸೇರಿದ್ದೇನೆ. ಬಿ.ಎ.ಎಲ್.ಎಲ್.ಬಿ. ಪದವೀಧರನಾದ ನಾನು ಪೊಲೀಸ್ ಇಲಾಖೆಗೆ ಸೇರಿ ವಿಜಯಪುರ ಜಿಲ್ಲೆಯ ಬಹುತೇಕ ಸುಮಾರು ಒಂದು ದಶಕದ ಕಾಲ ಸೇವೆ ಸಲ್ಲಿಸಿ, ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಪೊಲೀಸ್ ಸೇವಾ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಬಹುತೇಕ ಹಳ್ಳಿಗಳ ಸಂಪರ್ಕ ಹೊಂದಿದ್ದೇನೆ ಎಂದು ವಿವರಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ತರುವುದು, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ತರುವುದು ನನ್ನ ಆದ್ಯತೆಯ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನನ್ನ ಹತ್ತಿರದ ಸಂಬಂಧಿ. 2017 ಆಲಗೂರ ಮಗಳು ನನ್ನ‌ ಮಗನಿಗೆ ವಿವಾಹ ಮಾಡಲಾಗಿತ್ತು. ಆದರೆ ಮಗಳನ್ನು ನಮ್ಮ ಮನೆಗೆ ಸಂಸಾರಿಕ ವ್ಯವಸ್ಥೆಗೆ ಕಳಿಸದೇ ಸಮಸ್ಯೆ ಸೃಷ್ಟಿಸಿದರು. ನಮ್ಮ ಕುಟುಂಬದ ವಿರುದ್ಧ ವರದಕ್ಷಿಣೆ ದೌರ್ಜನ್ಯದ ಕುರಿತು ಪೊಲೀಸ್ ಠಾಣೆಗೆ ಕೌಟುಂಬದ ನಾಲ್ಕು ಜನರ ವಿರುದ್ಧ ರಾಜಕೀಯ ಒತ್ತಡ ಹೇರಿ, ನನ್ನ ಕುಟುಂಬದ ಮೇಲೆ ಹಿಂಸೆ ನೀಡಿದ್ದಾರೆ. ನಾವೂ ಸುಳ್ಳು ಪ್ರಕರಣದ ವಿರುದ್ಧ ನಾನೂ ದೂರು ನೀಡಿದ್ದು, ಕಾನೂನು ಹೋರಾಟ ಮುಂದುವರೆದಿದೆ ಎಂದರು.

Advertisement

ಕಾಂಗ್ರೆಸ್ ಘೋಷಿತ ಅಭ್ಯರ್ಥಿ ರಾಜು ಆಲಗೂರ ದಲಿತ ಸಂಘಟನೆ ಮೂಲಕ ಬಂದ ವ್ಯಕ್ತಿಯಾಗಿದ್ದು, ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ಎರಡು ಬಾರಿ ಶಾಸಕರಾದ ಮೇಲೆ ಮೂರು ಮನೆ, ತೋರವಿ ನೂರಾರು ಎಕರೆ ಜಮೀನು,

ಹೊಟೇಲ್, ಪೆಟ್ರೋಲ್ ಬಂಕ್ ಹೀಗೆ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆ. ಈ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತ, ಇಡಿ ಹೀಗೆ ಆರ್ಥಿಕ ಅಪರಾಧ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮಣ ಬಿರಾದಾರ, ಸಿದ್ಧಲಿಂಗಪ್ಪ ಹಾದಿಮನಿ, ಕೃಷ್ಣ ಬಾಡಗಂಡಿ, ಯಲ್ಲಪ್ಪ ಹಂಗರಗಿ, ಆರ್.ಜಿ.ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next