Advertisement
ಮಂಗಳವಾರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬೆಳಲಗೆರೆ, ಕೋಟೆಹಾಳು, ಚಿರಡೋಣಿ, ಕಣಿವೆಬಿಳಚಿ, ಬಸವಾಪಟ್ಟಣ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಸಿದ್ದೇಶ್ವರ ಅವರ ದೂರದೃಷ್ಟಿ, ಸಮಾಜಮುಖೀ ಕೆಲಸ ನೋಡಿಯೇ ಅವರನ್ನು 4 ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಸಿದ್ದೇಶ್ವರ ಅವರ ಬದಲಾಗಿ ನಾನು ಸ್ಪರ್ಧಿಸಿದ್ದೇನೆ. ಅತ್ಯಧಿಕ ಮತಗಳಿಂದ ಗೆಲ್ಲಿಸಿ ಜನರ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
Related Articles
Advertisement
ಮಾಜಿ ಶಾಸಕರಾದ ಬಸವರಾಜ ನಾಯ್ಕ, ಪ್ರೊ| ಎನ್. ಲಿಂಗಣ್ಣ, ಸಂಗಮೇಶ್, ದಾಕ್ಷಾಯಿಣಿ ನಿರಾಣಿ, ಪ್ರೇಮಾ, ಮಾಗನೂರು ಪ್ರಭಣ್ಣ, ಅಣಬೇರು ಜೀವನಮೂರ್ತಿ, ಜಿ.ಎಸ್. ಶ್ಯಾಮ್, ದೇವೇಂದ್ರಪ್ಪ, ಹನುಮಂತ ನಾಯ್ಕ, ಮಂಜ ನಾಯ್ಕ, ಹನುಮಂತಪ್ಪ ಇತರರು ಇದ್ದರು.
ಹರಿಹರ-ಚನ್ನಗಿರಿಯಲ್ಲಿಂದು ಬಿಜೆಪಿ ಪ್ರಚಾರ
ದಾವಣಗೆರೆ: ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಮೇ 1ರಂದು ಹರಿಹರ, ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ. ಬುಧವಾರ ಬೆಳಗ್ಗೆ 8ರಿಂದ 10ರವರೆಗೆ ಹರಿಹರದಲ್ಲಿ ರೋಡ್ ಶೋ ನಡೆಸುವರು. 10:30ಕ್ಕೆ ನಂದಿಗಾವಿ, 10:45ಕ್ಕೆ ಧೂಳೆಹೊಳೆ, 11:10ಕ್ಕೆ ಇಂಗಳಗೊಂದಿ, 11:30ಕ್ಕೆ ಹುಲಿಗಿನಹೊಳೆ, 11:50ಕ್ಕೆ ಎಳೆಹೊಳೆ, ಮಧ್ಯಾಹ್ನ 12:15ಕ್ಕೆ ಮಳಲಹಳ್ಳಿ,12:30ಕ್ಕೆ ಪಾಳ್ಯ, 12:50ಕ್ಕೆ ನಿಟ್ಟೂರು, ಮಧ್ಯಾಹ್ನ 1ಕ್ಕೆ ಆದಾಪುರ, 1:20ಕ್ಕೆ ಬೂದಿಹಾಳ್, 1:45ಕ್ಕೆ ನೆಹರು ಕ್ಯಾಂಪ್, 2ಕ್ಕೆ ಮಲ್ಲನಾಯಕನಹಳ್ಳಿ, 2:15ಕ್ಕೆ ಸಂಕ್ಲಿಪುರ, 2:30ಕ್ಕೆ ಗುಡ್ಡದಹಳ್ಳಿ, ಸಂಜೆ 4ಕ್ಕೆ ಚನ್ನಗಿರಿ, 6ಕ್ಕೆ ಸಂತೆಬೆನ್ನೂರಿನಲ್ಲಿ ರೋಡ್ ಶೋ ನಡೆಸುವರು.
ಕಾಂಗ್ರೆಸ್ ಎರಡಂಕಿ ದಾಟಲ್ಲ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ. ಇಂಡಿಯಾ ಕೂಟ 120ಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಯಾವ ಕಾರಣಕ್ಕೂ ಕೇಂದ್ರದಲ್ಲಿ ಅಧಿ ಕಾರಕ್ಕೆ ಬರುವುದಿಲ್ಲ ಎನ್ನುವ ಸತ್ಯ ಅವರಿಗೂ ಗೊತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಗೆ ನೀಡುವ ಮತ ವ್ಯರ್ಥ ಆಗಲಿದೆ. ಅಮೂಲ್ಯ ಮತ ವ್ಯರ್ಥ ಮಾಡಿಕೊಳ್ಳ ಬೇಡಿ. ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಗಾಯಿತ್ರಿ ಸಿದ್ದೇಶ್ವರ ಮನವಿ ಮಾಡಿದರು.