Advertisement

LS Polls: ಬಿಎಸ್‌ವೈ ಕುಟುಂಬದ ತೇಜೋವಧೆ ಸರಿಯಲ್ಲ

10:41 AM Apr 06, 2024 | Kavyashree |

ಶಿವಮೊಗ್ಗ: ಈ ಬಾರಿ ಚುನಾವಣೆ ನಡೆಯುತ್ತಿ ರುವುದು ಅಭಿವೃದ್ಧಿ ವರ್ಸಸ್‌ ಅ ಧಿಕಾರಕ್ಕಾಗಿ. ವೈಯಕ್ತಿಕವಾಗಿ ನಾಯಕರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ. ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬದ ಕುರಿತು ತೇಜೋವಧೆ ಹೊಸದಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು. ಕಾಂಗ್ರೆಸ್‌ ಪಾಪದ ಕೊಳೆಯನ್ನು ಅವರೇ ತೊಳೆಯಬೇಕು. ಬಿಜೆಪಿಯ ಜಿಲ್ಲಾ ಮುಖಂಡರು ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಚುನಾವಣೆ ಮುಗಿದ ನಂತರ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಖಂಡಿತ ಮಾಡುತ್ತೇನೆ. ವಿಐಎಸ್‌ಎಲ್‌ ಕಾರ್ಖಾನೆ ಬಂದ್‌ ಆಗಲು ಬಿಟ್ಟಿಲ್ಲ. ಎಂಪಿಎಂ ಕಾರ್ಖಾನೆಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್‌. ಈ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು ಎಂದರು.

ಶಾಹಿ ಗಾರ್ಮೆಂಟ್ಸ್‌ ನೀಡಿದ ಜಮೀನಿಗೆ ಸಂಬಂ ಧಿಸಿದಂತೆ ಬೇಳೂರು ಗೋಪಾಲಕೃಷ್ಣ ಅವರು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಬೇಡ ಎಂದರೂ ಯಾವುದೇ ತನಿಖೆಗೆ ನಾನು ಸಿದ್ಧ ಎಂದರು.

ಉದ್ಯಮಿಗಳು ಬರುವುದು ಅವರಿಗೆ ಇಷ್ಟ ಇಲ್ಲ, ವಿಮಾನ ನಿಲ್ದಾಣದ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಒಳ್ಳೆಯ ವಿಮಾನ ನಿಲ್ದಾಣವಾಗಬೇಕಾದರೆ ಹೆಚ್ಚು ಜಾಗ ಬೇಕಾಗುತ್ತದೆ. ಮುಂದಿನ 50 ವರ್ಷವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುತ್ತೇವೆ. ಹಾಗೆಯೇ ಕಳೆದ 10 ವರ್ಷಗಳಲ್ಲಿ ಅಡಕೆಯ ಬೆಲೆ ಕಡಿಮೆಯಾಗದಂತೆ ನೋಡಿಕೊಂಡಿದ್ದೇವೆ ಎಂದರು.

ಇದೇ ಸಂದರ್ಭ ಐಡಿಯಲ್‌ ಗೋಪಿ, ಮೋಹನ್‌, ಆನಂದ್‌ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಶಾಸಕರಾದ ಎಸ್‌.ಎನ್‌. ಚನ್ನಬಸಪ್ಪ, ಡಿ.ಎಸ್‌. ಅರುಣ್‌, ಎಸ್‌.ರುದ್ರೇಗೌಡ, ಪ್ರಮುಖರಾದ ಆರ್‌.ಕೆ. ಸಿದ್ದರಾಮಣ್ಣ, ಜ್ಞಾನೇಶ್ವರ್‌, ಮೋಹನ್‌ ರೆಡ್ಡಿ, ಮಾಲತೇಶ್‌, ನಾಗರಾಜ್‌ ಪ್ರಭು, ಅಣ್ಣಪ್ಪ ಮುಂತಾದವರು ಇದ್ದರು.

Advertisement

ಇಂದು ಸಂಸ್ಥಾಪನಾ ದಿ

ಪಕ್ಷದ ಸಂಸ್ಥಾಪನಾ ದಿನವಾದ ಏ.6ರಂದು ಬೂತ್‌ ಮಟ್ಟದಿಂದ ಕಾರ್ಯಕ್ರಮ ಆಚರಣೆ ಮಾಡಲಾಗುವುದು ಎಂದು ಸಂಸದ ರಾಘವೇಂದ್ರ ಹೇಳಿದರು. 1980 ರ ಏ.6ರಂದು ನಮ್ಮ ಪಕ್ಷ ಆರಂಭವಾಯಿತು. ಇದರ ಅಂಗವಾಗಿ ರಾಷ್ಟಾದ್ಯಂತ ನಾಳೆ ಬೂತ್‌ ಮಟ್ಟದಿಂದ ಸಂಸ್ಥಾಪನಾ ದಿನ ಆಚರಿಸಲಾಗುವುದು.

ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು. ಏಕತೆ- ಮಾನವತಾವಾದದ ಧ್ಯೇಯವಾಕ್ಯ ಇಟ್ಟುಕೊಂಡು ದೀನದಯಾಳು ಮತ್ತು ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರ ಆಶಯದಂತೆ ಕಾರ್ಯಕರ್ತರನ್ನು ಜೋಡಿಸಿಕೊಂಡು ಎಲ್ಲಾ ಬೂತ್‌ಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುವುದು ಎಂದರು.

ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯಗಳು ದೊರಕಬೇಕು ಎಂಬುದು ನಮ್ಮ ಹಿರಿಯರ ಆಶಯ. ಆರೋಗ್ಯ, ಶಿಕ್ಷಣ, ನೀರು, ಸ್ವಾಭಿಮಾನದ ಬದುಕು ಕಟ್ಟಿಕೊಡುವುದು ನಮ್ಮ ಮುಖ್ಯ ಧ್ಯೇಯವಾಗಿದೆ. ಇದರ ಅಡಿಯಲ್ಲಿಯೇ ನಾವು ಕೆಲಸ ಮಾಡುತ್ತೇವೆ. ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದರು. ಚುನಾವಣೆಗೆ ಇನ್ನು 32 ದಿನ ಬಾಕಿ ಇದೆ. ಈಗಾಗಲೇ ಬೂತ್‌ಮಟ್ಟದಿಂದ ನಾವು ಪ್ರಚಾರ ಆರಂಭಿಸಿದ್ದೇವೆ. ಕಾರ್ಯಕರ್ತರ ಪರಿಶ್ರಮ ಎದ್ದು ಕಾಣುತ್ತಿದೆ. ಮಹಿಳಾ ಸಮಾವೇಶಗಳು ಯಶಸ್ವಿಯಾಗುತ್ತಿವೆ. ಬಿಜೆಪಿ ಬಹುದೊಡ್ಡ ಪಕ್ಷವಾಗಿದೆ. 18 ಕೋಟಿ ಸದಸ್ಯರು ಇಲ್ಲಿದ್ದಾರೆ. ಈಗ ಒಳ್ಳೆಯ ವಾತಾವರಣವಿದೆ. ಎಲ್ಲರೂ ಸೇರಿ ಈ ಚುನಾವಣಾ ರಥವನ್ನು ಯಶಸ್ವಿಯಾಗಿ ಎಳೆಯುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next