Advertisement

LS Polls; ತಮಿಳುನಾಡಿನಲ್ಲಿ ಕಾಂಗ್ರೆಸ್‌ 9, ಡಿಎಂಕೆ 21 ಕ್ಷೇತ್ರಗಳಲ್ಲಿ ಸ್ಪರ್ಧೆ

12:26 AM Mar 19, 2024 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಅಂತಿಮ ಗೊಂಡಿದೆ. 39 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 9, ಸಿಪಿಐ 2, ಸಿಪಿಎಂ 2, ವಿಸಿಕೆ 2, ಐಯುಎಂಎಲ್‌ 1, ಕೆಎಂಡಿಕೆ 1, ಎಂಡಿಎಂಕೆ 1 ಮತ್ತು ಡಿಎಂಕೆ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇದೇ ವೇಳೆ ಪುದುಚೇರಿಯ 1 ಕ್ಷೇತ್ರವನು °ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ.

Advertisement

ಈ ಬಗ್ಗೆ ಡಿಎಂಕೆ ಅಧ್ಯಕ್ಷ, ಸಿಎಂ ಎಂ.ಕೆ.ಸ್ಟಾಲಿನ್‌ ಮತ್ತು ತಮಿಳುನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಒಪ್ಪಂದ ಪತ್ರಕ್ಕೆ ಸೋಮವಾರ ಸಹಿ ಹಾಕಿದ್ದಾರೆ. ತಮಿಳುನಾಡಿನ ಶಿವಗಾಂಗಾ, ಕಲ ಡೂರು, ಕೃಷ್ಣಗಿರಿ, ಕನ್ಯಾಕುಮಾರಿ, ತಿರುವಳ್ಳೂರು, ಮೈಲಾಡು ತುರೈ, ತಿರುನಲ್ವೇಲಿ, ಕರೂರ್‌ ಮತ್ತು ವಿರು ದುನಗರ್‌ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಇದರ ಜತೆಗೆ ಪುದುಚೇರಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ನೀಡ ಲಾಗಿದೆ. ಇದೇ ವೇಳೆ ಮಾತನಾಡಿದ ತಮಿಳುನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸೆಲ್ವಪೆರುಂತಗೈ, “2-3 ದಿನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಘೋಷಿಸ ಲಾಗುವುದು’ ಎಂದು ತಿಳಿಸಿದ್ದಾರೆ. ನಮಕ್ಕಲ್‌ ಕ್ಷೇತ್ರದಿಂದ ಕೆಎಂಡಿಕೆ ಅಭ್ಯರ್ಥಿಯು ಡಿಎಂಕೆ ಚಿಹ್ನೆಯಡಿಯಲ್ಲಿ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next