Advertisement

LS Polls: ನಮ್ಮ ಗೆಲುವು ನೂರಕ್ಕೆ ನೂರು ಗ್ಯಾರಂಟಿ: ರೋಡ್‌ ಶೋ ನಡೆಸಿ ಸಿಎಂ ಹೇಳಿಕೆ

02:02 PM Apr 03, 2024 | Team Udayavani |

ಚಾಮರಾಜನಗರ: ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಬಂದು ಎಲ್ಲಾ ಶಾಸಕರು ಮಾತನಾಡಿದ್ದಾರೆ. ಸುನೀಲ್ ಬೋಸ್ ಸಹ ಎಲ್ಲರನ್ನು ಭೇಟಿ ಮಾಡಿದ್ದಾರೆ‌. ಚಾಮರಾಜನಗರ ಮತ್ತು ಮೈಸೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಈ ಬಾರಿ ಭಾರಿ ಮಟ್ಟದಲ್ಲಿ ಹುರುಪು ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಎರಡು ಬಾರಿ ಆರ್.ಧ್ರುವ ನಾರಾಯಣ ಎಂಪಿ ಆಗಿದ್ದರು. ಮೂರನೇ ಬಾರಿ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದರು. ಇಂದು ಅವರು ನಮ್ಮ ಜೊತೆಗಿಲ್ಲ. ಆದರೆ, ಅವರ ಸ್ಥಾನದಲ್ಲಿ ಸುನೀಲ್ ಬೋಸ್ ಅವರು ಇದ್ದು ಅವರನ್ನು ಎಲ್ಲಾ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಎಂಟು ವಿಧಾನಸಭಾ ಕ್ಷೇತ್ರದಲ್ಲಿ 7 ಕಡೆ ನಮ್ಮ ಶಾಸಕರಿದ್ದಾರೆ. ಈ ಬಾರಿ ಹನೂರು ಕ್ಷೇತ್ರದಲ್ಲಿ ಬಹುಮತ ಕೊಡಿಸುವುದಾಗಿ ಆರ್. ನರೇಂದ್ರ ಭರವಸೆ ನೀಡಿದ್ದಾರೆ‌. 2 ಲಕ್ಷ ಮತಗಳ ಅಂತರದಿಂದ ಸುನೀಲ್ ಬೋಸ್ ಗೆಲುವು ಸಾಧಿಸಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಹತ್ತು ವರ್ಷ ಕೇಂದ್ರದಲ್ಲಿದ್ದರೂ ಕೊಟ್ಟ ಮಾತನ್ನು ಈಡೇರಿಸಿಲ್ಲ. ಮೋದಿ ಸುಳ್ಳನ್ನು ಹೇಳಿ ಜನರನ್ನು ವಂಚಿಸಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದಾಗಲೂ ಈಗ ಸಿಎಂ ಆದ ಮೇಲೂ ಎಲ್ಲ ಭರವಸೆಗಳನ್ನು ಈಡೇರೆಸಿದ್ದು, ಐದು ಗ್ಯಾರೆಂಟಿಗಳನ್ನು ಕೊಟ್ಟಿದ್ದೀನಿ ಎಂದರು.

Advertisement

ಮೋದಿ ಹೇಳಿದ 15 ಲಕ್ಷ ಖಾತೆಗೆ, ಉದ್ಯೋಗ ಸೃಷ್ಟಿ, ಪೆಟ್ರೋಲ್, ಡಿಸೆಲ್, ಗ್ಯಾಸ್ ಬೆಲೆ ಇಳಿಕೆಯಾಯಿತಾ, ಅವರಿಗೆ ಓಟ್ ಹಾಕಬೇಕಾ ಎಂದು ಪ್ರಶ್ನಿಸಿ, ಕೇಂದ್ರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಅದರ ಬಗ್ಗೆ ಜನರಿಗೆ ತಿಳಿಸಿ, ಅದರೊಂದಿಗೆ  ನಮ್ಮ ಗ್ಯಾರಂಟಿ ಗಳನ್ನು ತಿಳಿಸಿ ಎಂದು ಹೇಳಿದರು.

ಬರ  ಪರಿಹಾರಕ್ಕೆ ವರದಿ ನೀಡಿಲ್ಲ ಎಂದು ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ನಾನೇ ಸ್ವತಃ ಪ್ರಧಾನಿ ಅವರನ್ನು ಭೇಟಿ ಮಾಡಿ ರೈತರ ಕಷ್ಟದ ಬಗ್ಗೆ ತಿಳಿಸಿದ್ದೇನೆ ಎಂದರು.

ಬರಗಾಲವನ್ನು ನಮ್ಮ ಸಂಪನ್ಮೂಲಗಳಿಂದ ಎದುರಿಸುತ್ತಿದ್ದೇವೆ. ಕೇಂದ್ರದಿಂದ ಒಂದು ರೂ. ಬಂದಿಲ್ಲ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ  ಎಂದ ಅವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿ, ನಮ್ಮ ಗೆಲುವು ನೂರಕ್ಕೆ ನೂರು ಗ್ಯಾರೆಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಡಾ.ಜಿ ಪರಮೇಶ್ವರ್, ಕೆ.ವೆಂಕಟೇಶ್, ಸತೀಶ್, ಜಾರಕಿ ಹೋಳಿ, ಡಾ.ಎಚ್ .ಸಿ ಮಹದೇವಪ್ಪ, ಯತೀಂದ್ರ, ಶಾಸಕ ಪುಟ್ಟರಂಗಶೆಟ್ಟಿ, ಎಆರ್ ಕೃಷ್ಣಮೂರ್ತಿ ಸೇರಿದಂತೆ ಇತರ ನಾಯಕರ ರೋಡ್ ಶೋ ನಲ್ಲಿ ಭಾಗವಹಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next