Advertisement

NCBC ಗೆ ಸಾಂವಿಧಾನಿಕ ಸ್ಥಾನಮಾನ: ಸಂಸತ್ತಿನಲ್ಲಿ ಮಸೂದೆ ಪಾಸ್‌

07:40 PM Aug 02, 2018 | Team Udayavani |

ಹೊಸದಿಲ್ಲಿ : ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ)  ಸಾಂವಿಧಾನಿಕ ಸ್ಥಾನಮಾನ ನೀಡುವ ಮಹತ್ವದ ಮಸೂದೆ ಇಂದು ಗುರುವಾರ ಲೋಕಸಭೆಯಲ್ಲಿ ಮೂರನೇ ಎರಡಂಶಕ್ಕಿಂತಲೂ ಅಧಿಕ ಬಹುಮತದಿಂದ ಪಾಸಾಯಿತು.

Advertisement

ಸದನದಲ್ಲಿಂದು 2017ರ 123ನೇ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಐದು ತಾಸುಗಳ ಚರ್ಚೆ ನಡೆದು 30ಕ್ಕೂ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. 

ಮತದಾನದ ವೇಳೆ ಸದನದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಸೂದೆಯನ್ನು ಯಶಸ್ವಿಯಾಗಿ ನಿಭಾಯಿಸಿ ಪಾಸುಗೊಳಿಸಿದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥಾವರಚಂದ್‌ ಗೆಹಲೋತ್‌ ಅವರನ್ನು ಅಭಿನಂದಿಸಿದರು. 

ಚರ್ಚೆಯ ವೇಳೆ ಕೆಲವು ಸದಸ್ಯರು 2014ರ ಸಾಮಾಜಿಕ – ಆರ್ಥಿಕ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರೆ ಇನ್ನು ಕೆಲವರು ದೇಶದಲ್ಲಿನ ಒಬಿಸಿ ಜನಸಂಖ್ಯೆಯನ್ನು ನಿರ್ಧರಿಸಲು ಜನಗಣತಿ ನಡೆಸಬೇಕೆಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next