Advertisement

ಲೋಕಸಭೆಯಲ್ಲಿ ರಫೇಲ್‌ ಪ್ರತಿಭಟನೆ; ಕಲಾಪ ಮಧ್ಯಾಹ್ನ ವರೆಗೆ ಮುಂದಕ್ಕೆ

06:14 AM Feb 08, 2019 | udayavani editorial |

ಹೊಸದಿಲ್ಲಿ : ರಫೇಲ್‌ ಡೀಲ್‌ ವಿಷಯದಲ್ಲಿ ಪ್ರಧಾನಿ ಕಾರ್ಯಾಲಯ ಅನುಸರಿಸುತ್ತಿರುವ ಕಾರ್ಯ ವೈಖರಿಗೆ ರಕ್ಷಣಾ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಹೇಳುವ ಪತ್ರಿಕಾ ವರದಿಯೊಂದರ ಫ‌ಲಕವನ್ನು ಹಿಡಿದು ವಿಪಕ್ಷ ನಾಯಕರು ಸದನ ಬಾವಿಗೆ ನುಗ್ಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಗಲಾಟೆ, ಗದ್ದಲ ಎಬ್ಬಿಸಿರುವುದನ್ನು ಅನುಸರಿಸಿ ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಸುಮಾರು 50 ನಿಮಿಷಗಳ ಅವಧಿಗೆ ಕಲಾಪವನ್ನು ಮುಂದೂಡಿದರು. 

Advertisement

11 ಗಂಟೆಯ ಹೊತ್ತಿಗೆ ಸದನವು ಪ್ರಶ್ನಾ ವೇಳೆಯನ್ನು ಆರಂಭಿಸಿದಾಗ ಕಾಂಗ್ರೆಸ್‌, ಎಡಪಕ್ಷ, ಟಿಎಂಸಿ ಮತ್ತು ಟಿಡಿಪಿ ಸದಸ್ಯರು  ಸದನದ ಬಾವಿಗೆ ನುಗ್ಗಿ  ರಫೇಲ್‌ ಕುರಿತಾದ ಪತ್ರಿಕಾ ವರದಿಯೊಂದರ ಫ‌ಲಕವನ್ನು ಹಿಡಿದುಕೊಂಡು ತಾರಕಸ್ವರದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗತೊಡಗಿದರು.

11.05ರ ಸುಮಾರಿಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು 50 ನಿಮಿಷಗಳ ಅವಧಿಗೆ ಸದನ ಕಲಾಪವನ್ನು ಮುಂದೂಡಿದರು. 

Advertisement

Udayavani is now on Telegram. Click here to join our channel and stay updated with the latest news.

Next