ನವದೆಹಲಿ:ಹಣದುಬ್ಬರದ ಏರಿಕೆಯ ಹೊರೆ ಗ್ರಾಹಕರ ಮೇಲೆ ಇನ್ನಷ್ಟು ಹೆಚ್ಚಾಗಲಿದ್ದು, ಇಂದಿನಿಂದ (ಮಾರ್ಚ್ 01) ಪ್ರತಿ ವಾಣಿಜ್ಯ ಬಳಕೆಯ ಸಿಲಿಂಡರ್ (ಎಲ್ ಪಿಜಿ) ಬೆಲೆ ದೆಹಲಿಯಲ್ಲಿ 105 ರೂಪಾಯಿ ಏರಿಕೆಯಾಗಲಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಕ್ಯಾಲಿಫೋರ್ನಿಯಾ ಚರ್ಚ್ ನೊಳಗೆ ಗುಂಡಿನ ದಾಳಿ; ಮೂವರು ಮಕ್ಕಳು ಸೇರಿ ಐವರ ಹತ್ಯೆ
ರಾಷ್ಟ್ರೀಯ ತೈಲ ಮಾರಾಟ ಕಂಪನಿಗಳು ಫೆ.1ರಂದು 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಇದೀಗ 105 ರೂಪಾಯಿ ಹೆಚ್ಚಳದಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,012 ರೂಪಾಯಿಗೆ ಏರಿಕೆಯಾಗಿದೆ.
ಅಷ್ಟೇ ಅಲ್ಲ 5 ಕೆಜಿ ಸಿಲಿಂಡರ್ ಬೆಲೆ 27 ರೂಪಾಯಿ ಹೆಚ್ಚಳವಾಗಿದ್ದು, ಇದರೊಂದಿಗೆ ದೆಹಲಿಯಲ್ಲಿ 5 ಕೆಜಿ ಪ್ರತಿ ಸಿಲಿಂಡರ್ ಬೆಲೆ 559 ರೂಪಾಯಿಗೆ ಏರಿಕೆಯಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವರದಿ ತಿಳಿಸಿದೆ.
ಕೋಲ್ಕತಾದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 2,089 ರೂಪಾಯಿಗೆ ಏರಿಕೆಯಾಗಿದೆ. ಮುಂಬಯಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,962 ರೂಪಾಯಿ, ಚೆನ್ನೈನಲ್ಲಿ 2,185.5 ರೂಪಾಯಿಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1685.5 ರೂಪಾಯಿ, 5 ಕೆಜಿ ಸಿಲಿಂಡರ್ ಬೆಲೆ 469.5 ರೂಪಾಯಿ.
ಫೆಬ್ರುವರಿಗೂ ಮುನ್ನ ಕೇವಲ ಐದು ತಿಂಗಳಲ್ಲಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಐದು ಬಾರಿ ಏರಿಕೆ ಮಾಡಲಾಗಿತ್ತು. ಆದರೆ ಗೃಹ ಬಳಕೆಯ 14.2 ಕೆಜಿ, 5ಕೆಜಿ ಮತ್ತು 10 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿಲ್ಲ ಎಂದು ವರದಿ ವಿವರಿಸಿದೆ.