Advertisement
ದೇಶದಲ್ಲಿ ಅಡುಗೆ ಅನಿಲದ ಬೆಲೆ ಸದ್ಯಕ್ಕ್ಎ ಸುಮಾರತು 800 ರೂಪಾಯಿ ದಾಟಿದೆ. ಸರ್ಕಾರಿ ತೈಲ ಕಂಪನಿಗಳಿಂದ ನಿರ್ಧರಿಸಲಾಗಿರುವ ದರದ ಮೇಲೆ ನಿಮಗೆ ಡಿಸ್ಕೌಂಟ್ ಕೂಡ ಸಿಗುವುದಿಲ್ಲ. ಆದರೇ ಈ ಸುದ್ದಿ ಮಾತ್ರ ನಿಮಗೆ ನಿಜಕ್ಕೂ ಆಶ್ಚರ್ಯವನ್ನು ಉಂಟು ಮಾಡಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
Related Articles
Advertisement
ಹೌದು, ಈ ಹಣ ಪಾವತಿ ಮಾಡುವ ಆ್ಯಪ್ ಮೂಲಕ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯುವುದಕ್ಕೆ ಸಾಧ್ಯವೆಂದು ಪೇಟಿಎಂ ಹೇಳಿದೆ. ಪೇಟಿಎಂ ಮೂಲಕ ಒಂದು ವೇಳೆ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ನಿಮಗೆ ರೂ.800 ವರೆಗೆ ಒಂದು ಸ್ಕ್ರ್ಯಾಚ್ ಕಾರ್ಡ್ ಸಿಗಲಿದೆ. ಇದರಲ್ಲಿ ನಿಮಗೆ 10 ರೂ.ಗಳಿಂದ 800 ರೂ.ಗಳ ಲಾಭ ಸಿಗಲಿದೆ.
ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ ..?
ಪೇಟಿಎಂ ಓಪನ್ ಮಾಡಿ, ಷೋ ಮೊರ್ ಮೇಲೆ ಕ್ಲಿಕ್ಕಿಸಬೇಕು. ಬಳಿಕ ರಿಚಾರ್ಜ್ ಹಾಗೂ ಪೇ ಬಿಲ್ ಮೇಲೆ ಕ್ಲಿಕ್ ಮಾಡಬೇಕು. ಈಗ ‘ಬುಕ್ ಎ ಸಿಲಿಂಡರ್’ ಆಯ್ಕೆಯ ಮೇಲೆ ಒತ್ತಿ. ತದನಂತರ ನಿಮ್ಮ ಗ್ಯಾಸ್ ಪೂರೈಕೆದಾರ ಕಂಪನಿಯನ್ನು ಆಯ್ಕೆ ಮಾಡಿ. ಇದಾದ ಬಳಿಕ ನೀವು ನಿಮ್ಮ ಎಲ್ ಪಿ ಜಿ ಐಡಿ ಅಥವಾ ನಿಮ್ಮ ಅಧಿಕೃತ ಮೊಬೈಲ್ ನಂಬರ್ ನಮೂದಿಸಬೇಕು. ಪೇಮೆಂಟ್ ಆಯ್ಕೆ ಸಿಗಲಿದೆ. ಹಣವನ್ನು ಪಾವತಿಸಿದ ಬಳಿಕ ನಿಮ್ಮ ಸಿಲಿಂಡರ್ ಬುಕ್ ಆಗಲಿದೆ.
ಪೇಟಿಎಂ ನಿಡುತ್ತಿರುವ ಈ ಕ್ಯಾಶ್ ಬ್ಯಾಕ್ ಆಫರ್ ನಿಮ್ಮದಾಗಬೇಕಾದರೇ…
ಮೊದಲು ಬಾರಿಗೆ ನೀವು ಪೇಟಿಎಂ ಮೂಲಕ ಮೊದಲ ಸಿಲಿಂಡರ್ ಬುಕ್ ಮಾಡುತ್ತಿರುವುದಾಗಿರಬೇಕು. ಈ ಕೊಡುಗೆ ಮೇ 31ರವರೆಗೆ ಮಾತ್ರ ಇರಲಿದ್ದು, ಗ್ಯಾಸ್ ಬುಕಿಂಗ್ ಮಾಡಿದ 24 ಗಂಟೆಯ ಒಳಗೆ ನಿಮಗೆ ಸ್ಕ್ರ್ಯಾಚ್ ಕಾರ್ಡ್ ದೊರಕಲಿದೆ. ಇದನ್ನು ನೀವು 7 ದಿನಗಳ ಒಳಗೆ ಬಳಸಬೇಕು.
ಈ ರೀತಿಯ ಆಫರ್ ನನ್ನು ಈ ಹಿಂದಯೂ ಪೇಟಿಎಂ ನೀಡಿತ್ತು. ಇದಕ್ಕೂ ಮೊದಲು ಕೂಡ ಕಂಪನಿ ತನ್ನ ಗ್ರಾಹಕರಿಗೆ ರೂ.800ರವರೆಗೆ ಕ್ಯಾಶ್ ಬ್ಯಾಕ್ ಆಫರ್ ನನ್ನು ತಂದಿತ್ತು. ಆದರೆ ಈ ಬಾರಿ 809 ರೂ. ಸಿಲಿಂಡರ್ ಮೇಲೆ ಪೇಟಿಎಂ 800 ರೂ ವರೆಗೆ ಕ್ಯಾಶ್ ಬ್ಯಾಕ್ ನೀಡುತ್ತಿದೆ.
ಇದನ್ನೂ ಓದಿ : ಹಿರಿಯೂರು ರೈತ ಬೆಳೆದಿದ್ದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ