Advertisement
ಬಳ್ಕೂರು ಗ್ರಾಮದ ಬಳ್ಕೂರು ಕುದ್ರುವಿನಲ್ಲಿ 125 ಮನೆಗಳಿವೆ. ಸಾವಿರಾರು ಮಂದಿ ನೆಲೆಸಿದ್ದು, ಬೇರೆಲ್ಲ ಮೂಲ ಸೌಕರ್ಯ ಗಳಿದ್ದರೂ ವಿದ್ಯುತ್ ಲೋವೋಲ್ಟೆಜ್ ಸಮಸ್ಯೆಯೇ ಈ ಊರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಿಂದೆ ಈ ಭಾಗದಲ್ಲಿ ಸ್ವಲ್ಪ ಕಡಿಮೆ ಮನೆಗಳಿದ್ದವು. ಆದರೆ ಈಗ 10 ವರ್ಷಗಳಿಂದ ಇಲ್ಲಿರುವ ಮನೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಂತೆ ವಿದ್ಯುತ್ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ. ಆದರೆ ಈಗಲೂ ಆಗಿನ ಟ್ರಾನ್ಸ್‌ಫರ್ ಬಾಕ್ಸ್‌ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಲೋವೋಲ್ಟೆಜ್ ಸಮಸ್ಯೆ ಉದ್ಭವಿಸಿದೆ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.
Related Articles
ಇಲ್ಲಿನ ಜನರ ಮನವಿಗೆ ಸ್ಪಂದಿಸಿ, ಕಳೆದ 6-7 ತಿಂಗಳ ಹಿಂದೆ ಬಳ್ಕೂರು ಕುದ್ರುವಿನಲ್ಲಿ ಹೊಸದಾಗಿ ಟ್ರಾನ್ಸ್‌ಫರ್ ಬಾಕ್ಸ್‌ನ್ನು ಹಾಕಲಾಗಿದೆ. ಆದರೆ ಅದಕ್ಕಿನ್ನು ಸಂಪರ್ಕ ಭಾಗ್ಯ ಮಾತ್ರ ಒದಗಿಸಿಲ್ಲ. ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದರೆ ಇಲ್ಲಿನ ಜನರ ವಿದ್ಯುತ್ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆ ಯಾಗಬಹುದು ಎನ್ನುತ್ತಾರೆ ಗ್ರಾಮಸ್ಥರು.
Advertisement