Advertisement
ಪ್ರಚಾರ ಸಭೆಯಲ್ಲಿ ಮಾತನಾಡಿದ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಸೋಲಿನ ಹತಾಶೆಯಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯಕ್ಕೆ ತೊಡಗಿದೆ.ಇಲ್ಲಿನ ಮತದಾರರು ಬುದ್ದಿವಂತರಿದ್ದಾರೆ ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಬೆಲೆ ಕೊಡಲಾರರು.ಈ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಬೈಂದೂರು ಬಿಜೆಪಿ ಸುಳ್ಳು ಸುದ್ದಿ ಹರಡಿ ಪೇಚಿಗೆ ಸಿಲುಕಿದೆ.ಇತ್ತೀಚೆಗೆ ಸೇರ್ಪಡೆಗೊಂಡ ಜಿ.ಪಂ ಮಾಜಿ ಸದಸ್ಯ ಶಂಕರ ಪೂಜಾರಿ ಹಾಗೂ ಬಿಜೆಪಿ ಅಭ್ಯರ್ಥಿ ಖಾಸಗಿ ಕಾರ್ಯಕ್ರಮದಲ್ಲಿ ಆಕಸ್ಮಿಕ ಭೇಟಿಯಾಗಿದ್ದರು.ಈ ಸಂದರ್ಭದಲ್ಲಿ ಸಹಜವಾಗಿ ಕುಶಲೋಪರಿ ವಿಚಾರಿಸಿದ್ದಾರೆ.ಈ ಚಿತ್ರವನ್ನು ಬಳಸಿಕೊಂಡ ಬಿಜೆಪಿ ಐಟಿ ಸೆಲ್ ಕಾಂಗ್ರೆಸ್ ನ ಶಂಕರ ಪೂಜಾರಿ ಮತ್ತೆ ಬಿಜೆಪಿಗೆ ವಾಪಾಸ್ಸಾಗಿದ್ದಾರೆ ಎಂದು ಸುದ್ದಿ ಹರಡಿದ್ದರು.ಈ ಬಗ್ಗೆ ಪ್ರತಿಕ್ರಯಿಸಿದ ಶಂಕರ ಪೂಜಾರಿ ಬಿಜೆಪಿಗೆ ಅಭಿವೃದ್ದಿ ಕಾರ್ಯಗಳಿಗಿಂತ ಸುಳ್ಳು ಸುದ್ದಿ ಮೂಲಕ ಜನರನ್ನು ದಾರಿ ತಪ್ಪಿಸುವುದು ಅಭ್ಯಾಸವಾಗಿ ಬಿಟ್ಟಿದೆ.ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿಯಂತಹ ಪ್ರಾಮಾಣಿಕ ಹಾಗೂ ನಿಷ್ಟಾವಂತ ವ್ಯಕ್ತಿ ಇಡೀ ರಾಜ್ಯದಲ್ಲಿ ಕಾಣಸಿಗುವುದಿಲ್ಲ. ಕ್ಷೇತ್ರದ ಮೂಲೆ ಮೂಲೆಯಲ್ಲಿ ಅವರ ವ್ಯಕ್ತಿತ್ವ ತಿಳಿದಿದೆ.ಹೀಗಾಗಿ ಬಿಜೆಪಿ ಎಷ್ಟೆ ಅಪಪ್ರಚಾರ ಮಾಡಿದರು ಸಹ ಕ್ಷೇತ್ರದ ಮತದಾರರು ಕೆ.ಗೋಪಾಲ ಪೂಜಾರಿಯವರಂತಹ ಪ್ರಾಮಾಣಿಕ ವ್ಯಕ್ತಿಯನ್ನು ಕೈಬಿಡಲಾರರು ಎಂದರು. ಬಿ.ಎಮ್.ಸುಕುಮಾರ ಶೆಟ್ಟಿಯವರನ್ನು ಕಡೆಗಣಿಸಿದೆಯಾ ಬಿಜೆಪಿ
ಬಿಜೆಪಿ ಹಿರಿಯ ಮುಖಂಡರು ಹಾಗೂ ಬೈಂದೂರು ಬಿಜೆಪಿ ಸುಕುಮಾರ ಶೆಟ್ಟಿಯವರನ್ನು ಕಡೆಗಣಿಸಿದೆ ಹಾಗೂ ಮಾಜಿ ಶಾಸಕರ ಸಹಕಾರವಿಲ್ಲದೆ ಬಿಜೆಪಿ ಗೆದ್ದು ತೋರಿಸಬೇಕು ಎಂದು ಪಣತೊಟ್ಟಂತಿದೆ.ಸುಕುಮಾರ ಶೆಟ್ಟಿಯಂತಹ ಹಿರಿಯ ಪ್ರಾಮಾಣಿಕ ಮುಖಂಡರನ್ನು ಹೊರಗಿಟ್ಟು ಗೆಲ್ಲುವುದು ಬಿಜೆಪಿಗೆ ಕನಸಿನ ಮಾತು.ಮಾಜಿ ಶಾಸಕರು ಪ್ರಚಾರಕ್ಕೆ ಬಂದರೆ ಅವರಿಗೆ ಹಿನ್ನೆಡೆಯಾಗುತ್ತದೆ ಎನ್ನುವ ಮಾತು ಬಿಜೆಪಿಯವರಿಂದಲೆ ಕೇಳಿಬರುತ್ತಿದೆ.ಮತ್ತು ಬಿಜೆಪಿಗರ ನಡುವೆ ಪರಸ್ಪರ ನಂಬಿಕೆ ಇಲ್ಲದಂತೆ ಗುಂಪುಗಳಾಗಿದೆ.ಸುಕುಮಾರ ಶೆಟ್ಟಿ ಯವರ ಕಡೆಗಣನೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
Related Articles
ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಾರ್ಡ್ ಮಟ್ಟದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದೆ.ಪ್ರತಿ ವಾರ್ಡ್‌ನಲ್ಲೂ ಪ್ರಚಾರದಲ್ಲಿ ಕಾರ್ಯಕರ್ತರು ತಂಡೋಪತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿಯವರು ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಧರ್ಮದ ನೆನಪಾಗುತ್ತದೆ.ಕಾಂಗ್ರೆಸ್ ಅವಧಿಯಲ್ಲಿ ಕೆ.ಗೋಪಾಲ ಪೂಜಾರಿ ಯವರ ಅವಧಿಯಲ್ಲಿ ಸಾವಿರಾರು ದೈವ,ದೇವಸ್ಥಾನಗಳ ಜೀರ್ಣೋದ್ದಾರ ನಡೆಸಿದ್ದಾರೆ. ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತೇವೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
Advertisement
ಕಾಂಗ್ರೆಸ್ ದಾಖಲೆಯ ಗೆಲುವು ಸಾಧಿಸುತ್ತದೆಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಮಾತನಾಡಿ ಬೈಂದೂರು ಕ್ಷೇತ್ರದಲ್ಲಿ ಕೆ.ಗೋಪಾಲ ಪೂಜಾರಿ ಪರ ಅಪಾರ ಒಲವು ಹೊಂದಿದೆ.ಅವರ ಕೊನೆಯ ಚುನಾವಣೆಯಾದ ಕಾರಣ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾದ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಯುವಕರು ಹಾಗೂ ಹಿರಿಯರು ಪಣತೊಟ್ಟಿದ್ದಾರೆ.ಬಿಜೆಪಿಯ ಯಾವುದೇ ಸುಳ್ಳುಗಳು ಕೂಡ ಪೂಜಾರಿಯವರ ಪ್ರಾಮಾಣಿಕ ವ್ಯಕ್ತಿತ್ವದ ಮುಂದೆ ಪರಿಣಾಮ ಬೀರದು. ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದರು. ಬಿಜೆಪಿಗೆ ಬಿಸಿ ತುಪ್ಪವಾದ ಕಾಂಗ್ರೇಸ್ ಸೋಶಿಯಲ್ ಮೀಡಿಯಾ
ಕಳೆದ ಚುನಾವಣೆಯಲ್ಲಿ ಬೈಂದೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಸುಳ್ಳು ಪ್ರಚಾರ ಮೂಲಕ ಬಿಜೆಪಿ ರಾಜಕೀಯ ಲಾಭ ಮಾಡಿಕೊಂಡಿದೆ.ಮಾತ್ರವಲ್ಲದೆ ಸುಳ್ಳು ಪ್ರಚಾರ ಬಿಜೆಪಿ ಅಸ್ತ್ರ ಕೂಡ ಆಗಿದೆ.ಆದರೆ ಈ ಬಾರಿ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ತಂಡ ಬಿಜೆಪಿ ಸುಳ್ಳುಗಳನ್ನು ಬೆತ್ತಲಾಗಿಸಿದೆ. ಮತ್ತು ಭರ್ಜರಿ ಟಾಂಗ್ ನೀಡುವ ಮೂಲಕ ಜನಸಾಮಾನ್ಯರಿಗೆ ವಾಸ್ತವತೆ ತಿಳಿಸಿದೆ.ಹೀಗಾಗಿ ಬಿಜೆಪಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.ಕಾಂಗ್ರೆಸ್ ಪಕ್ಷದ ಜನಮೆಚ್ಚಿದ ವ್ಯಕ್ತಿ ಗೋಪಾಲ ಪೂಜಾರಿ ಯವರನ್ನು ಎದುರಿಸಲು ಬಿಜೆಪಿ ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರುಗಳನ್ನು ಕರೆ ತಂದಿದೆ.ಆದರೆ ಬೈಂದೂರಿನ ಮತದಾರರು ಇಲ್ಲಿನ ಮಣ್ಣಿನ ಮಗನಿಗೆ ಆಶೀರ್ವಾದ ಮಾಡುವ ಮೂಲಕ ಕೆ.ಗೋಪಾಲ ಪೂಜಾರಿ ಯವರ ಸಜ್ಜನ ವ್ಯಕ್ತಿ ಪರ ನಾವಿದ್ದೇವೆ ಎಂದು ಸಾಬೀತುಪಡಿಸುತ್ತಾರೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಹೇಳಿದ್ದಾರೆ.