Advertisement

ಕಡಿಮೆ ಹಣದುಬ್ಬರ: ಏಷ್ಯಾ ರಾಷ್ಟ್ರಗಳ ಕನಸು ಶೀಘ್ರ ಭಗ್ನ

09:11 PM Jul 27, 2022 | Team Udayavani |

ನವದೆಹಲಿ/ಮುಂಬೈ: ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಣದುಬ್ಬರ ಹೊಂದಬೇಕು ಎಂಬ ಏಷ್ಯಾ ಖಂಡದ ರಾಷ್ಟ್ರಗಳ ಕನಸು ಶೀಘ್ರವೇ ಮುಕ್ತಾಯವಾಗಲಿದೆ ಎಂದು ಮೂಡಿಸ್‌ ಇನ್ವೆಸ್ಟರ್‌ ಸರ್ವಿಸಸ್‌ ಲಿಮಿಟೆಡ್‌ನ‌ ಮೂಡಿಸ್‌ ಅನಾಲಿಟಿಕ್ಸ್‌ನ ಅಧ್ಯಯನ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

Advertisement

ಏಷ್ಯಾದ ರಾಷ್ಟ್ರಗಳಾಗಿರುವ ಥೈಲ್ಯಾಂಡ್‌, ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್‌, ಚೀನಗಳಲ್ಲಿ ಹತ್ತು ವರ್ಷಗಳಿಂದ ಹಣದುಬ್ಬರ ಪ್ರಮಾಣ ಕಡಿಮೆ ಪ್ರಮಾಣದಲ್ಲಿಯೇ ಇದೆ. ಆಯಾ ದೇಶದ ಸರ್ಕಾರಗಳು ನೀಡುವ ಸಹಾಯ ಧನ ಮತ್ತು ವಿವಿಧ ರೀತಿಯ ಬೆಂಬಲ ವ್ಯವಸ್ಥೆಗಳಿಂದ ಈ ರೀತಿಯ ಪರಿಸ್ಥಿತಿಗಳು ಉಂಟಾಗಿದ್ದವು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ಬದಲಾಗಿವೆ ಎಂದು ಮೂಡಿಸ್‌ ಅನಾಲಿಟಿಕ್ಸ್‌ನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಹೆಚ್ಚುತ್ತಿರುವ ಹಣದುಬ್ಬರದ ಪರಿಸ್ಥಿತಿಯಿಂದಾಗಿ ಆಯಾ ರಾಷ್ಟ್ರಗಳಲ್ಲಿ ಬಡ್ಡಿದರ ಪದೇ ಪದೆ ಹೆಚ್ಚಳ ಮಾಡಲಾಗುತ್ತಿದೆ. ಹೀಗಾಗಿ, ಕಡಿಮೆ ಪ್ರಮಾಣದ ಹಣದುಬ್ಬರ ಎಂಬ ವಿಚಾರವೇ ಬದಲಾಗಲಿದೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.

ಚಿಕನ್‌ ದರ ಇಳಿಕೆ; ಗೋಧಿ ದರ ಏಳಿಕೆ:
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೋಳಿ ಮಾಂಸದ ಬೆಲೆ ಪ್ರತಿ ಕೆಜಿ 115 ರೂ.ಗಳಿಂದ 60 ರೂ. ಇಳಿಕೆಯಾಗಿದೆ. 15 ದಿನಗಳ ಅವಧಿಯಲ್ಲಿ ಈ ಬೆಳವಣಿಗೆಯಾಗಿದೆ ಎಂದು ಭಾರತದ ಕೋಳಿ ಸಾಕಣೆದಾರರ ಸಂಘದ ಸಂಚಾಲಕ ವಸಂತ ಕುಮಾರ್‌ ಶೆಟ್ಟಿ ಹೇಳಿದ್ದಾರೆ.

ಉತ್ತರ ಭಾರತದಲ್ಲಿ ಜು.15ರಿಂದಲೇ ಶ್ರಾವಣ ಮಾಸ ಶುರುವಾಗಿರುವುದರಿಂದ ಮಾಂಸದ ಬೆಲೆಯಲ್ಲಿ ಇಳಿಕೆಯಾಗಿದೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಲ್ಲಿ ಈ ಬೆಳವಣಿಗೆಯಾಗಲಿದೆ.

Advertisement

ಇನ್ನೊಂದೆಡೆ ಕೇಂದ್ರ ಸರ್ಕಾರ ಗೋಧಿಯ ರಫ್ತು ಮೇಲೆ ನಿಷೇಧ ಹೇರಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಏರಿಕೆಯಾಗಿದೆ. ರೈತರು ತಮ್ಮ ಬಳಿ ಸಂಗ್ರಹಿಸಿ ಇರಿಸಿದ್ದ ಬೆಳೆಯನ್ನು ಮಾರಿದ್ದರಿಂದ ಹೀಗಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next