Advertisement

ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರ

11:27 PM Aug 10, 2019 | mahesh |

ವಿವಿಧ ರೀತಿಯ ಸಾವಯವ ಗೊಬ್ಬರಗಳನ್ನು ಕಡಿಮೆ ಖರ್ಚಿನಲ್ಲಿ ಹಿತ್ತಿಲಿನಲ್ಲಿಯೇ ತಯಾರಿಸಿ ಕೃಷಿಗೆ ಬಳಸ ಬಹುದು. ಇದರಿಂದ ಬೆಳೆಗಳ ಉತ್ಪಾದನ ವೆಚ್ಚವು ಕಡಿಮೆಯಾಗುವುದು.

Advertisement

ಪೈಪ್‌ ಕಾಂಪೋಸ್ಟ್‌
ಪೈಪ್‌ ಕಾಂಪೋಸ್ಟ್‌ ಸರಳವಾದ ಜೈವಿಕ ಗೊಬ್ಬರ ತಯಾರಿಕಾ ವಿಧಾನ. ಮನೆಯಲ್ಲಿ ಉತ್ಪತ್ತಿಯಾಗುವ ತರಕಾರಿ, ಮಾಂಸದ ತ್ಯಾಜ್ಯ ಸಹಿತ ಇತರ ಮಾಲಿನ್ಯಗಳು ಮಣ್ಣಿ ನೊಡನೆ ಸೇರಿ ಕೊಳೆತು ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಉತ್ಪಾದನೆ ಯಾಗಿ ಸಾಂಕ್ರಾಮಿಕ ರೋಗ ಗಳಿಗೆ ಕಾರಣ  ವಾ ಗುತ್ತವೆ. ಅದನ್ನು ತಡೆಯಲು ಮನೆಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ತ್ಯಾಜ್ಯದ ಸುಲಭ ವಿಲೇವಾರಿಗೆ ಪೈಪ್‌ ಕಾಂಪೋಸ್ಟ್‌ ವಿಧಾನ ಬಹಳ ಉಪಯುಕ್ತ.

ಇದರಿಂದ ಲಭಿಸಿದ ಸಾವಯವ ಗೊಬ್ಬರವನ್ನು ಮನೆಯ ಹೂ, ತರಕಾರಿ ಸಹಿತ ಇನ್ನಿತರ ಬೆಳೆಗಳಿಗೆ ಬಳಸಬಹುದು. ತ್ಯಾಜ್ಯಗಳನ್ನು ತೆರೆದ ಸ್ಥಳದಲ್ಲಿ ಎಸೆಯದೆ ಇಂತಹ ಕಾಂಪೋಸ್ಟ್‌ ಮಾಡುವುದರಿಂದ ಸೊಳ್ಳೆ ಇನ್ನಿತರ ಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದಲೂ ಮುಕ್ತರಾಗಬಹುದು. ಪೈಪ್‌ ಕಾಂಪೋಸ್ಟ್‌ ವ್ಯವಸ್ಥೆ ಅಳವಡಿಸಲು ಒಟ್ಟು ಒಂದೆರಡು ಸಾವಿರ ರೂ. ವೆಚ್ಚ ತಗಲುತ್ತದೆ.

ಅಡಿಕೆ ಸಿಪ್ಪೆಯಿಂದ ಗೊಬ್ಬರ
ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸಿ ಬಳಸಿದರೆ ಕೈತೋಟಗಳಿಗೆ ಬಹಳಷ್ಟು ಪೋಷಕಾಂಶಗಳು ದೊರೆಯುತ್ತವೆ. ಇದು ಹಟ್ಟಿ ಗೊಬ್ಬರಕ್ಕಿಂತ ಹೆಚ್ಚು ಉಪಯುಕ್ತ. ಹೆಚ್ಚು ಪೋಷಕಾಂಶ ಇರುವುದರಿಂದ ಬೆಳೆಗಳಿಗೂ ಹೆಚ್ಚು ಉಪಯುಕ್ತ. ಇದರಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ಮಣ್ಣಿನಲ್ಲಿ ನೀರಿನಂಶ ಸಮೃದ್ಧವಾಗಿರುವಂತೆ ಮಾಡುತ್ತದೆ.

15 ಅಡಿ ಉದ್ದ, 5 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ನಿರ್ಮಿಸಿ, ಒಣಗಿದ ಅಡಿಕೆ ಸಿಪ್ಪೆ, ತರಗೆಲೆ, ಸೊಪ್ಪು ಕೊಳೆತು ಮಣ್ಣಿನಲ್ಲಿ ಸೇರುವ ಇತರ ತ್ಯಾಜ್ಯಗಳನ್ನು ಹಾಕಬೇಕು. 10 ಕೆಜಿ ಎರೆಹುಳು, 25-30 ಬುಟ್ಟಿ ಒಣ ಸೆಗಣಿ ಹುಡಿ ಹಾಕಿ ಅದಕ್ಕೆ ಚೆನ್ನಾಗಿ ಒದ್ದೆಯಾಗುವಷ್ಟು ನೀರು ಚಿಮುಕಿಸಬೇಕು. ಬಳಿಕ ಅದರಮೇಲೆ ಸುಮಾರು 50-60 ಬುಟ್ಟಿಗಳಷ್ಟು ಕೆಂಪು ಮಣ್ಣು ಹಾಕಿ ಐದಾರು ತಿಂಗಳುಗಳ ಕಾಲ ಹಾಗೇ ಬಿಡಬೇಕು.

Advertisement

ಗುಡ್ಡೆ ಪದ್ಧತಿ
ಗುಡ್ಡೆಯಲ್ಲಿ ಲಭಿಸುವ ವಿವಿಧ ಜಾತಿಯ ಸೊಪ್ಪು, ತರಗೆಲೆ, ಮಣ್ಣು, ನೀರು ಬಳಸಿ ಇದನ್ನು ತಯಾರಿಸಲಾಗುತ್ತದೆ. ಸುಮಾರು 15 ಅಡಿ ಉದ್ದ, 5 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ನಿರ್ಮಿಸಿ, ಅದಕ್ಕೆ ನೀರು ಚಿಮುಕಿಸಿ, ವಿವಿಧ ಜಾತಿಯ ಸೊಪ್ಪು, ತರಗೆಲೆ, ಮಣ್ಣನ್ನು ಸ್ವಲ್ಪ ಸ್ವಲ್ಪವೇ ಬೇರೆಬೇರೆ ಪದರಗಳಾಗಿ ಹಾಕಿ ನೀರು ಚಿಮುಕಿಸಿ ಕೊಳೆಯುವಂತೆ ಮಾಡಬೇಕು.

ಸಾಮಾನ್ಯ ಕಾಂಪೋಸ್ಟ್‌ ಗೊಬ್ಬರ
ಕೊಳೆತ ತರಕಾರಿ, ತರಕಾರಿ – ಹಣ್ಣುಗಳ ಸಿಪ್ಪೆ, ಉಳಿದ, ಹಳಸಿದ ಆಹಾರ, ಅನ್ನದ ಗಂಜಿ, ಅಕ್ಕಿ, ತರಕಾರಿ ತೊಳೆದ ನೀರು ಇತ್ಯಾದಿ ಅಡುಗೆ ಮನೆ ತ್ಯಾಜ್ಯ ಮತ್ತು ಮನೆ ಪರಿಸರದಲ್ಲಿ ಸಿಗುವ ಹೂವು, ಆಕಳ ಗಂಜಲ, ಹಟ್ಟಿ ತೊಳೆದ ನೀರು, ಹಸಿ ಸೆಗಣಿ ಇತ್ಯಾದಿ ಮಣ್ಣಿನಲ್ಲಿ ಕೊಳೆಯು ತಾಜ್ಯಗಳನ್ನು ಬಳಸಿ ಸಾಮಾನ್ಯ ಕಾಂಪೋಸ್ಟ್‌ ಗೊಬ್ಬರ ತಯಾರಿಸಲಾಗುತ್ತದೆ.

ಸುಮಾರು 10 ಅಡಿ ಉದ್ದ, 5 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ನಿರ್ಮಿಸಿ, ಪ್ರತಿ ನಿತ್ಯ ಮನೆಗಳಲ್ಲಿ ಉತ್ಪತ್ತಿಯಾದ ಬೇರೆಬೇರೆ ತ್ಯಾಜ್ಯಗಳನ್ನು ಹಾಕಿ ಅವುಗಳ ಮೇಲೆ ಪ್ರತಿ ದಿನ ಸ್ಪಲ ಮಣ್ಣು ಹರಡಬೇಕು. ಬಳಿಕ ಚೆನ್ನಾಗಿ ನೀರು ಚಿಮುಕಿಸಿ ಕೊಳೆಯುವಂತೆ ಮಾಡಬೇಕು.

ತಯಾರಿಸುವ ವಿಧಾನ
ಒಂದು ಮೀ. ಉದ್ದದ 20 ಸೆಂ.ಮೀ. ವ್ಯಾಸದ 2 ಪಿವಿಸಿ ಅಥವಾ ಸಿಮೆಂಟ್‌ ಪೈಪ್‌ ಬಳಸಿ ಕಾಂಪೋಸ್ಟ್‌ ತಯಾರಿಸಲಾಗುತ್ತದೆ. ಎರಡು ಪೈಪ್‌ಗ್ಳನ್ನು ಪ್ರತ್ಯೇಕವಾಗಿ 30 ಸೆಂ.ಮೀ. ಮಣ್ಣಿನ ತಳದಲ್ಲಿ ಹೂಳಬೇಕು. ಈ ಪೈಪ್‌ ಒಳಗಡೆ ನಿತ್ಯ ಮಾಲಿನ್ಯಗಳನ್ನು ಹಾಕಿ ಪ್ರತ್ಯೇಕ ಮುಚ್ಚಳದಿಂದ ಮುಚ್ಚುವುದರ ಜತೆಗೆ ಒಂದಷ್ಟು ಸೆಗಣಿ ನೀರು, ಮಜ್ಜಿಗೆ ನೀರು ಅಥವಾ ಬೆಲ್ಲದ ನೀರು ಯಾ ಸಕ್ಕರೆ ನೀರನ್ನು ಚಿಮುಕಿಸಬೇಕು. ಹೀಗೆ ಒಂದು ತಿಂಗಳಾಗುತ್ತಿದ್ದಂತೆ ಒಂದು ಪೈಪ್‌ ಭರ್ತಿಯಾಗುತ್ತದೆ. ಬಳಿಕ ಎರಡನೇ ಪೈಪ್‌ ತುಂಬುತ್ತಿದ್ದಂತೆ ಮೊದಲಿನ ಪೈಪ್‌ನೊಳಗಿನ ಮಾಲಿನ್ಯ ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ.

 ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next