Advertisement

ಕಲ್ಲಿದ್ದಲು ಕೊರತೆ: ಸಂಕಷ್ಟದಲ್ಲಿ ಇಂಧನ ಕ್ಷೇತ್ರ

10:23 PM Oct 05, 2021 | Team Udayavani |

ನವದೆಹಲಿ: ದೇಶದ ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಕಚ್ಚಾವಸ್ತುವೆನಿಸಿರುವ ಕಲ್ಲಿದ್ದಲು ಸಂಗ್ರಹಣಾಗಾರದಲ್ಲಿ ಇರುವ ಕಲ್ಲಿದ್ದಲು ದಾಸ್ತಾನು ಕೇವಲ ನಾಲ್ಕು ದಿನಗಳ ಮಟ್ಟಿಗೆ ಸಾಕಾಗುವಷ್ಟಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

Advertisement

ದೇಶದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ. 70ರಷ್ಟು ಉತ್ಪಾದನೆ ಕಲ್ಲಿದ್ದಲು ಆಧಾರಿತ ಸ್ಥಾವರಗಳಲ್ಲಿ ಆಗುತ್ತದೆ. ಆದರೆ, ಆಗಸ್ಟ್‌ ಮಧ್ಯಭಾಗದಿಂದಲೇ ಈ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಆವರಿಸಿದೆ. ಕೊರತೆಯಿಂದಾಗಿ ಕಲ್ಲಿದ್ದಲು ಬೆಲೆಯೂ ಹೆಚ್ಚಾಗಿದ್ದು, ಅದರಿಂದಾಗಿ ವಿದ್ಯುತ್‌ ಶುಲ್ಕವೂ ಹೆಚ್ಚಾಗಿದೆ.

ಇದೆಲ್ಲದಕ್ಕೆ ಮೂಲ ಕಾರಣ, ಕಲ್ಲಿದ್ದಲು ಗಣಿಗಾರಿಕಾ ಕ್ಷೇತ್ರದ ಚಟುವಟಿಕೆ ಗಣನೀಯವಾಗಿ ಕುಸಿದಿರುವುದು. ಕೋವಿಡ್‌ ನಿರ್ಬಂಧಗಳಿದ್ದಾಗ ಈ ಕ್ಷೇತ್ರದ ಚಟುವಟಿಕೆ ನಿಂತಿತ್ತು. ನಿರ್ಬಂಧಗಳನ್ನು ತೆರವುಗೊಳಿಸಿದ ಮೇಲೆ ಸುರಿದ ಅಗಾಧ ಮಳೆಯಿಂದಾಗಿ ಕಲ್ಲಿದ್ದಲು ಗಣಿಗಾರಿಕೆ ಜಾಗಗಳು ಹಾಗೂ ಕಲ್ಲಿದ್ದಲು ಸಾಗಾಟದ ಮಾರ್ಗಗಳು ಪ್ರವಾಹಕ್ಕೆ ತುತ್ತಾದವು. ಹೀಗಾಗಿ, ಕಲ್ಲಿದ್ದಲು ಗಣಿಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮೈಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next