Advertisement

ಸುಂದರಗೊಳ್ಳಲಿದೆ ಲವ್ಲಿನಾ ಹಳ್ಳಿಯ ಕಳಪೆ ರಸ್ತೆ!

10:14 PM Aug 03, 2021 | Team Udayavani |

ಗುವಾಹಟಿ: 69 ಕೆಜಿ ಮಹಿಳಾ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ಗೇರಿರುವ ಅಸ್ಸಾಂನ ಲವ್ಲಿನಾ ಬೊರ್ಗೊಹೇನ್‌ಗೆ ಕನಿಷ್ಠ ಕಂಚು ಬರುವುದಂತೂ ಖಾತ್ರಿಯಾಗಿದೆ.

Advertisement

ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಆಕೆ ಗೆದ್ದರೆ ಚಿನ್ನ, ಬೆಳ್ಳಿಗಾಗಿಯೂ ಯತ್ನಿಸಬಹುದು. ಅದಿರಲಿ, ಹೊಸ ಸುದ್ದಿಯೇನೆಂದರೆ ಅಸ್ಸಾಂನ ಗೋಲಘಾಟ್‌ ಜಿಲ್ಲೆಯಲ್ಲಿರುವ ಆಕೆಯ ಹಳ್ಳಿಯ ಬಾರೊಮುಥಿಯದಲ್ಲಿ ರಸ್ತೆ ಪೂರ್ಣ ಹಾಳಾಗಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಯೇ ಅದಕ್ಕೆ ಕಾರಣ. ಇದೀಗ ಜಿಲ್ಲಾಡಳಿತ ಈ ರಸ್ತೆಯ ದುರಸ್ತಿಗೆ ಮುಂದಾಗಿದೆ. ಇದುವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆ ರಸ್ತೆಗೆ ಲವ್ಲಿನಾ ಕಾರಣಕ್ಕೆ ಮುಕ್ತಿಯ ಸಿಕ್ಕಿದೆ. ಲವ್ಲಿನಾ ಪದಕದೊಂದಿಗೆ ಹಳ್ಳಿಗೆ ವಾಪಸಾಗುವಾಗ ಈ ಕಳಪೆ ರಸ್ತೆಯೇ ಸುದ್ದಿಗೆ ಗ್ರಾಸವಾಗಬಾರದು ಎನ್ನುವುದು ಇಲ್ಲಿನ ಕಳಕಳಿ. ಒಟ್ಟು 3.5 ಕಿ.ಮೀ. ದೂರದ ಈ ರಸ್ತೆಯನ್ನು ನಿರ್ಮಿಸಲು ಸ್ಥಳೀಯ ಶಾಸಕ ಬಿಸ್ವಜಿತ್‌ ಫ‌ುಕನ್‌ ಖುದ್ದು ಆಸಕ್ತಿ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next