Advertisement
ಇಂಥ ಸಾಧಕರ ಬಗ್ಗೆ ಯೋಚಿಸುವಾಗ ಭಾರತದ ಸೆನ್ಸೇಶನಲ್ ಯುವ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ನೆನಪಾಗುತ್ತಾಳೆ. ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಒಂದು ವೇಳೆ ಚಿನ್ನ ಗೆದ್ದಿದ್ದರೆ ಇತಿಹಾಸ ನಿರ್ಮಿಸುತ್ತಿದ್ದರು. ಆದರೂ ಕಂಚಿನ ಪದಕ ಗೆದ್ದ ಲವ್ಲಿನಾ, ವಿಜೇಂದರ್ ಸಿಂಗ್ ಮತ್ತು ಮೇರಿ ಕೋಮ್ ಅನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ದೇಶದ 3ನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
23 ವರ್ಷದ, ವಿಶ್ವ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಲವ್ಲಿನಾ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ ಅಸ್ಸಾಂನ ಮೊದಲ ವನಿತಾ ಬಾಕ್ಸರ್ ಆಗಿದ್ದಾರೆ. ಕಳೆದ ವರ್ಷ ಕೊರೊನಾದಿಂದಾಗಿ ಯೂರೋಪ್ ಅಭ್ಯಾಸ ಶಿಬಿರವನ್ನು ಮಿಸ್ ಮಾಡಿಕೊಂಡಿದ್ದ ಲವ್ಲಿನಾ, ಮನೆಯಲ್ಲೇ ಗ್ಯಾಸ್ ಸಿಲಿಂಡರ್ ಎತ್ತುವ ಮೂಲಕ ಅಭ್ಯಾಸ ನಡೆಸಿದ್ದನ್ನು ಮರೆಯುವಂತಿಲ್ಲ. ಲವ್ಲಿನಾ ಅಕ್ಕ ಕೂಡ ಬಾಕ್ಸರ್ ಆಗಿದ್ದಾರೆ. ತಂದೆ ಸಣ್ಣ ಮಟ್ಟದ ವ್ಯಾಪಾರ ನಡೆಸುತ್ತಿದ್ದಾರೆ. ಕೋಚ್ ಪದುಮ್ ಬೋರೊ ಮಾರ್ಗದರ್ಶನದಲ್ಲಿ ಲವ್ಲಿನಾ ಬಾಕ್ಸಿಂಗ್‌ನಲ್ಲಿ ಪ್ರಗತಿ ಸಾಧಿಸುತ್ತ ಬಂದರು. ಬಾರೊ ಮುಖೀಯಾ ಗ್ರಾಮದಿಂದ ಗುವಾಹಟಿಗೆ ಆಗಮಿಸಿ ಯಶಸ್ಸಿನ ಮೆಟ್ಟಿಲೇರತೊಡಗಿದರು. ಈಗ ಇತಿಹಾಸದ ನಿರ್ಮಿಸಿದ್ದಾರೆ.
Advertisement
ಕೃಷಿ ಕಾರ್ಯದಲ್ಲೂ ಮುಂದುಬಾಕ್ಸಿಂಗ್ ಹೊರತಾಗಿಯೂ ಲವ್ಲಿನಾ ಭತ್ತದ ಗದ್ದೆಗೆ ಇಳಿದು ಸ್ವತಃ ನಾಟಿ ಮಾಡಿದ್ದಲ್ಲದೆ ಇತರ ಕೃಷಿ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿ ಕೊಂಡಿದ್ದಾಳೆ. ಕಳೆದ ಕೊರೊನಾ ಸಮಯದಲ್ಲಿ ತನ್ನ ತಂದೆ ಜತೆ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ತಂದೆಗೆ ನೆರವಾಗಿದ್ದಳು. ಅದೃಷ್ಟ ಬದಲಾಯಿಸಿದ ಏಷ್ಯಾನ್ ಕ್ರೀಡಾಕೂಟ
ಬಾಕ್ಸಿಂಗ್ ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದ ಲವ್ಲಿನಾಗೆ ಪಾಟಿಯಾಲಯದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ತೋರಿದ ಸಾಧನೆಯು ಅವರಿಗೆ ಟೋಕಿಯೋದ ಬಾಗಿಲು ತೆರೆಯುವಂತೆ ಮಾಡಿತು. ಒಲಿಂಪಿಕ್ಸ್ ಆರಂಭಿಕ ಸುತ್ತಿನಿಂದಲೂ ಕಠಿಣ ಸವಾಲುಗಳು ಎದುರಾದರೂ ಕೂಡ ಅವುಗಳೆಲ್ಲವನ್ನೂ ಮೆಟ್ಟಿ ನಿಂತ ಲವ್ಲಿನಾ ಸೆಮಿಫೈನಲ್‌ನಲ್ಲಿ ಸೋಲು ಕಂಡರೂ ಕೂಡ ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಊರಿಗೆ ರಸ್ತೆ
ಒಂದೆಡೆ ಲವ್ಲಿನಾ ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದು ಭಾರತದ ಇತಿಹಾಸದ ಪುಟಗಳಲ್ಲಿ ಮೈಲುಗಲ್ಲು ನೆಟ್ಟರೆ. ಇನ್ನೊಂದಡೆ ಎಷ್ಟೋ ವರ್ಷಗಳಿಂದ ಉತ್ತಮ ರಸ್ತೆಯನ್ನೇ ಕಾಣದ ಅಸ್ಸಾಂನ ಗೋಲಘಾಟ್ ಜಿಲ್ಲೆಯಲ್ಲಿರುವ ಆಕೆಯ ಹಳ್ಳಿಯಾದ ಬಾರೊಮುಥಿ ಕುಗ್ರಾಮಕ್ಕೆ ಈಗ ಹೊಸ ಕಳೆ ಬಂದಿದೆ. ಈ ಗ್ರಾಮಕ್ಕೆ ಈಗ ರಾಜಕಾರಣಿಗಳು ಹಾಗೂ ಸ್ಥಳೀಯ ಮುಖಂಡರು ಡಾಮಾರು ರಸ್ತೆ ನಿರ್ಮಿಸುವ ಮೂಲಕ ಆಕೆಯ ಸಾಧನೆಯನ್ನು ಕೊಂಡಾಡಿ ಗೌರವ ಸೂಚಿಸಿದ್ದಾರೆ. ಈ ಮೂಲಕ ಲವ್ಲಿನಾ ತನ್ನ ಊರಿನ ಜನತೆಯ ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ನೆನಪಾಗಿರಲಿದ್ದಾಳೆ. *ಅಭಿ