Advertisement

ಕಳೆದ 8 ವರ್ಷ  ಕುಟುಂಬದಿಂದ ದೂರವಿದ್ದೆ: ಲವ್ಲಿನಾ

10:34 PM Aug 09, 2021 | Team Udayavani |

ಹೊಸದಿಲ್ಲಿ: “ಬರೋಬ್ಬರಿ ಎಂಟು ವರ್ಷ ಮನೆಯಿಂದ ದೂರ ಇದ್ದೆ. ಅಪ್ಪ, ಅಮ್ಮ, ಕುಟುಂಬದವರ ಕಷ್ಟ ಸುಖದಲ್ಲಿ ಭಾಗಿಯಾಗಲೂ ಸಾಧ್ಯವಾಗಿರಲಿಲ್ಲ. ದೂರದಿಂದಲೇ ಎಲ್ಲವನ್ನು ನೋಡಬೇಕಾಗಿತ್ತು. ಇದು ನಾನು ಮಾಡಿದ ಬಹು ದೊಡ್ಡ ತ್ಯಾಗ…’ ಎಂದು ಟೋಕಿಯೊ ಒಲಿಂಪಿಕ್ಸ್‌ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಲವ್ಲಿನಾ ಬೊರ್ಗೊಹೇನ್‌ ಅವರ ನುಡಿಗಳಿವು.

Advertisement

ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತ ನಾಡಿದ 23 ವರ್ಷದ ಲವ್ಲಿನಾ ಬೊರ್ಗೊಹೇನ್‌, “ಹೊರಗಡೆ ಸುತ್ತಾಡಬೇಕು, ನೋಡಿದ್ದನ್ನೆಲ್ಲ ತಿನ್ನ ಬೇಕೆಂಬ ನನ್ನ ವಯೋಮಾನದವರಿಗೆ ಸಾಕಷ್ಟು ಆಸೆಗಳಿರುತ್ತವೆ. ಅದನ್ನೆಲ್ಲ ಬದಿಗೊತ್ತಿದ್ದೆ. ಎಂಟು ವರ್ಷಗಳಲ್ಲಿ ಒಂದೇ ಒಂದು ದಿನವೂ ತರಬೇತಿಯಿಂದ ದೂರ ಉಳಿದಿಲ್ಲ. ಕುಳಿತರೂ, ನಿಂತರೂ ಬಾಕ್ಸಿಂಗ್‌ ಬಗ್ಗೆಯೇ ಯೋಚಿಸುತ್ತಿದ್ದೆ’ ಎಂದರು.

“ಟೋಕಿಯೊ ಕೂಟ ಮುಗಿದ ಅಧ್ಯಾಯ. 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ನಡೆಯಲಿದೆ. ಅಲ್ಲಿ ಪದಕ ಗೆಲ್ಲಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಾರಿ ಏನೆಲ್ಲ ತಪ್ಪುಗಳನ್ನು ಮಾಡಿದ್ದೇನೆ ಎಂಬುದನ್ನು ಪತ್ತೆಹಚ್ಚಿ ತಿದ್ದಿಕೊಳ್ಳಬೇಕು. ಜತೆಗೆ ಇನ್ನಿತರ ಹೊಸ ತಂತ್ರಗಳನ್ನು ಕಲಿಯಬೇಕು. ಅದಕ್ಕೂ ಮುನ್ನ ಚಿಕ್ಕ ಬಿಡುವು ಪಡೆಯುತ್ತೇನೆ’ ಎಂದು ಲವ್ಲಿನಾ ಹೇಳಿದರು.

“ಒಲಿಂಪಿಕ್ಸ್‌ನಂತಹ ಮಹಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರಲು ಭಾವನೆಗಳನ್ನೆಲ್ಲ ಕಟ್ಟಿಹಾಕಿದ್ದೆ. ಅಂತರಂಗದಲ್ಲಿ ಹುದುಗಿದ್ದ ಅವು ಪಂದ್ಯ ಗೆದ್ದಾಗ ಒಂದೊಂದಾಗಿಯೇ ಅಭಿವ್ಯಕ್ತಗೊಳ್ಳುತ್ತಿದ್ದವು. ನನ್ನಲ್ಲಿ ಯಾವುದೇ ಬದಲಾ ವಣೆಗಳನ್ನೂ ಮಾಡಿಕೊಳ್ಳುವುದಿಲ್ಲ ಆದರೆ ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕದ ಬಣ್ಣವನ್ನು ಬದಲಿಸುತ್ತೇನೆ’ ಎಂದು ಲವ್ಲಿನಾ ಆತ್ಮವಿಶ್ವಾಸದಿಂದ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next