ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ಪದಕ ಗೆದ್ದ ಭಾರತಕ್ಕೆ ಮತ್ತೆ ಯಾವುದೇ ಪದಕ ಸಿಕ್ಕಿಲ್ಲ. ಆದರೆ ಇದೀಗ ಮತ್ತೊಂದು ಪದಕದ ಭರವಸೆ ಮೂಡಿದೆ. ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೆಮಿ ಫೈನಲ್ ತಲುಪಿದ್ದಾರೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ನಿಯಾನ್ ಚಿನ್ ವಿರುದ್ಧ 4-1 ಅಂಕಗಳ ಅಂತರದಿಂದ ಲವ್ಲೀನಾ ಪಂದ್ಯ ಗೆದ್ದರು. ಹೀಗಾಗಿ ಭಾರತಕ್ಕೆ ಕನಿಷ್ಠ ಕಂಚಿನ ಪದಕವಾದರೂ ಖಚಿತವಾಗಿದೆ.
ಇದನ್ನೂ ಓದಿ:ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ
ಸೆಮಿ ಫೈನಲ್ ನಲ್ಲಿ ಲವ್ಲೀನಾ ಅವರು ಟರ್ಕಿಯ ಬುಸೆನಜ್ ಸುರ್ಮೆನೆಲಿ ವಿರುದ್ಧ ಸೆಣಸಾಡಲಿದ್ದಾರೆ. ಒಲಿಂಪಿಕ್ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಕೇವಲ ಎರಡನೇ ಬಾಕ್ಸರ್ ಎಂಬ ಗೌರವಕ್ಕೆ ಪಾತ್ರರಾಗಿಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಮೇರಿ ಕೋಮ್ ಪದಕ ಗೆದ್ದಿದ್ದರು.
ಭಾರತದ ವೇಟ್ ಲಿಫ್ಟರ್ ಮೀರಾ ಬಾಯ್ ಚಾನು ಜುಲಯ 24ರಂದು ಬೆಳ್ಳಿ ಪದಕ ಗೆದ್ದಿದ್ದರು. ಇದು ಭಾರತ ಈ ಒಲಿಂಪಿಕ್ಸ್ ನಲ್ಲಿ ಗೆದ್ದ ಏಕೈಕ ಪದಕ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನದಲ್ಲಿದೆ.