ನವದೆಹಲಿ: ಕೃತಕ ಬುದ್ಧಿಮತ್ತೆ ಎನ್ನುವುದು ಮನುಷ್ಯನ ಜೀವನವನ್ನು ಎಲ್ಲ ವಿಧದಲ್ಲೂ ಆವರಿಸಿಕೊಳ್ಳುತ್ತಿದೆ. ಅದೀಗ ಕೃಷಿಗೂ ಕಾಲಿಟ್ಟಿದೆ. ಪಂಜಾಬ್‌ನ ಎಲ್‌ಪಿಯು (ಲವ್ಲೀ ಪ್ರೊಫೆಶನಲ್ ಯೂನಿವರ್ಸಿಟಿ) ವಿಶ್ವವಿದ್ಯಾಲಯದ ಇಬ್ಬರು ಪಿಎಚಿx ವಿದ್ಯಾರ್ಥಿಗಳಾದ ಮಹೇಂದ್ರ ಸ್ವೆ„ನ್ ಮತ್ತು ವಾಸಿಂ ಅಕ್ರಮ್ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಅದ ರಲ್ಲಿ ಕೃಷಿಭೂಮಿಯ ಫಲವತ್ತತೆ, ನೀರಿನ ಪ್ರಮಾಣ, ತೇವಾಂಶ ಗೊತ್ತಾಗಲಿದೆ. ಅಷ್ಟು ಮಾತ್ರವಲ್ಲ ಇದರಲ್ಲಿ ಸಂಗ್ರಹವಾಗುವ ಮಾಹಿತಿ ಮೂಲಕ ಪರಿಸ್ಥಿತಿಯನ್ನೂ ಯಂತ್ರ ತಾನಾ ಗಿಯೇ ವಿಶ್ಲೇಷಿಸಲಿದೆ. ಯಂತ್ರಕ್ಕೆ ಅಂತರ್ಜಾಲ ದ ನೆರವು ಬೇಕಿಲ್ಲ ಎನ್ನುವುದು ಗಮನಾರ್ಹ.
ಯಂತ್ರದಲ್ಲಿ ಸೆನ್ಸರ್ ಅಳವಡಿಸಲಾಗಿದೆ. ಅವು ಮಾಹಿತಿಯನ್ನು, ಪರಿಸ್ಥಿತಿಯನ್ನು ತಿಳಿಸಿಕೊಡಲಿವೆ. ಕೈಯಲ್ಲಿ ಹಿಡಿದುಕೊಳ್ಳಬಹು ದಾದ ಸಾಧನವೊಂದರಲ್ಲಿ ಎಲ್‌ಸಿಡಿ ಪರದೆಯಿದೆ. ಅದರ ಮೂಲಕ ಹೊಲದ ಸ್ಥಿತಿಗತಿಯ ಮಾಹಿತಿ ಸಿಗುತ್ತದೆ.
ರೈತರಿಗೇನು ಲಾಭ?: ಈ ಸಾಧನವನ್ನು ಬಳಸಿ ರೈತ ಮಣ್ಣಿನ ಫಲವತ್ತತೆಯನ್ನು ಕಂಡುಕೊಳ್ಳಬಹುದು. ನೀರಿನ ಮಟ್ಟ ಎಷ್ಟಿದೆ? ತೇವಾಂಶ ಎಷ್ಟಿದೆ? ಉಷ್ಣಾಂಶ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದರ ಮೂಲಕ ನೀರಿನ ಪಂಪ್‌ಗ್ಳನ್ನು, ಸ್ಪ್ರಿಂಕ್ಲರ್‌ಗಳನ್ನು ನಿಯಂತ್ರಿಸಬಹುದು. ಯಂತ್ರದಲ್ಲಿ ಸಿಗುವ ಅಂಕಿಅಂಶದ ಸಹಾಯದಿಂದ ಈ ಗದ್ದೆಯಲ್ಲಿ ಯಾವ ಬೆಳೆ ಬೆಳೆಯಬಹುದು ಎಂಬ ಸಲಹೆಯೂ ಸಿಗುತ್ತದೆ. ಇದನ್ನು ಆಧುನಿಕ ಮತ್ತು ಸಾಂಪ್ರದಾಯಿಕ ಮಾದರಿ ಈ ಎರಡೂ ಕೃಷಿಪದ್ಧತಿಯಲ್ಲಿ ಬಳಸಬಹುದು.
ಸದ್ಯ ಯಂತ್ರದ ಪೇಟೆಂಟ್ ಹಕ್ಕುಗಳಿಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅದನ್ನು ರಾಜೇಶ್ ಸಿಂಗ್, ಅನಿತಾ ಗೆಹೊÉàಟ್ ಎಂಬ ಇಬ್ಬರು ಪ್ರಾಧ್ಯಾಪಕರು ಪರಿಶೀಲನೆ ಮಾಡುತ್ತಿದ್ದಾರೆ.