Advertisement

ಕೊಹ್ಲಿ, ಅನುಷ್ಕಾ ರೆಸ್ಟೋರೆಂಟ್‌!

12:00 PM Sep 20, 2017 | |

ಹೊಸದಿಲ್ಲಿ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಪ್ರೇಮಿಗಳು ಅನ್ನುವುದು ಎಲ್ಲರಿಗೂ ಗೊತ್ತು. ಈ ಜೋಡಿ ಇನ್ನೂ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಆದರೆ ಈಗಾಗಲೇ ಇಬ್ಬರು ಜತೆಯಾಗಿ ರೆಸ್ಟೋರೆಂಟ್‌ ಒಂದನ್ನು ಶೀಘ್ರದಲ್ಲಿಯೇ ತೆರೆಯಲಿದ್ದಾರೆ ಎನ್ನಲಾಗಿದೆ. ಆಂಗ್ಲ ಮಾಧ್ಯಮವೊಂದು ಈ ಸುದ್ದಿಯನ್ನು ಪ್ರಕಟಿಸಿದೆ. 

Advertisement

ರೆಸ್ಟೋರೆಂಟ್‌ ಆರಂಭಿಸಲು ಇವರಿಬ್ಬರೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಈಗಾಗಲೇ ಹೊಸದಿಲ್ಲಿ, ಮುಂಬಯಿಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next