Advertisement
ಈ ಬದಲಾವಣೆಯ ಹಿಂದೆ ನಾವೆಷ್ಟು ಶ್ರಮವಹಿಸಿದ್ದೇವೆಂದು ಮತ್ತು ನಿಗಾವಹಿಸಿದ್ದೇವೆಂದು ನಮ್ಮನ್ನು ಬಿಟ್ಟರೆ ಬೇರೆ ಯಾರಿಂದಲ್ಲೂ ಊಹೆ ಮಾಡಲು ಸಹಾ ಸಾಧ್ಯವಿಲ್ಲ. ಬದಲಾವಣೆಯಲ್ಲಿ ಪ್ರೀತಿ ಕಾರಣವಾದರೆ ಅದರ ಸೊಬಗನ್ನು ವರ್ಣಿಸಲು ಪದಗಳೇ ಸಾಲದು. ನಮ್ಮ ಮನಸ್ಸು ಒಳಗೊಳಗೇ ಪ್ರೇಮ ಮಂತ್ರವನ್ನು ಜಪಿಸುತ್ತಿರುತ್ತದೆ.
Related Articles
Advertisement
ಮೊನ್ನೆ ಒಬ್ಬ ಪರಮ ಪ್ರೇಮಿಯ ಬಳಿ ಕೇಳಿದೆ . ನೀನು ಹಲವು ಬಾರಿ ನೋಡಿದ ಒಂದೇ ಚಲನಚಿತ್ರ ಯಾವುದೆಂದು ? ಆತ ನಾಚಿಕೆಕೊಂಡು ಉತ್ತರಿಸಿದ ಗಾಳಿಪಟ ಅಂತ! ಇಂತಹ ಕೆಲವು ಚಲನಚಿತ್ರಗಳು ಕೇವಲ ಪ್ರೀತಿಗೆಂದೇ ಮಿಸಲೀಡುತ್ತಿದ್ದರು ಆದರೆ ಬರು ಬರುತ್ತಾ ಕತ್ತಿ, ಮಚ್ಚು ಲಾಂಗ್‌ಗಳಿಂದ ಕೂಡಿದ ಚಲನಚಿತ್ರಗಳಿಂದಾಗಿ ಪ್ರೀತಿಯ ನಿಜ ಅರ್ಥವನ್ನು ತಿಳಿಯಲು ಅಸಾಧ್ಯವಾಗುತ್ತಿದೆ. ಇಂಥ ಮಾಧ್ಯಮಗಳ ಪ್ರಭಾವವೋ ಏನೋ ಗೊತ್ತಿಲ್ಲ ಇಂದಿನ ಯುವಜನರ ಪ್ರೀತಿಯು ಮೊದಲು ಶುರುವಾಗುವುದು ಗೆಳತನದಿಂದ!
ಆ ಗೆಳತನವು ನಂತರದ ದಿನಗಳಲ್ಲಿ ಪ್ರೀತಿಯಾಗಿ ಪರಿವರ್ತಿಸುತ್ತದೆ. ಓಡುವ ಇಂದಿನ ಯುಗದಲ್ಲಿ ಪ್ರೀತಿಯೂ ಬಹುಶಃ ಫಾಸ್ಟ್ ಫಾಸ್ಟ್ ಎಂದರೆ ತಪ್ಪಗಲಾರದು. ಪ್ರೀತಿಸುವ ಇಬ್ಬರಲ್ಲೂ ಯೋಜನೆಗಳಲ್ಲಿ, ಆಸಕ್ತಿಗಳಲ್ಲಿ, ಅರ್ಥಮಾಡಿಕೊಳ್ಳುವ ಸಾಮಥ್ಯದಲ್ಲಿ ಸಮಾನ ಮನಸ್ಥಿತಿ ಇಲ್ಲವಾದರೆ ಅದು ಕೇವಲ ದೈಹಿಕ ಸುಖವನಷ್ಟೇ ನೀಗಿಸಬಲ್ಲುದು. ಇದನ್ನು ಪ್ರೀತಿ ಅಂತ ಒಪ್ಪಿಕೊಳ್ಳಬಹುದೆ? ಇದೊಂದು ಮಾಮೂಲಿ ಕ್ರಿಯೆಯಾಗಿಬಿಡುತ್ತದೆ. ನಿನಗೆ ಕೋಪ ಬಂದಾಗ ಮಾತನಾಡಬೇಡ ಹಾಗೆಯೇ ಅವಳಿಗೆ ಕೋಪ ಬಂದು ಮಾತನಾಡುವಾಗ ಯಾವುದನ್ನೂ ಗಂಭಿರವಾಗಿ ತೆಗೆದುಕೊಳ್ಳಬೇಡ ಆಗ ನಿನ್ನ ಪ್ರೀತಿ ಚಿರಕಾಲ ಉಳಿಯುವುದು, ಇಂತಹ ಮನಸ್ಥಿತಿ ಪ್ರತಿಯೊಬ್ಬ ಪ್ರೇಮಿಗಳಲ್ಲಿಯೂ ಇದ್ದರೆಮೂರು ಅರು ತಿಂಗಳಲ್ಲೇ ಭಗ್ನ ಗೊಳ್ಳುವ ಪ್ರೀತಿ ಶಾಶ್ವತವಾಗಿ ಉಳಿಯಬಹುದು. ವಿದ್ಯಾರ್ಥಿ ಜೀವನದಲ್ಲೂ ನಮಗೊಬ್ಬರು ಇಂತಹ ಸಂಗಾತಿ ಸಿಕ್ಕರೆ ಜೀವನ ಪೂರ್ತಿ ಅವರನ್ನು ಮುದ್ದು ಮಾಡಿ ಬಾಳಿನ ಕೊನೆಯ ತನಕ ಜೀವಂತವಾಗಿಟ್ಟುಕೊಳ್ಳಬೇಕೆಂದು ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರೀತಿಯ ಬಲೆಗೆ ಬಿದ್ದ ಮಾತ್ರಕ್ಕೆ ಹೆತ್ತವರು ತಮ್ಮ ಮಕ್ಕಳನ್ನು ದೋಷಿಸುವುದು , ಮನೆಯಿಂದ ಆಚೆಗೆ ಹಾಕುವುದು. ಓದಿ : ಆಹಾರ ಮತ್ತು ಇಂಧನ ಬೆಲೆಗಳ ಹೆಚ್ಚಳ: ಚಿಲ್ಲರೆ ಹಣದುಬ್ಬರ ಶೇ. 5.03ಕ್ಕೆ ಏರಿಕೆ..! ಮಾತು ಮುರಿಯುವುದು ದೊಡ್ಡ ಪಾಪ. ಪ್ರೀತಿಯು ಒಂದು ರೀತಿಯಲ್ಲಿ ಮಳೆಯ ಹಾಗೆ ಅದು ಜೀವನದ ಫಲವತ್ತತೆ ಹೆಚ್ಚಿಸಬಲ್ಲದು. ನಮ್ಮ ಜಂಜಾಟದ ಬದುಕಿಗೆ ಆರಮ ಒದಗಿಸಬಲ್ಲದು. ಪ್ರೀತಿ ಕುರಡು, ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿಲ್ಲ. ನಾಟಕಗಾರ ವಿಲಿಯಂ ಶೇಕ್ಸ್ಪಿಯರ್ ಅವರು ಪ್ರೀತಿಸಿ ಮದುವೆಯಾದದ್ದು ಅವರಿಗಿಂತ ಎಂಟು ವರ್ಷ ಹಿರಿಯರಾಗಿದ್ದವಳನ್ನು! ಇತ್ತಿಚಿಗೆ ಮದುವೆಯಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೂಡ ಪ್ರೀತಿಸಿ ಮದುವೆಯಾಗಿದ್ದು ತನಗಿಂತ ಹತ್ತು ವರ್ಷ ಸಣ್ಣವರನ್ನು! ಹಾಗಿದ್ದರೆ ಪ್ರೀತಿಗೆ ವಯಸ್ಸಿನ ಕಟ್ಟುಪಾಡುಗಳೇನೂ ಬೇಡ ಬೀಡಿ. ಜಾತಿ ಧರ್ಮದ ಪರಿಧಿಗೂ ನಿಲುಕದ ವಿಚಾರ ಈ ಪ್ರೀತಿ. ಪ್ರೀತಿ ಹುಟ್ಟಿದ ಹೊಸದರಲ್ಲಿ ಹಳೆಯ ಚಿತ್ರಗೀತೆಗಳನ್ನು ಮತ್ತೇ ಮತೇ ಕೇಳಬೇಕೆಂದು ಅನಿಸುತ್ತದೆ. ಕತ್ತಲೆ ತುಂಬಿದ ಫಿಲಂ ಥಿಯೇಟರ್ ಜಗಮಗಿಸುವ ಬೆಳಕಾಗಿ ಹತ್ತಿರವಾಗಿ ಬಿಡುವುದು. ರಸ್ತೆ ಬದಿಯ ಪಾನಿಪೂರಿ ತಿನ್ನಬೇಕೆಂದು ನಾಲಗೆ ಚಪ್ಪರಿಸುವುದು, ಇವನೆಲ್ಲ ನೋಡುತ್ತಾ ನೋಡುತ್ತಾ ಅನಿಸುತ್ತೆ, ನಾವು ಈಗಲೇ ಮದುವೆಯಾಗಬೇಕೆಂದು. ಇನ್ನೂ ಕೇಲವರಿಗೆ ಅನಿಸುತ್ತೆ ನಾವು ಕೊನೆವರೆಗೂ ಪ್ರೇಮಿಗಳಾಗಿರಬೇಕೆಂಬುದು. ಕಣ್ಣಿಗೆ ಸಿಕ್ಕ ಎಲ್ಲರ ಹೃದಯಕ್ಕೆ ಹತ್ತಿರವಾಗದೇ. ಸಿಕ್ಕಿದ ಎಲ್ಲರನ್ನೂ
ಪಡೆಯಲು ಸಾಧ್ಯವಿಲ್ಲವಾದರೂ, ನಮ್ಮ ಹೃದಯಕ್ಕೆ ಹತ್ತಿರವಾದ ಒಬ್ಬರನ್ನು ಎಂದಿಗೂ ಮರೆಯಬಾರದು…. ಹೀಗೆ ಮಹಾನ್ ಪ್ರೇಮಿಗಳ ಪ್ರೀತಿಯನ್ನು ಅನುಕರಣೆ ಮಾಡದೆ ನಮ್ಮದೇ ಶೈಲಿಯಲ್ಲಿ ಪ್ರೀತಿಯನ್ನು ಪ್ರಾಮಾಣಿಕವಾಗಿ ಕಟ್ಟುವ ಪ್ರಯತ್ನ ಮಾಡುವುದೆಂದರೇ, ನಿಜಾವಾದ ಪ್ರೀತಿ ಅಲ್ಲವೇ. –ಪ್ರಥ್ವಿನಿ ಡಿಸೋಜ
ಆಳ್ವಾಸ್ ಕಾಲೇಜ್, ಮೂಡುಬಿದಿರೆ. ಓದಿ : ಬೆಂಗಳೂರಿನಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ‘ ಇಂಗ್ಲೀಷ್’