Advertisement
ಸಮಯ ನೀಡಿ…ಮಗ, ಸೊಸೆ ಅಥವಾ ಮಗಳು-ಅಳಿಯ ನೌಕರಿಯೆಂದು ದಿನವೂ ಬಿಜಿ ಇದ್ದರೆ, ಮೊಮ್ಮಕ್ಕಳು ಶಾಲೆ, ಕಾಲೇಜು, ಫ್ರೆಂಡ್ಸ್ ಅಂತ ತಮ್ಮದೇ ಲೋಕದಲ್ಲಿರುತ್ತಾರೆ. ಆಗ ಹಿರಿಜೀವಗಳಿಗೆ ಒಂಟಿತನ ಕಾಡುವುದು ಸಹಜ. ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಕಳೆಯುವ ಅವರಿಗೆ ನಿಮ್ಮ ದಿನದ ಒಂದೆರಡು ಗಂಟೆಯನ್ನು ಮೀಸಲಿಡಿ. ಆಫೀಸಿನಿಂದ, ಶಾಲೆಯಿಂದ ಬಂದಮೇಲೆ ಅವರ ಜೊತೆ ಕುಳಿತು ಮಾತನಾಡಿ.
ವಯಸ್ಸಾದವರು ಹೇಳಿದ್ದನ್ನೇ ಪದೇ ಪದೇ ಹೇಳುತ್ತಿ ರುತ್ತಾರೆ. ವೃದ್ಧಾಪ್ಯಕ್ಕೆ ಮರೆವು ಜೊತೆಯಾಗುವುದರಿಂದ ಹೀಗಾಗುತ್ತದೆ. ಹೇಳಿದ್ದನ್ನೇ ಹೇಳುತ್ತಾರಲ್ಲ ; ಅದರಿಂದ ನಿಮಗೆ ಕಿರಿಕಿರಿಯಾಗಬಹುದು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ವರ್ತಿಸಿ. ಆರೋಗ್ಯ ತಪಾಸಣೆ ಮಾಡಿ…
“ನನಗೇನಾಗಿದೆ? ಚೆನ್ನಾಗಿಯೇ ಇದ್ದೇನಲ್ಲಾ…?’ ಇದು ವೃದ್ಧರು ಹೇಳುವ ಮಾತು. ಈಗಲೂ ಕೆಲಸ ಮಾಡುತ್ತೇನೆ, ಬೆಳಗ್ಗೆ ವಾಕ್ ಹೋಗುತ್ತೇನೆ, ಬಿಪಿ-ಶುಗರ್ ಇಲ್ಲ ಅಂತೆಲ್ಲ ಹೇಳಿ ಆಸ್ಪತ್ರೆಗೆ ಹೋಗುವುದಿಲ್ಲ, ಅವರ ಮನವೊಲಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಕರೆದೊಯ್ಯಿರಿ.
Related Articles
ತಮ್ಮದೇ ವಯಸ್ಸಿನವರೊಂದಿಗೆ ಹರಟೆ ಹೊಡೆಯುವುದ ರಿಂದ ಹಿರಿಯರಿಗೆ ಖುಷಿ ಸಿಗುತ್ತದೆ. ಸಮವಯಸ್ಕರ ಕ್ಲಬ್, ಸಂಘಟನೆ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ಬಂಧ ಹೇರಬೇಡಿ.
Advertisement
ರಿಮೋಟ್ ಅವರಿಗೂ ಸಿಗಲಿಹಿರಿಯರಿಗೆ ಯೋಗ, ಪೌರಾಣಿಕ ಸಿನೆಮಾ, ಅಧ್ಯಾತ್ಮ ಪ್ರವಚನದಂಥ ಕಾರ್ಯಕ್ರಮಗಳು ಇಷ್ಟವಾಗುತ್ತವೆ. ಟಿವಿ ನೋಡುವ ಸಮಯದಲ್ಲಿ ಕೆಲಹೊತ್ತು ಅವರಿಗೂ ಆಯ್ಕೆಯ ಸ್ವಾತಂತ್ರ್ಯ ನೀಡಿ. ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯಿರಿ…
ದೇವಾಲಯಕ್ಕೆ ಅಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡಿದರೆ ವೃದ್ಧರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೀವನದ ಇಳಿಸಂಜೆಯಲ್ಲಿ ಅವರ ಒಲವು ಅಧ್ಯಾತ್ಮದ ಕಡೆ ವಾಲುವುದು ಸಾಮಾನ್ಯ. ಹಾಗಾಗಿ ಪ್ರಯಾಣಕ್ಕೆ ಆಯಾಸದಾಯಕವಲ್ಲದ ಧಾರ್ಮಿಕ ಕ್ಷೇತ್ರಗಳಿಗೆ ಅವರೊಂದಿಗೆ ಭೇಟಿ ಕೊಡಿ. ಹಿರಿಯರನ್ನು ನಿರ್ಲಕ್ಷಿಸಬೇಡಿ…
ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ, ವಯಸ್ಸಾಗಿದೆ ಎಂಬ ಕಾರಣ ನೀಡಿ ಹಿರಿಯರನ್ನು ನಿರ್ಲಕ್ಷಿಸಬೇಡಿ. ಬದಲಿಗೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರಲ್ಲಿ ಸಲಹೆ ಕೇಳಿ. ಅವರ ಅನುಭವಕ್ಕೆ ಬೆಲೆ ಕೊಡಿ. ಮಾಲಾ ಮ. ಅಕ್ಕಿಶೆಟ್ಟಿ