ಹೊಸದಿಲ್ಲಿ: ಪ್ರೀತಿ ಅಂದರೆ ಅದು ಭಾವನೆಗಳ ಬೆಸುಗೆ. ತನ್ನನ್ನು ಮೆಚ್ಚಿಕೊಂಡ, ತಾನು ಮೆಚ್ಚಿಕೊಳ್ಳುತ್ತಿರುವವರಿಗಾಗಿ ಏನು ಬೇಕಾದರೂ ಮಾಡುವ ಉತ್ಸಾಹ. ನನ್ನವನಿಗೆ/ನನ್ನವಳಿಗೆ ತಾನು ನಿವೇದಿಸಿಕೊಳ್ಳುವ ಪ್ರೇಮ ಬಹುಕಾಲ ನೆನಪಿನಲ್ಲಿ ಉಳಿಯಬೇಕು ಎಂಬುದು ಪ್ರತಿಯೊಬ್ಬ ಪ್ರೇಮಿಗಳ ಹೆಬ್ಬಯಕೆ. ಅದು ಅವರಿಬ್ಬರ ಪ್ರೀತಿಯ ದ್ಯೋತಕವಾಗಿರುತ್ತದೆ.
ಇಲ್ಲಿ ಅಮೆರಿಕ ತಾಂಜೇನಿಯಾದಲ್ಲಿ ನಡೆದ ಘಟನೆಯೊಂದು ಜಗತ್ತಿನ ಪ್ರೇಮಿಗಳ ಮನಸ್ಸನ್ನು ನೋಯಿಸದೇ ಬಿಡದು. ಸ್ಟೀವನ್ ವೆಬರ್ ಮತ್ತು ಅವರ ಗರ್ಲ್‌ಫ್ರೆಂಡ್ ಕೆನೆಶಾ ಅವರಿಬ್ಬರು ಬಹುಕಾಲದ ಸ್ನೇಹಿತರು. ಒಬ್ಬರಿಗೊಬ್ಬರು ಬಿಟ್ಟಿರಲಾಗದ ಅನೋನ್ಯತೆ ಕ್ರಮೇಣ ಪ್ರೀತಿಯತ್ತ ವಾಲಿತ್ತು.
ರಜಾದಿನದಲ್ಲಿ ಒಬ್ಬರನ್ನು ಒಬ್ಬರು ತಪ್ಪದೇ ಭೇಟಿಯಾಗುತ್ತಿದ್ದರು. ಒಂದಷ್ಟು ಸಮಯವನ್ನು ಜತೆಯಾಗಿಯೇ ಕಳೆಯುತ್ತಿದ್ದರು. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ “ಹ್ಯಾಪಿ ಪ್ಯಾಮಿಲಿ’.
ಕಳೆದ ಬಿಡುವಿನ ದಿನ ಇವರಿಬ್ಬರು ಪೆಂಬಾ ದ್ವೀಪದ ಮಾಂಟಾ ರೆಸಾರ್ಟ್‌ನಲ್ಲಿ ನಡೆದ ಘಟನೆ ಇದು.ಬೋಟ್‌ನಲ್ಲಿ ತೆರಳಿದ್ದರು. ಅದು ಅಂಡರ್ ವಾಟರ್‌ನಲ್ಲಿ ರೂಮ್‌ಗಳನ್ನು ಹೊಂದಿರುವ ಬೋಟ್. ಬೋಟ್ ಒಳಗೆ ಒಂದಷ್ಟು ಸಂತೋಷದ ಸಮಯಗಳನ್ನು ಇವರಿಬ್ಬರು ಹಂಚಿಕೊಂಡಿದ್ದರು. ತಾನು ಇಷ್ಟ ಪಡುತ್ತಿರುವ ಹುಡುಗಿಯ ಬಳಿ ಈ ತನಕ ಪ್ರೇಮ ನಿವೇದಿಸಿಕೊಳ್ಳದೇ ಇದ್ದ ಸ್ಟೀವನ್ ಈ ದಿನವನ್ನು ಅದಕ್ಕಾಗಿ ವಿನಿಯೋಗಿಸಿಕೊಳ್ಳುವ ಕಾರಣಕ್ಕೆ ಬೋಟ್ ಮೂಲಕ ಪ್ರಯಾಣದ ಮೊರೆ ಹೋಗಿದ್ದರು.
ಸ್ಟೀವನ್ ವೆಬರ್ ಇದಕ್ಕಿದ್ದಂತೆ ಬೋಟ್‌ನಿಂದ ನೀರಿಗೆ ಜಿಗಿಯುತ್ತಾರೆ. ಗೆಳತಿ ಇರುವ ಅಂಡರ್ ವಾಟರ್ ರೂಮ್‌ನ ಕಿಟಕಿ ಬಳಿ ಬಂದು ತನ್ನ ಪ್ರೇಮ ನಿವೇದನೆ ಮಾಡಲು ಆರಂಭಿಸುತ್ತಾರೆ. ಗೆಳತಿ ರೂಂನ ಒಳಗಿದ್ದು, ಗಾಜಿನಿಂದ ಕೂಡಿದ ಕಿಟಗಿಯ ಬಳಿ ಸ್ವೀವನ್ ಬಂದು ಪ್ಲಾಸ್ಟಿಕ್‌ನಿಂದ ಲ್ಯಾಮಿನೇಶನ್ ಮಾಡಿದ ಒಂದು ಕಾಗದಲ್ಲಿ ತಮ್ಮ ನಡುವಿನ ಭಾವನೆಗೆ ಅಕ್ಷರ ರೂಪ ನೀಡಿ ತನ್ನ “ಲವ್ ಪ್ರಪೋಸ್’ ಮಾಡಿದ್ದಾನೆ.
“ಐ ಕಾಂಟ್ ಹೋಲ್ಡ್ ಮೈ ಬ್ರೆಥ್ ಲಾಂಗ್ ಇನಫ್ ಟು ಟೆಲ್ ಯು ಎವ್ರಿತಿಂಗ್, ಐ ಲವ್ ಅಬೌಟ್ ಯು. ಬಟ್ ಎವ್ರಿಥಿಂಗ್ ಐ ಲವ್ ಅಬೌಟ್ ಯೂ, ಐ ಲವ್ ಮೋರ್ ಎವ್ರಿ ಡೇ’ ಎಂದು ಬರೆದಿದ್ದಾರೆ. ಈ ವೇಳೆ ತನ್ನ ಜೇಬಿಂದ ಎಂಗೇಜ್‌ಮೆಂಟ್ ಉಂಗುರವನ್ನು ತೋರಿಸುತ್ತಾ ತನ್ನ ಪ್ರೇಮ ನಿವೇಧನೆಯನ್ನು ಹುಡುಗಿಯ ಮುಂದೆ ಇಡುತ್ತಾನೆ.
ಗೆಳೆಯನ ಪ್ರೇಮ ನಿವೇದನೆಗೆ ಸಮ್ಮತಿಸಿ, ತನ್ನ ಪ್ರತಿಕ್ರಿಯೆಯನ್ನು ಕೆನೆಶಾ ತಿಳಿಸುವಷ್ಟರಲ್ಲಿ ಅವನು ನೀರಿನಲ್ಲಿ ಮರೆಯಾಗಿದ್ದಾನೆ. ಈ ದೃಶ್ಯವನ್ನು ವೀಡಿಯೋ ಮಾಡಿಕೊಂಡಿದ್ದ ಕೆನೆಶಾ ಅವರು ತಮ್ಮ ಫೋನ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ತನ್ನ ಫೇಸ್‌ಬುಕ್‌ನಲ್ಲಿ ಭಾರವಾದ ಭಾವನೆಗಳೊಂದಿಗೆ ಹಂಚಿಕೊಂಡಿದ್ದಾರೆ.
“ಹೌದು ಮಿಲಿಯನ್ ಟೈಮ್ಸ್ ಐ ಲವ್ ಯೂ, ಐ ಮ್ಯಾರಿ ಯೂ’ ಎಂದು ಕೆನೆಶಾ ಅವರು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಾರೆ. ತನ್ನ ಮತ್ತು ಸ್ಟೀವನ್ ಅವರ ಗೆಳೆತನವನ್ನು ಕೊಂಡಾಡಿದ ಅವರು ಈ ದುರ್ಘನೆ ಘಟಿಸುವುದಕ್ಕೆ ಮೊದಲು ಅವರು ಜತೆಯಾಗಿ ಕಳೆದಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಸುಂದರ ನಾಳೆಗಳನ್ನು ನಮಗೆ ಜತೆಯಾಗಿ ಹಂಚಿಕೊಳ್ಳುವ ಭಾಗ್ಯ ದೊರೆತಿಲ್ಲ. ನಮ್ಮ ಸಂತೋಷದ ದಿನಗಳು ದುಃಖದ ದಿನಗಳಾಗಿ ಬದಲಾಯಿತು. ಈ ಪರಿಸ್ಥಿತಿ ನಮಗೆ ಬರುತ್ತದೆ ಎಂದೂ ಊಹಿಸಲೂ ಅಸಾಧ್ಯವಾಗಿದೆ. ನಾವು ಜತೆಯಾಗಿ ಕಳೆದ ಕ್ಷಣಗಳಲ್ಲಿ ನಾವು ಪಟ್ಟ ಅಮಿತ ಸಂಭ್ರಮದಿಂದಲೇ ನಾನಿಂದು ಏಕಾಂಗಿಯಾಗಿ ದುಃಖ ಪಡುವ ಸಂದರ್ಭ ಬಂದಿದೆ. ಈ ಲೋಕದಲ್ಲಿ ಸ್ಟೀವನ್ ಜೀವಂತನಾಗಿರುತ್ತಾನೆ ಎಂಬದು ಅಕೆಯ ಮನಸ್ಸಿನ ಧ್ವನಿಯಾಗಿ ಉಳಿದಿದೆ.