Advertisement
ಸಾಮಾನ್ಯವಾಗಿ ಲವ್‌ಸ್ಟೋರಿ ಚಿತ್ರಗಳಲ್ಲಿ ಇದೆಲ್ಲಾ ಮಾಮೂಲು ಎಂದು ಭಾವಿಸಬೇಡಿ. ಈ ಚಿತ್ರದಲ್ಲೊಂದು ಟ್ವಿಸ್ಟ್ ಇದೆ. ಹಿರಿಯ ನಿರ್ದೇಶಕ ಡಿ.ರಾಜೇಂದ್ರಬಾಬು ಅವರು ಎಲ್ಲಾ ತರಹದ ಚಿತ್ರಗಳನ್ನೂ ಕಟ್ಟಿಕೊಟ್ಟವರು. “ಕುಚ್ಚಿಕೂ ಕುಚ್ಚಿಕು’ ಈಗಿನ ಟ್ರೆಂಡ್‌ಗೆ ಅಂತಾನೇ ಮಾಡಿದ್ದಾರೆ. ಎಲ್ಲಾ ಲವ್‌ಸ್ಟೋರಿಗಳಲ್ಲಿ ಇರುವಂತೆ ಇಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಪ್ರೇಮಿಗಳ ಆಟ-ತಿರುಗಾಟ, ಮನೆಯವರ ವಿರೋಧ, ಹೃದಯಗಳ ತಳಮಳ ಎಲ್ಲವೂ ಇದೆ.
Related Articles
Advertisement
ಇದು ಗ್ಯಾರೇಜ್ ಗೆಳೆಯನನ್ನು ಬೈಕ್‌ರೇಸ್ ಚಾಂಪಿಯನ್ ಆಗಿಸುವ ಶ್ರೀಮಂತ ಗೆಳೆಯೊಬ್ಬನ ಕಥೆ. ಗ್ಯಾರೇಜ್ ಮೆಕಾನಿಕ್ ಗೆಳೆಯ ಪ್ರೀತಿಗೆ ಬಿದ್ದು, ಆ ಪ್ರೀತಿ ಗಟ್ಟಿಯಾಗಿ, ಆ ಹುಡುಗಿಯ ಹೆತ್ತವರ ವಿರೋಧದಿಂದ ಮುರಿದು ಬಿದ್ದ ಮೇಲೆ, ಬದುಕನ್ನೇ ಹಾಳು ಮಾಡಿಕೊಂಡು ಅಲೆದಾಡುವ ಆ ಗೆಳೆಯನನ್ನು ಪುನಃ ಹುಡುಕಿ ಅವನಿಗೊಂದು ನೆಲೆ ಕಟ್ಟಿಕೊಡುವ ಆಪ್ತ ಗೆಳೆಯ. ಅವನ ಪ್ರೀತಿಯನ್ನೂ ಹುಡುಕಿ ಕೊಡ್ತಾನಾ ಅನ್ನೋದೇ ಕಥೆ.
ಇಲ್ಲಿ, ಪ್ರೀತಿ ಕಳೆದುಕೊಂಡು, ಹುಚ್ಚನಂತಾದ ಬೈಕ್ ರೇಸರ್, ಕೊನೆಗೆ ಸರಿದಾರಿಗೆ ಬರುತ್ತಾನಾ? ಅವನ ಪ್ರೀತಿ ಅವನಿಗೆ ದಕ್ಕುತ್ತಾ ಎಂಬ ಕುತೂಹಲವಿದ್ದರೆ, “ಗೆಳೆಯರ’ ಆತ್ಮೀಯತೆ ಮತ್ತು ಪ್ರೀತಿಯನ್ನು ನೋಡಬಹುದು. ಪ್ರವೀಣ್ ಬೈಕ್ ರೇಸರ್ ಆಗಿ ಗಮನಸೆಳೆಯುತ್ತಾರೆ. ಡ್ಯಾನ್ಸ್ ಹಾಗೂ ಫೈಟ್‌ನಲ್ಲೂ ಹಿಂದೆ ಬಿದ್ದಿಲ್ಲ. ಜೆಕೆ ಸಿಕ್ಕ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ.
ನಕ್ಷತ್ರ (ದೀಪ್ತಿ) ಪ್ರತಿಭೆ ಅನಾವರಣಗೊಂಡಿದೆ. ರಮೇಶ್ ಭಟ್, ಸುಮಿತ್ರ ಅವರು ಅಪ್ಪ ಅಮ್ಮನಾಗಿ ಇಷ್ಟವಾಗುತ್ತಾರೆ. ಭುವನ್, ಮನೋಜ್, ಸುಂದರ್‌ರಾಜ್ ಸೇರಿದಂತೆ ಇತರರು ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಂಸಲೇಖ ಅವರ ಸಂಗೀತದ ಒಂದು ಹಾಡು ಇಷ್ಟವಾಗುತ್ತದೆ. ನಂದಕುಮಾರ್ ಅವರ ಛಾಯಾಗ್ರಹಣ ಕುಚ್ಚಿಕೂ ಗೆಳೆಯರ ಕಲರವ ಹೆಚ್ಚಿಸಿದೆ.
ಚಿತ್ರ: ಕುಚ್ಚಿಕೂ ಕುಚ್ಚಿಕುನಿರ್ದೇಶನ: ಡಿ.ರಾಜೇಂದ್ರ ಬಾಬು
ನಿರ್ಮಾಣ: ಎನ್. ಕೃಷ್ಣಮೂರ್ತಿ
ತಾರಾಗಣ: ಪ್ರವೀಣ್, ನಕ್ಷತ್ರ (ದೀಪ್ತಿ), ಜೆಕೆ, ಪವನ್, ಸುಮಿತ್ರ, ರಮೇಶ್‌ಭಟ್, ಸುಂದರ್‌ರಾಜ್, ಭುವನ್, ಮನೋಜ್ ಇತರರು. * ವಿಜಯ್ ಭರಮಸಾಗರ