ಹುಬ್ಬಳ್ಳಿ: ಕೌಟುಂಬಿಕ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಾಯನಾಳ ಗ್ರಾಮ ಪಂಚಾಯತ್ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಸೋಮವಾರ ರಾತ್ರಿ ರಾಯನಾಳ ಬಳಿ ನಡೆದಿದೆ.
ರಾಯನಾಳ ಗ್ರಾ.ಪಂ ಸದಸ್ಯ ಗಂಗಿವಾಳ ಗ್ರಾಮದ ದೀಪಕ ಪಠದಾರಿ ಹತ್ಯೆಯಾಗಿದ್ದು, ಮೇಟಿ ಕುಟುಂಬಸ್ಥರೇ ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ದೀಪಕನು ರಾಯನಾಳ ಗ್ರಾಮದ ಮೇಟಿ ಕುಟುಂಬದ ಮಹಿಳೆಯನ್ನು ಕುಟುಂಬದವರ ಕಟು ವಿರೋಧಗಳ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ. ಇದೇ ದ್ವೇಷದಿಂ ಈ ಕುಟುಂಬದವರು ಸೋಮವಾರ ರಾತ್ರಿ ಬೈಕ್ ನಲ್ಲಿ ದೀಪಕ್ ಹೋಗುತ್ತಿದ್ದ ವೇಳೆ ರಾಯನಾಳ ಬಳಿ 8-10 ಜನರ ಗುಂಪು ಮಾರಕಾಸ್ತ್ರಗಳಿಂದ ಮನ ಬಂದಂತೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆ: ಆತಂಕಗೊಂಡ ಜನ
Related Articles
ಸ್ಥಳಕ್ಕೆ ಡಿಸಿಪಿ ಸಾಹಿಲ ಬಾಗ್ಲಾ, ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಅಶೋಕ ಚವ್ಹಾಣ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.