Advertisement
ಬದುಕಿನ ಎಲ್ಲ ಕ್ಷಣಗಳನ್ನು ಆವರಿಸಿಕೊಂಡಂತೆ ಪ್ರೇಮವು ಅಧಿಪತ್ಯ ಸ್ಥಾಪಿಸುವುದು ಹದಿಹರೆಯದಲ್ಲಿ. ಅದಕ್ಕೇ ವಿದ್ಯಾಭ್ಯಾಸ ಪಡೆಯುವ ಈ ಅವಧಿಯಲ್ಲಿ ಪ್ರೇಮವು ಹತ್ತಿರ ಸುಳಿಯದಂತೆ ಎಚ್ಚರದಿಂದ ಇರಬೇಕು ಎಂದು ಹಿರಿಯರು ಅನೇಕ ಕಟ್ಟುಕಟ್ಟಳೆಗಳನ್ನು ಮಾಡಿದ್ದರು.ಹದಿಹರೆಯದ ಪ್ರೇಮವು ವಾಸ್ತವ ಜಗತ್ತಿನ ಅರಿವಿಲ್ಲದೇ ಕುಡಿಯೊಡೆಯುವ ಚಿಗುರು.
Related Articles
Advertisement
ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ವಧುವಿನ ಮನಸ್ಸಿನಲ್ಲಿ ತುಮುಲ ಆತಂಕ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಬಂಧುಗಳು, ಹೆಜ್ಜೆ ಹೆಜ್ಜೆಗೂ ವಿಶ್ವಾಸದ ಮಾತುಗಳನ್ನು ಹೇಳುವ ಅತ್ತೆ, ಮಾವ ಅಥವಾ ಅತ್ತೆ ಮನೆಯಲ್ಲಿರುವ ಬಂಧುಗಳು, ಹೊಸ ಸಂಪ್ರದಾಯ, ರೀತಿ-ರಿವಾಜುಗಳನ್ನು ಕಲಿಯುವ ಹುಮ್ಮಸ್ಸಿಗೆ ಪ್ರೋತ್ಸಾಹದ ಧಾರೆ ಎರೆಯುವ ಪತಿ, ಜೊತೆಗೆ ಆಸರೆಯಾಗಿ ನಿಲ್ಲುವ ಅಮ್ಮನ ಫೋನ್ ಕಾಲ್. ಹೀಗೆ ಈ ಹಾದಿಯಲ್ಲಿ ಭದ್ರತೆಯ ಬಲ ಸಿಕ್ಕಿಬಿಡುವುದು. ಆಗ ನಮ್ಮೂರು ಚಂದವೋ ನಿಮ್ಮೂರು ಚಂದವೋ ಎಂದೆನ್ನ ಕೇಳಲೇಕೇ… ಎನ್ನುವ ಪತಿಯ ಜೊತೆಗೆ ಹೊಸದಾರಿಯ ಅಂದಚೆಂದವನ್ನೂ ನೋಡಲು, ಕಲಿಯಲು ವಧು ಹವಣಿಸುತ್ತಾಳೆ.
ಸಂತೋಷದಲ್ಲಿ ಮಾತ್ರವಲ್ಲ, ದುಃಖ ದಲ್ಲಿಯೂ ಗಂಡನ ಮನೆಯವರು ಜೊತೆಯಾಗುವ ಅನೇಕ ಸಂದರ್ಭಗಳನ್ನು ನಮ್ಮ ಸುತ್ತಮುತ್ತ ನೋಡುತ್ತೇವೆ. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡ ಸೊಸೆಯನ್ನು ಮನೆಯಿಂದ ಹೊರದಬ್ಬದೇ, ಅತ್ತೆಮಾವನೇ ಮರುಮದುವೆ ಮಾಡಿಸಿ, ಸ್ವತಃ ಧಾರೆ ಎರೆದು ಕೊಟ್ಟು ಜೀವನ ಕಲ್ಪಿಸಿದ ಉದಾಹರಣೆಯನ್ನು ಪತ್ರಿಕೆಗಳಲ್ಲಿ ಓದಿದ್ದೇವೆ.
ಹಿರಿಯರು ನಿಶ್ಚಯಿಸಿದ ಮದುವೆಗಳು ವಿಫಲವಾಗುತ್ತವೆ ಎನ್ನುವುದಂತೂ ಸುಳ್ಳು. ಯಾಕೆಂದರೆ ಎಷ್ಟೋ ಪ್ರೇಮ ವಿವಾಹಗಳೂ ವಿಫಲವಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದೇನೇ ಇರಲಿ, ಇನ್ನೂ ಮದುವೆ ಸ್ವರ್ಗದಲ್ಲಿ ಆಗಿರುತ್ತದೆ ಎನ್ನುವ ಮಾತು “ಅರೇಂಜ್’ ಮದುವೆಯಲ್ಲಿ ಹೆಚ್ಚು ಅನ್ವಯವಾಗುತ್ತದೆ. ಎಲ್ಲಿಯದೋ ಹುಡುಗನಿಗೆ ಇನ್ನಾವುದೋ ದೂರದ ಸಂಬಂಧ ಕೂಡುವುದಾದರೂ ಹೇಗೆ. ಆದರೆ, ಈ ಕಾಲದಲ್ಲಿ ಫೋನ್, ಫೇಸ್‌ಬುಕ್ ಮುಂತಾದ ನೂರು ದಾರಿಗಳಿವೆ. ಮದುವೆ ನಿಶ್ಚಯವಾದ ಕೂಡಲೇ ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಇದ್ದೇ ಇದೆ.
-ಸುಮಲತಾ ಸುರೇಶ್ಉಪನ್ಯಾಸಕಿ,
ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ