Advertisement

ಪ್ರೀತಿ ಅಮರ; ಪ್ರತಿಭೆ ಅಜರಾಮರ

03:45 AM Mar 24, 2017 | |

“ಆರಂಭದಲ್ಲಿ ಈ ಸಿನಿಮಾ ಮೇಲೆ ನನಗೆ ಅಷ್ಟೊಂದು ನಂಬಿಕೆ ಇರಲಿಲ್ಲ. ಈಗ ಅದು ಎರಡರಷ್ಟಾಗಿದೆ …’ ಹೀಗೆ ಹೇಳಿ ಸಣ್ಣದ್ದೊಂದು ನಗೆ ಬೀರಿದರು ನಿರ್ದೇಶಕ ರವಿ ಕಾರಂಜಿ. ಅವರು ಹೇಳಿದ್ದು “ಅಜರಾಮರ’ ಸಿನಿಮಾ ಕುರಿತು. ಈ ಚಿತ್ರ ಮಾರ್ಚ್‌ 31 ರಂದು ರಿಲೀಸ್‌ ಆಗುತ್ತಿದೆ. ಅದಕ್ಕೂ ಮುನ್ನ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಕೊಡಲೆಂದೇ ಅವರು ಚಿತ್ರತಂಡದ ಜತೆ ಪತ್ರಕರ್ತರ ಮುಂದೆ ಬಂದಿದ್ದರು. 

Advertisement

“ಇದು ನನ್ನ ಮೊದಲ ನಿರ್ದೇಶನದ ಚಿತ್ರ. ನನಗೆ ಅವಕಾಶ ಕೊಟ್ಟ ನಿರ್ಮಾಪಕ ಡಾ.ಡೇವಿಡ್‌ ಬಾಂಜಿ ಮತ್ತು ಸಹ ನಿರ್ಮಾಪಕ ಅಭಯ್‌ ಜಿ. ಗಂಜ್ಯಾಳ ಅವರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಹೊಸಬರ ಮೇಲೆ ನಂಬಿಕೆ ಇಟ್ಟು ಹಣ ಹಾಕುವ ನಿರ್ಮಾಪಕರು ಈಗ ಕಡಿಮೆ. ಆದರೆ, ನಮ್ಮ ನಿರ್ಮಾಪಕರು ಕಥೆಯ ಮೇಲೆ ನಂಬಿಕೆ ಇಟ್ಟು ಹಣ ಹಾಕಿದ್ದಾರೆ. ಇದು ಪ್ರತಿಭಾವಂತ ಹುಡುಗನೊಬ್ಬ ಜೀವನದಲ್ಲಿ ಒಂದಷ್ಟು ಕನಸು ಕಾಣುತ್ತಾನೆ. ಆದರೆ, ಆ ಕನಸು ನನಸಾಗುವುದಿಲ್ಲ. ಅದೇ ವೇಳೆ ನಾಯಕಿಯೊಬ್ಬಳು ಆಕಸ್ಮಿಕವಾಗಿ ಅವನ ಲೈಫ‌ಲ್ಲಿ ಎಂಟ್ರಿಯಾಗುತ್ತಾಳೆ. ಅವಳ ಆಗಮನದಿಂದ ಅವನ ಕನಸು ಸಾಕಾರಗೊಳ್ಳುತ್ತದೆಯೋ ಇಲ್ಲವೋ ಎಂಬುದೇ ಕಥಾಹಂದರ’ ಎಂದು ವಿವರ ಕೊಟ್ಟರು ರವಿ ಕಾರಂಜಿ.

“ಇಲ್ಲಿ ಗ್ರಾಫಿಕ್ಸ್‌ ಬಳಸಲಾಗಿದೆ. ಅದರಲ್ಲೂ ಮೊದಲ ಸಲ ಕನ್ನಡದಲ್ಲಿ ಡ್ರಾಗನ್‌ ಬಳಸಲಾಗಿದೆ. ಕಥೆಗೆ ಪೂರಕವಾಗಿಯೇ ಗ್ರಾಫಿಕ್ಸ್‌ನಲ್ಲಿ ಡ್ರಾಗನ್‌ ಬರಲಿದೆ. ಸಣ್ಣದ್ದೊಂದು ಟ್ರ್ಯಾಕ್‌ನೊಂದಿಗೆ ಡ್ರಾಗನ್‌ ಎಂಟ್ರಿಗೆ ಲೀಡ್‌ ಸಿಗಲಿದೆ. ಶೇ.10 ರಷ್ಟು ಡ್ರಾಗನ್‌ ಇಲ್ಲಿ ಕಾಣಿಸಿಕೊಳ್ಳಲಿದೆ’ ಎಂದರು ನಿರ್ದೇಶಕರು.

ನಿರ್ಮಾಪಕ ಡಾ.ಡೇವಿಡ್‌ ಬಾಂಜಿ ಅವರಿಗೆ ಇದು ವಿಭಿನ್ನ ಕಥೆ ಎನಿಸಿದ ಕೂಡಲೇ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರಂತೆ. ಮಾ.31 ರಂದು ಸುಮಾರು 100 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ. “ನನ್ನ ಈ ಸಿನಿಮಾ ಮೂಲಕ ನಿರ್ದೇಶಕ, ನಾಯಕ, ನಾಯಕಿ ಮತ್ತು ಸಂಗೀತ ನಿರ್ದೇಶಕರನ್ನು ಪರಿಚಯಿಸಿದ್ದೇನೆ’ ಎಂದರು ಡೇವಿಡ್‌.

ಈ ಚಿತ್ರದ ಮೂಲಕ ನಾಯಕರಾಗುತ್ತಿರುವ ತಾರಕ್‌ಗೆ “ಅಜರಾಮರ’ ಬಗ್ಗೆ ಎಲ್ಲಿಲ್ಲದ ಖುಷಿಯಂತೆ. ಯಾಕೆಂದರೆ, ಸಿನಿಮಾ ನಿರೀಕ್ಷೆ ಮೀರಿ ಬಂದಿರುವುದು. ನಾನು ಈ ರಂಗಕ್ಕೆ ಹೊಸಬ. ನನ್ನನ್ನು ಹರಸಿ, ಬೆಳೆಸಿ ಎಂದಷ್ಟೇ ಹೇಳಿ ಸುಮ್ಮನಾದರು ತಾರಕ್‌. ನಾಯಕಿ ರೋಶಿನಿ ಇಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಈ ಸಿನಿಮಾ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತಾ ಹೋಗುತ್ತೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಿ ಅಂದರು ರೋಶಿನಿಛಾಯಾಗ್ರಾಹಕ ಮನೋಹರ್‌ಗೆ ವೈಯಕ್ತಿಕವಾಗಿ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ಬಲವಾದ ನಂಬಿಕೆ ಇದೆಯಂತೆ. ಹೊಸಬರ ಚಿತ್ರಗಳು ಈಗ ಸದ್ದು ಮಾಡುತ್ತಿವೆ. ಆ ಸಾಲಿಗೆ ಈ ಸಿನಿಮಾ ಕೂಡ ಸದ್ದು ಮಾಡಲಿದೆ ಎಂದರು ಅವರು. ಸಂಗೀತ ನಿರ್ದೇಶಕ ರಾಜಕಿಶೋರ್‌, ಸಂಕಲನಕಾರ ವಿಶ್ವ, ಅಭಯ್‌ ಗಂಜ್ಯಾಳ ಇತರರು ಮಾತನಾಡುವ ಹೊತ್ತಿಗೆ ಪತ್ರಿಕಾಗೋಷ್ಟಿಯೂ ಮುಗಿಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next