Advertisement

“ಪ್ರೀತಿ, ಸಂಸ್ಕಾರ ರಹಿತ ಜೀವನ ವ್ಯರ್ಥ ‘

09:09 PM Apr 28, 2019 | sudhir |

ಉಡುಪಿ: ದೇವರು ಭಕ್ತಿ, ಪ್ರೇಮ , ಜ್ಞಾನಕ್ಕೆ ಮಹತ್ವ ನೀಡುತ್ತಾನೆ. ನಾವು ಕೂಡ ಪ್ರೀತಿಯಿಂದ ಜೀವನ ನಡೆಸಿದರೆ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ಕದ್ರಿ ಶ್ರೀ ಯೋಗೀಶ್ವರ (ಜೋಗಿ) ಮಠಾಧೀಶ ಶ್ರೀ ರಾಜ ನಿರ್ಮಲ್‌ನಾಥ್‌ ಜೀ ಹೇಳಿದರು.

Advertisement

ಜೋಗಿ ಸಮಾಜ ಸೇವಾ ಸಮಿತಿ ಉಡುಪಿ, ಕಾರ್ಕಳ ವತಿಯಿಂದ ಎ. 28
ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಜೋಗಿ ಸಮಾಜ ಸೇವಾ ಸಮಿತಿಯ ದಶಮಾನೋತ್ಸವ ಮತ್ತು ರಾಜ್ಯಮಟ್ಟದ ಜೋಗಿ ವಟುಗಳ ದೀಕ್ಷಾ ಕಾರ್ಯಕ್ರಮ “ಜೋಗಿ ದಶಮಿ-2019′ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಕ್ಕಳು ಎಷ್ಟೇ ವಿದ್ಯಾವಂತರಾದರೂ ತಂದೆ-ತಾಯಿಯನ್ನು ಗೌರವಿಸುವ, ಪ್ರೀತಿಸುವ ಸಂಸ್ಕಾರವಿರದಿದ್ದರೆ ಆ ವಿದ್ಯೆಯಿಂದ ಪ್ರಯೋಜನವಿಲ್ಲ. ಸುಖ- ದುಃಖ, ಲಾಭ-ನಷ್ಟ ಕರ್ಮದ ಫ‌ಲ. ವಂಚನೆಯಿಂದ ಲಾಭವಾಗದು ಎಂದು ಶ್ರೀಗಳು ಹೇಳಿದರು.

ಅಂತರಂಗ ಶುದ್ಧವಾಗಿರಿಸಿ
ಧಾರ್ಮಿಕ ಪ್ರವಚನ ನೀಡಿದ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು “ಬಾಹ್ಯ ವಿಚಾರಗಳಿಗಿಂತ ಅಂತರಂಗದ ಶುದ್ಧತೆಗೆ ನಾಥ ಪಂಥ ಆದ್ಯತೆ ನೀಡಿದೆ. ನಾವು ಕೇವಲ ಕಣ್ಣಿನಿಂದ ಬಾಹ್ಯ ಜಗತ್ತನ್ನು ನೋಡಿದರೆ ಸಾಲದು. ಹೃದಯದಿಂದ ತಿಳಿದುಕೊಳ್ಳಬೇಕು. ಅಂತರ್‌ಮುಖೀಯಾಗಿ ನಮ್ಮನ್ನು ನಾವು ನೋಡಿಕೊಳ್ಳಬೇಕು ಎಂಬುದು ನಾಥ ಪಂಥದ ಸಾರ ಎಂದರು.

ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಟುಗಳನ್ನು ಆಶೀರ್ವದಿಸಿ ದರು. ಹಲವರಿ ಮಠಾಧೀಶ ಶ್ರೀ ಯೋಗಿಫೀರ್‌ ಜಗದೀಶ್‌ನಾಥ್‌ ಜೀ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಯಿರಾಧಾ ಗ್ರೂಪ್‌ನ ಆಡಳಿತ ನಿರ್ದೇಶಕ ಮನೋಹರ್‌ ಶೆಟ್ಟಿ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಉಜ್ವಲ್‌ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸಮ್ಮಾನಿಸಲಾಯಿತು.

Advertisement

ಸಂಜಯ್‌ ಮಧೂರ್‌ಕರ್‌ ಹುಬ್ಬಳ್ಳಿ, ಬೆಂಗಳೂರಿನ ಭವಾನಿ ಗ್ರೂಪ್ಸ್‌ ಮಾಲಕ ಚಂದ್ರಶೇಖರ ಜೋಗಿ, ಬೆಂಗಳೂರಿನ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರಾಜಶೇಖರ ಜೋಗಿ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್‌ ಕುಮಾರ್‌ ಜೋಗಿ, ಹಲವರಿ ಮಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಜೋಗಿ ಕಟ್‌ಬೇಲೂ¤ರು, ಉದ್ಯಮಿ ಉದಯ ಕುಮಾರ್‌ ಜೋಗಿ ಬಜಗೋಳಿ, ಉದಯಜೋಗಿ ಗೋಳಿಯಂಗಡಿ, ಜೋಗಿ ಮಹಿಳಾ ವೇದಿಕೆ ಮತ್ತು ಉಡುಪಿ ಜಿಲ್ಲಾ ಜೋಗಿ ಸ್ವ-ಸಹಾಯ ಗುಂಪುಗಳ ಅಧ್ಯಕ್ಷೆ ಎನ್‌.ಲಕ್ಷ್ಮೀ ಜೋಗಿ, ಸ್ಥಾಪಕಾಧ್ಯಕ್ಷ ಮತ್ತು ದೀಕ್ಷಾ ಸಮಿತಿ ಅಧ್ಯಕ್ಷ ನವೀನಚಂದ್ರ ಜೋಗಿ ಕಾಪು, ಗೌರವಾಧ್ಯಕ್ಷ ರವೀಂದ್ರ ಜೋಗಿ ಉಡುಪಿ, ಕೋಶಾಧಿಕಾರಿ ಹರೀಶ್ಚಂದ್ರ ಜೋಗಿ ಹಿರಿಯಡಕ ಉಪಸ್ಥಿತರಿದ್ದರು. ಅಧ್ಯಕ್ಷ ಸುರೇಶ್‌ ಕುಮಾರ್‌ ಜೋಗಿ ಹೆಬ್ರಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಅಧ್ಯಕ್ಷ ಗಣೇಶ್‌ ಜೋಗಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ಚಂದ್ರ ಜೋಗಿ ಕಟಪಾಡಿ ವಂದಿಸಿದರು. ಪ್ರಭಾಕರ ಜೋಗಿ ನಿರ್ವಹಿಸಿದರು. ಒಟ್ಟು 116 ವಟುಗಳ ದೀಕ್ಷೆ (ಉಪನಯನ) ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next