Advertisement

ಮೂಕ ಪ್ರಾಣಿಯ ಈ ಪ್ರೀತಿಗೆ ಭಾಷೆಯಿಲ್ಲ!

08:27 PM Oct 15, 2021 | Team Udayavani |

ಇತ್ತೀಚೆಗೆ ತಮಿಳುನಾಡಿನ ಅರಣ್ಯ ಇಲಾಖೆಯ ಸಿಬ್ಬಂದಿ, ತನ್ನ ತಾಯಿಯಿಂದ ಬೇರ್ಪಟ್ಟು, ಕಾಡುಮೇಡಲ್ಲಿ ಅಲೆಯುತ್ತಾ ಗಾಯಗೊಂಡಿದ್ದ ಮರಿಯಾನೆಯೊಂದನ್ನು ರಕ್ಷಿಸಿ, ಅದನ್ನು ಅದರ ತಾಯಿಯ ಬಳಿ ಸೇರಿಸಿದ್ದರು. ಆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವೊಂದರಲ್ಲಿ ಮರಿಯಾನೆ, ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯ ಕಾಲುಗಳನ್ನು ತನ್ನ ಸೊಂಡಿಲಿನಿಂದ ಅಪ್ಪಿಕೊಂಡಿದೆ. ಹೃದಯಸ್ಪರ್ಶಿಯಾದ ಈ ಫೋಟೋವನ್ನು ತಮಿಳುನಾಡಿನ ಅರಣ್ಯಾಧಿಕಾರಿ ಪರ್ವೀನ್‌ ಕಾಸ್ವಾನ್‌, ಟ್ವೀಟ್‌ ಮಾಡಿ, “ಪ್ರೀತಿಗೆ ಭಾಷೆಯಿಲ್ಲ.

Advertisement

ಮರಿಯಾನೆ ನಮ್ಮ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ರೀತಿಯಿದು. ನಮ್ಮ ತಂಡ, ಇದನ್ನು ರಕ್ಷಿಸಿ, ಅದರ ತಾಯಿಯ ಬಳಿ ಸೇರಿಸಿದೆ” ಎಂಬ ಅಡಿಬರಹ ಹಾಕಿದ್ದರು. ಒಡನೆಯೇ ವೈರಲ್‌ ಆದ ಈ ಟ್ವೀಟ್‌, ಸಾವಿರಕ್ಕೂ ಹೆಚ್ಚು ರೀಟ್ವೀಟ್‌ ಹಾಗೂ 11 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಗಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next