Advertisement

ಬಾಂಬರ್‌ ಬಾವಲಿ!

06:16 PM Mar 30, 2021 | Team Udayavani |

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಿಂದ ಅಮೆರಿಕೆಗೆ ಹಾರಿಹೋದ ಹಲವು ಯಹೂದಿ ವಿಜ್ಞಾನಿಗಳಲ್ಲಿ ಲೂಯಿ ಫೀಝರ್‌ ಕೂಡ ಒಬ್ಬ. ಈತ ಮೂಲತಃರಸಾಯನ ವಿಜ್ಞಾನಿ. ಪ್ರಕಾಂಡ ಪಂಡಿತ. ಅಮೆರಿಕದ ಸೇನೆಗಾಗಿ ಹಲವು ಸಂಶೋಧನೆಗಳಲ್ಲಿ ಭಾಗಿಯಾದ; ಹಲವು ಯುದೊœà ಪಕರಣಗಳನ್ನು ಮಾಡಿಕೊಟ್ಟ. ಜಪಾನಿನ ಮೇಲೆ ಯಾವೆಲ್ಲ ಬಗೆಯಲ್ಲಿ ದಾಳಿ ಮಾಡಬಹುದುಎಂಬ ವಿಚಾರದಲ್ಲಿ ಫೀಝರ್‌ನೂರಾರು ಉಪಯುಕ್ತಸಲಹೆಗಳನ್ನು ಅಮೆರಿಕನ್‌ ಸೇನೆಗೆ ನೀಡಿದ್ದ.

Advertisement

ಯಾವುದೋ ಸಂಶೋಧನೆಮಾಡುತ್ತಿದ್ದ ಸಮಯದಲ್ಲಿ ಒಂದುಅಂಶ ಅವನ ಗಮನಕ್ಕೆ ಬಂತು. ಅದೇನೆಂದರೆ ಕಡಿಮೆ ವಾಯುಸಾಂದ್ರತೆ ಇದ್ದಾಗ(ಅಂದರೆ ಗಾಳಿಯಲ್ಲಿ ಪ್ರಾಣವಾಯು ಅತಿ ವಿರಳವಾಗಿರುವ ಸಂದರ್ಭ) ಮತ್ತು ಅತಿ ಶೈತ್ಯದ ಸ್ಥಳದಲ್ಲಿ ಬಾವಲಿ ಸ್ತಬ್ಧಸ್ಥಿತಿಗೆ (ಡಾರ್ಮೆಂಟ್‌ ಸ್ಟೇಟ್‌) ಹೋಗುತ್ತದೆ. ಅಂದರೆ ಅದರ ಮೈ ನಿಶ್ಚಲವಾಗುತ್ತದೆ. ಉಸಿರಾಟ ಅತಿ ನಿಧಾನವಾಗುತ್ತದೆ. ರಕ್ತ ಪರಿಚಲನೆ ಇಲ್ಲವೇ ಇಲ್ಲವೇನೋ ಎಂಬಷ್ಟು ನಿಧಾನವಾಗುತ್ತದೆ. ಬಾಹ್ಯಚಟುವಟಿಕೆ ಗಳೆಲ್ಲವೂ ನಿಂತು ಹೋಗುತ್ತವೆ. ಇದು ಶಕ್ತಿ ವ್ಯಯವನ್ನು ತಡೆಯುವುದಕ್ಕಾಗಿ ಬಾವಲಿಯ ದೇಹವೇ ಮಾಡಿಕೊಳ್ಳುವ ಒಂದು ಸ್ವರಕ್ಷಣಾವ್ಯವಸ್ಥೆ. ಆಕ್ಸಿಜನ್‌ನ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗುತ್ತ ಬಂದಂತೆಲ್ಲ ಮತ್ತು ವಾತಾವರಣದ ಉಷ್ಣತೆಯು ಸಹಜ ಸ್ಥಿತಿಗೆ ಮರಳಿದಂತೆಲ್ಲ ಬಾವಲಿಗಳು ತಮ್ಮ ನಿಶ್ಚಲ ಸ್ಥಿತಿಯಿಂದ ಮತ್ತೆ ಸಹಜ ಸ್ಥಿತಿಗೆ ಮರಳುತ್ತವೆ.

ಫೀಝರ್‌ನ ಮಿದುಳು, ಬಾವಲಿಯ ಈ ದೇಹಗುಣವನ್ನು ಯುದ್ಧದಲ್ಲಿ ಏಕೆ ಬಳಸಬಾರದುಎಂದು ಯೋಚಿಸಿತು! ಅದೇನೆಂದರೆ ಬಾವಲಿಗಳನ್ನುಸಮುದ್ರಮಟ್ಟದಿಂದ ಅತಿ ಎತ್ತರಕ್ಕೆ ತೆಗೆದುಕೊಂಡುಹೋಗುವುದು. ಅವು ಸ್ತಬ್ಧಸ್ಥಿತಿಗೆ ಜಾರಿದ ಮೇಲೆ ಅವುಗಳ ದೇಹಕ್ಕೆ ಬಾಂಬ್‌ಗಳನ್ನು ಅಳವಡಿಸುವುದು. ಅವನ್ನು ತೆಗೆದುಕೊಂಡು ಹೋಗಿ ಜಪಾನಿನವಾಯುಮಂಡಲದಲ್ಲಿ ಉದುರಿಸುವುದು! ಗಾಳಿಯಲ್ಲಿಹಾರುತ್ತ ಹಾರುತ್ತ, ಕೆಳಕೆಳಗೆ ಬಂದಂತೆಲ್ಲ ಅವುಸ್ತಬ್ಧಸ್ಥಿತಿಯಿಂದ ಹೊರಕ್ಕೆ,ಸಹಜಸ್ಥಿತಿಗೆ ಬರುತ್ತವೆ. ಅವು ರೆಕ್ಕೆಗಳನ್ನು ಬೀಸಿಕೊಂಡುಹಾರತೊಡಗಿದ ಕೂಡಲೇ ಬಾಂಬ್‌ಗಳ ಪಿನ್‌ತೆರೆಯಲ್ಪಟ್ಟು, ಬಾಂಬ್‌ಸಿಡಿಯುತ್ತದೆ. ಹೀಗೆ ಮಾಡಿಜಪಾನಿನ ಹಲವುನಗರಗಳಲ್ಲಿ ಧ್ವಂಸ ಕಾರ್ಯ ನಡೆಸಬಹುದು ಎಂಬುದು ಫೀಝರ್‌ನ ತಂತ್ರವಾಗಿತ್ತು.

ಸರಿ, ಪ್ರಯೋಗಕ್ಕೆಸಿದ್ಧವಾಯಿತು ಅಮೆರಿಕದಸೇನೆ. ಬಾವಲಿಗಳನ್ನುದೊಡ್ಡ ಮಟ್ಟದಲ್ಲಿ ಹಿಡಿದು ತರಲಾಯಿತು. ಅವನ್ನುವಿಮಾನಗಳಲ್ಲಿ ಅತಿ ಎತ್ತರಕ್ಕೆಕೊಂಡೊಯ್ಯಲಾಯಿತು.ನಿಶ್ಚಲಗೊಂಡ ಅವುಗಳ ರೆಕ್ಕೆ,ಹೊಟ್ಟೆಗಳಿಗೆಲ್ಲ ಬಾಂಬ್‌ ಕಟ್ಟಲಾಯಿತು. ಅವು ರೆಕ್ಕೆಬಡಿಯುತ್ತ ಹಾರತೊಡಗಿದೊಡನೆ ಬಾಂಬುಗಳುಸಿಡಿಯುವಂತೆ ವ್ಯವಸ್ಥೆ ಮಾಡಲಾಯಿತು. ನ್ಯೂಮೆಕ್ಸಿಕೋದ ಮರುಭೂಮಿಯಲ್ಲಿ ಈ ಪ್ರಥಮಪ್ರಯೋಗ ನಡೆಯಿತು. ಮರುಭೂಮಿಯಲ್ಲಿ ಮಾಡಿದಪ್ರಯೋಗ ಬಹುತೇಕ ಯಶಸ್ವಿ ಏನೋ ಆಯಿತು. ಆದರೆ,ಸ್ತಬ್ಧಸ್ಥಿತಿಯಿಂದ ಸಹಜಸ್ಥಿತಿಗೆ ಮರಳಿದ ಬಾವಲಿಗಳುನೇರ, ಅಮೆರಿಕದ ಮಿಲಿಟರಿ ನೆಲೆಯತ್ತಲೇ ಹಾರಾಡಿ, ಆನೆಲೆಯನ್ನು ಪೂರ್ತಿ ಧ್ವಂಸ ಮಾಡಿ, ಇಡೀ ಯೋಜನೆಗೇಒಂದು ದೊಡ್ಡ (ಅ)ಶುಭಂ ಬರೆದವು! ಈದುರಂತಪ್ರಯೋಗದ ನೆನಪಿಗಾಗಿ ಫೀಝರ್‌, ತನ್ನಆಫೀಸಿನಲ್ಲಿ ಒಂದು ಬೈಹುಲ್ಲು ತುಂಬಿಸಿಟ್ಟ ಬಾವಲಿಯಪ್ರತಿಕೃತಿಯನ್ನು ಗೋಡೆಗೆ ನೇತು ಹಾಕಿದ್ದ. ಇದೇನು?ಎಂದು ಕೇಳಿದವರಿಗೆಲ್ಲ ಅದೊಂದು ದೊಡ್ಡ ಕಥೆ ಎಂದು ನಗುತ್ತ ತನ್ನ ಅನುಭವ ಕಥನ ಶುರು ಮಾಡುತ್ತಿದ್ದ.­

 

Advertisement

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next