Advertisement
ಲಾವೊ ತ್ಸೆ ಬದುಕಿದ್ದ ಕಾಲದಲ್ಲಿ ಚೀನದ ದೊರೆ ಅವನ ದೊಡ್ಡ ಅಭಿಮಾನಿಯಾಗಿದ್ದ. ಲಾವೊ ತ್ಸೆ ದೇಶದ ಪ್ರಧಾನಿಯಾಗ ಬೇಕು ಎಂಬುದು ದೊರೆಯ ಬಹುದೊಡ್ಡ ಕನಸಾಗಿತ್ತು. ಬಲುದೊಡ್ಡ ಜ್ಞಾನಿಯಾಗಿದ್ದ ಆತ ಪ್ರಧಾನಿಯಾದರೆ ತನ್ನ ಅಂತಸ್ತು ಇನ್ನಷ್ಟು ಏರುತ್ತದೆ ಎಂಬುದು ದೊರೆಯ ಆಲೋಚನೆ.
Related Articles
Advertisement
ದೊರೆಯ ಮಂದಿ ಹತ್ತಿರ ಹೋಗಿ, “ನಾವು ಏಕೆ ಬಂದಿದ್ದೇವೆ ಎಂಬುದು ನಿಮಗೆ ಗೊತ್ತಿದೆಯೇ? ನಮ್ಮ ದೊರೆ ನೀವು ರಾಜಧಾನಿಗೆ ಬರಬೇಕು ಎಂದು ಬಯಸಿ ದ್ದಾರೆ. ನೀವು ಅವರ ಪ್ರಧಾನ ಮಂತ್ರಿ ಆಗ ಬೇಕಂತೆ. ಬನ್ನಿ, ಹೋಗೋಣ’ ಎಂದರು.
ಲಾವೊ ತ್ಸೆ ಮಾತಿಲ್ಲದೆ ಕುಳಿತಿದ್ದ. ತಾನು ಹೇಳಿದ್ದು ಲಾವೊ ತ್ಸೆಗೆ ಕೇಳಿಸಲಿಲ್ಲವೇ ಎಂಬ ಸಂಶಯ ದೊರೆಯ ನಿಯೋಗದ ಮುಖ್ಯ ಸ್ಥನಿಗೆ ಹುಟ್ಟಿತು. ಆತ ಲಾವೊ ತ್ಸೆಯ ಮೈ ಅಲುಗಿಸಿ ಕೇಳಿದ, “ನಾವು ಹೇಳಿದ್ದು ಕೇಳಿಸಲಿಲ್ಲವೇ?’
ಅಲ್ಲೇ ಹತ್ತಿರ ಒಂದು ಕೆಸರಿನ ಹೊಂಡ ವಿತ್ತು. ಅಲ್ಲೇನೋ ಒಂದು ತುಸು ಮಿಸುಕಾ ಡುತ್ತಿತ್ತು. “ಆ ಕೆಸರಿನ ಹೊಂಡ ಕಾಣಿಸು ತ್ತಿದೆಯಾ? ಅಲ್ಲೇನಿದೆ ಗೊತ್ತಾ?’ ಲಾವೊ ತ್ಸೆ ಕೇಳಿದ. ದೊರೆಯ ನಿಯೋಗದ ಮುಖ್ಯಸ್ಥ ಹೊಂಡದ ಹತ್ತಿರ ಹೋಗಿ ಇಣುಕಿ ನೋಡಿ ವಾಪಸ್ ಬಂದ. ಅಲ್ಲೊಂದು ಆಮೆ ಹೊಡಚಾಡುತ್ತಿತ್ತು.
“ಅಲ್ಲೊಂದು ಆಮೆ ಯಿದೆ’ ಎಂದ ಮುಖ್ಯಸ್ಥ.“ನಿಮ್ಮ ಅರಸನ ಅರಮನೆ ಯಲ್ಲೂ ಒಂದು ಆಮೆ ಇದೆ, ಅದನ್ನು ಚಿನ್ನದ ಲೇಪದಿಂದ ಮುಚ್ಚಿ, ವಜ್ರ ವೈಢೂರ್ಯಗಳಿಂದ ಅಲಂಕರಿ ಸಲಾಗಿದೆ ಎಂದು ಕೇಳಿಬಲ್ಲೆ’ ಎಂದ ಲಾವೊ ತ್ಸೆ. ಆ ಕಾಲದಲ್ಲಿ ಅರಸನ ಲಾಂಛನ ಆಮೆಯಾಗಿತ್ತು. ಹೌದು ಹೌದೆಂದರು ಎಲ್ಲರೂ. “ನೀನು ಅರಮನೆಗೆ ಬಂದು ಚಿನ್ನ, ವಜ್ರ ಖಚಿತ ಆಮೆಯ ಸ್ಥಾನವನ್ನು ಅಲಂಕರಿಸು, ವರ್ಷಕ್ಕೊಂದು ಬಾರಿ ಪೂಜೆಯನ್ನು ಕೊಳ್ಳು ವಂಥವನಾಗು ಎಂದು ಆ ಆಮೆಯನ್ನು ಕೇಳಿದರೆ ಅದೇನು ಉತ್ತರ ಕೊಡ ಬಹುದು?’ ಎಂದು ಲಾವೊ ತ್ಸೆ ಪ್ರಶ್ನಿಸಿದ.
“ಆ ಆಮೆ ಅರಮನೆಗೆ ಬಂದು ಚಿನ್ನದಿಂದ ಮುಚ್ಚಿಸಿಕೊಳ್ಳುವುದು ಎಂದರೆ ಏನು! ಆಗ ಅದು ಸಾಯುತ್ತದೆ. ಸತ್ತ ಆಮೆಯನ್ನು ಪೂಜಿಸುವುದು ಎಂದ ರೇನು? ಅದು ಇಲ್ಲೇ ಕೆಸರಿನ ಹೊಂಡದಲ್ಲಿ ಇರುವುದನ್ನೇ ಬಯ ಸೀತು’ ಎಂದರು ನಿಯೋಗದವರು.
ಆಗ ಲಾವೊ ತ್ಸೆ ಹೇಳಿದ, “ನಾನೂ ಈ ಆಮೆಯಂತೆಯೇ. ಅರಮನೆಗೆ ಬಂದು ಆತ್ಮಾರ್ಥದಲ್ಲಿ ಸಾಯುವುದಕ್ಕಿಂತ ಇಲ್ಲೇ ಜೀವಂತವಾಗಿ ಇರಲು ಬಯಸುತ್ತೇನೆ. ಹೋಗಿ ಹೋಗಿ, ನಾನು ಬರುವುದಿಲ್ಲ.’ (ಸಾರ ಸಂಗ್ರಹ)