Advertisement

ಅನುವಾದಕರಿಗೆ ವಿಪುಲ ಅವಕಾಶ

12:35 AM Aug 28, 2019 | mahesh |

ಸಂವಹನಕ್ಕೆ ಭಾಷೆ ಎಂಬುದು ಮುಖ್ಯ. ಜಗತ್ತಿನೆಲ್ಲೆಡೆ ಸಾವಿರಕ್ಕೂ ಅಧಿಕ ಭಾಷೆಗಳಿವೆ, ನಮ್ಮ ದೇಶದಲ್ಲೇ ಅಧಿಕೃತವಾಗಹಿ 20 ಭಾಷೆಗಳಿದ್ದರೆ, ಮಾತೃಭಾಷೆಯಾಗಿ ಭಾರತದಲ್ಲಿ 1,652 ಭಾಷೆಗಳಲ್ಲಿ ಸಂವಹನ ನಡೆಯುತ್ತದೆ. ದೇಶದಲ್ಲೇ ಆಗಿರಬಹುದು ಅಥವಾ ವಿದೇಶಗಳಿಗೆ ತೆರಳಿದಾಗ ಸಂವಹನಕ್ಕೆ ಅತೀ ಮುಖ್ಯ.

Advertisement

ಕೆಲವರಿಗೆ ಅನೇಕ ಭಾಷೆಗಳನ್ನು ಕರಗತ ಮಾಡಿಕೊಳ್ಳುವ ಹವ್ಯಾಸವಿರುತ್ತದೆ. ಯಾವುದೇ ಪ್ರದೇಶಗಳಿಗೆ ಭೇಟಿ ನೀಡಿದರೂ ಅಲ್ಲಿನ ಭಾಷೆಯನ್ನು ಕಲಿತು ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವವರಿದ್ದಾರೆ. ಅಂಥವರಿಗೆ ಒಂದು ಉದ್ಯೋಗವಿದೆ ಅದೇ ಅನುವಾದಕ‌. ಭಾಷೆಯಲ್ಲಿ ಉತ್ತಮ ಹಿಡಿತವಿರುವವರು, ಹಲವು ಭಾಷೆಗಳನ್ನು ಕರಗತ ಮಾಡಿಕೊಂಡಿರುವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ವಿದೇಶಿ ಭಾಷೆಗಳನ್ನು ಕರಗತ ಮಾಡಿಕೊಂಡವವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಅವಕಾಶ.

ಹೊಸ ಹೊಸ ಭಾಷೆಗಳನ್ನು ಕಲಿಯಲಿಚ್ಛಿಸುವವರಿಗೆ, ಭಾಷೆಯ ಮೇಲೆ ಹಿಡಿತವಿರುವವರು ಅನುವಾದಕರಾಗಿ ಕೆಲಸ ಮಾಡಬಹುದು. ಈ ಕ್ಷೇತ್ರದಲ್ಲಿ ಇಂದು ಆದ್ಯತೆ ಹೆಚ್ಚಿದೆ.

ಟ್ರಾನ್ಸ್‌ಲೇಷನ್‌ ಕೋರ್ಸ್‌ ಎಂದರೆ?
ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು, ಸರಕಾರ ಅಥವಾ ಇತರೆ ಕ್ಷೇತ್ರಗಳಲ್ಲಿ ಭಾಷಾಂತರಕಾರರಾಗಿ ಕೆಲಸ ನಿರ್ವಹಿಸುವುದು. ಇದರಲ್ಲಿ ಪರಿಣಿತರಾಗಲು ಪ್ರತ್ಯೇಕ ಕೋರ್ಸ್‌ಗಳಿವೆ.

ಅನುವಾದಕರಿಗೆ ಮೂರು ಬಗೆಯ ಆಯ್ಕೆಗಳಿವೆ.
1 ಸರ್ಟಿಫಿಕೇಟ್ ಕೋರ್ಸ್‌
2 ಡಿಪ್ಲೊಮಾ ಕೋರ್ಸ್‌
3 ಡಿಗ್ರಿ ಕೊರ್ಸ್‌
ಪಿಯುಸಿ ಮುಗಿಸಿದವರು ಈ ಕೋರ್ಸ್‌ಗಳಿಗೆ ಸೇರಲು ಅರ್ಹತೆ ಹೊಂದುತ್ತಾರೆ.

Advertisement

ವ್ಯಾಪ್ತಿ: ಈ ಕೋರ್ಸ್‌ಗೆ ಇಂದು ಬೇಡಿಕೆ ಹೆಚ್ಚಿದ್ದು, ಹೊಸ ಹೊಸ ಅವಕಾಶವಿವೆ. ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಕಂಪೆನಿಗಳಿಗೂ ಅನುವಾದಕಾರರ ಆವಶ್ಯಕತೆಯಿದೆ. ಜತೆಗೆ ಮಾಧ್ಯಮ ಕ್ಷೇತ್ರ, ವೈದ್ಯಕೀಯ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶವಿದೆ. ಪ್ರವಾಸೋದ್ಯಮ ಇಲಾಖೆಯಲ್ಲೂ ಆಕರ್ಷಕ ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಿದೆ.

ಬೇಕಾದ ಕೌಶಲಗಳು

1 ಭಾಷಾ ಕಲಿಕೆಯಲ್ಲಿ ಆಸಕ್ತಿ
ಹೊಸ ಹೊಸ ಭಾಷೆ ಕಲಿಕೆಯಲ್ಲಿ ಆಸಕ್ತಿ ಹೊಂದಿರಬೇಕು.
ಹೆಚ್ಚು ಭಾಷೆ ಗೊತ್ತಿದ್ದವರ, ಕಲಿಯಲಿಚ್ಛಿಸುವವರಿಗೆ ಇದು ಉತ್ತಮ ಆಯ್ಕೆ.

2 ಭಾಷೆಯಲ್ಲಿ ಹಿಡಿತ
ಭಾಷೆಯ ಮೇಲೆ ಹಿಡಿತವಿರಬೇಕು. ಸುಲಭವಾಗಿ, ಸರಳವಾಗಿ ಸಂವಹನ ಮಾಡುವ ಕಲೆ ಗೊತ್ತಿರಬೇಕು.

3 ಸಂವಹನ ಕಲೆ
ಉತ್ತಮ ಸಂವಹನ ಕಲೆ ಕರಗತವಾಗಿರಬೇಕು. ಇದರಿಂದ ಮಾತ್ರ ಉತ್ತಮ ಅನುವಾದಕ‌ರಾಗಲು ಸಾಧ್ಯ.

ಅನುವಾದಕಾರರಿಗೆ ಉತ್ತಮ ಅವಕಾಶವಿದ್ದು, ಹಲವಾರು ಕಾಲೇಜುಗಳಲ್ಲಿ ಈ ಕೋರ್ಸ್‌ ಗಳಿವೆ. ಕೌಶಲಗಳ ಜತೆಗೆ ಆಸಕ್ತಿಯಿದ್ದರೆ ಈ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಆಧುನಿಕ ಯುಗದಲ್ಲಿ ಹೊಸಹೊಸ ಉದ್ಯೋಗಾವಕಾಶಗಳು ಉಂಟಾಗುತ್ತಿದ್ದು, ಯುವ ಜನಾಂಗ ಅವುಗಳನ್ನು ತಿಳಿಯುವತ್ತ ಆಸಕ್ತಿ ವಹಿಸಬೇಕಾಗಿದೆ. ಆದ್ದರಿಂದ ಯುವಜನಾಂಗ ಹೊಸ ಹೊಸ ಅವಕಾಶಗಳತ್ತ ತೆರೆದುಕೊಳ್ಳಬೇಕಾಗಿದೆ.

ಎಲ್ಲಿಲ್ಲಿ ಕಾಲೇಜುಗಳಿವೆ?
ಜವಾಹರ ಲಾಲ್ ಯುನಿವರ್ಸಿಟಿ, ದೆಹಲಿ ಸೆಂಟ್ರಲ್ ಟ್ರಾನ್ಸ್‌ಲೇಶನ್‌ ಬ್ಯೂರೋ,ದೆಹಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯ, ಚೆನೈ ಯುನಿವರ್ಸಿಟಿ ಆಫ್ ಹೈದರಾಬಾದ್‌ ಯುನಿವರ್ಸಿಟಿ ಆಫ್ ಪುಣೆ

ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next