Advertisement

ಫಾರ್ಮಸಿ ಕೋರ್ಸ್‌ ಅವಕಾಶಗಳು ವಿಪುಲ

10:11 AM Dec 12, 2019 | mahesh |

ಇಂದು ವೈದ್ಯಕೀಯ ಕ್ಷೇತ್ರವು ವಿಪುಲ ಅವಕಾಶ, ಉದ್ಯೋಗವನ್ನು ತಂದುಕೊಡುವ ಕ್ಷೇತ್ರವಾಗಿದೆ. ಹಾಗಾಗಿ ಶೈಕ್ಷಣಿಕವಾಗಿ ಕೂಡ ವೈದೈಕೀಯ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ. ಈ ನಿಟ್ಟಿನಲ್ಲಿ ಡಿ. ಫಾರ್ಮಾ ಮತ್ತು ಬಿ. ಫಾರ್ಮಾ ಕೋರ್ಸ್‌ಗಳಿಗೆ ಈಗ ಆದ್ಯತೆ ನೀಡಲಾಗುತ್ತಿದೆ. ಈ ಕೋರ್ಸ್‌ನ ಅವಕಾಶಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಉದ್ಯೋಗ ಮಾರುಕಟ್ಟೆ ಬದಲಾಗಿದೆ. ಅದಕ್ಕೆ ಪೂರಕವಾಗಿ ಹೊಸ ಹೊಸ ಕೋರ್ಸ್‌ಗಳು ಆರಂಭವಾಗಿವೆ. ಅವುಗಳಲ್ಲಿ ಕೆಲವು ಯಶಸ್ವಿಯಾಗಿವೆ. ಇನ್ನು ಕೆಲವು ಬೇಡಿಕೆ ಇಲ್ಲದ ಕೋರ್ಸ್‌ಗಳೆಂಬ ಅಪವಾದಕ್ಕೆ ಗುರಿಯಾಗಿವೆ. ಆದರೆ ಹಲವು ವರ್ಷಗಳಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಬಹುತೇಕ ಒಂದೇ ರೀತಿಯ ಬೇಡಿಕೆಯನ್ನು ಕಾಯ್ದುಕೊಂಡು ಬಂದಿರುವುದು ಫಾರ್ಮಸಿ ಶಿಕ್ಷಣ.

ಫಾರ್ಮಾ ಡಿ, ಬಿ ಫಾರ್ಮಾ ಸಹಿತ ಫಾರ್ಮಸಿ ಕೋರ್ಸ್‌ಗಳನ್ನು ಪಡೆದವರು ಉದ್ಯೋಗ ಪಡೆಯಲು ಹೆಚ್ಚು ಶ್ರಮ ಪಡಬೇಕಾಗಿಲ್ಲ ಎನ್ನುತ್ತಾರೆ ಈ ಕ್ಷೇತ್ರದಲ್ಲಿರುವ ಅನುಭವಿಗಳು. ಇದನ್ನು ಪುಷ್ಠಿàಕರಿಸುವಂತೆ ಫಾರ್ಮಸಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ವೈದ್ಯರಾಗದೆಯೇ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಕೊಂಡು ಉದ್ಯೋಗ ಪಡೆಯಬೇಕು, ಒಂದಷ್ಟು ಸಾಧನೆ ಮಾಡಬೇಕು ಎಂಬ ತುಡಿತವುಳ್ಳ ವಿದ್ಯಾರ್ಥಿಗಳು ಫಾರ್ಮಸಿ ಕೋರ್ಸ್‌ಗಳನ್ನು ಆಯ್ದುಕೊಳ್ಳಬಹುದು. ಔಷಧ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವೃತ್ತಿಪರ ಫಾರ್ಮಾಸಿಸ್ಟ್‌ಗಳಿಗೆ ಪ್ರಮುಖ ಔಷಧ ಕಂಪೆನಿಗಳು ಎದುರು ನೋಡುತ್ತಿವೆ.

ಪಿಯುಸಿ ಅನಂತರದ ಆಯ್ಕೆ
ದ್ವಿತೀಯ ಪಿಯುಸಿ(ಪಿಸಿಎಂ/ಬಿ) ಆದ ಬಳಿಕ ಬಿ. ಫಾರ್ಮಾ(ಬ್ಯಾಚುಲರ್‌ ಇನ್‌ ಫಾರ್ಮಸಿ) ಮಾಡಬಹುದು. ಇದು ನಾಲ್ಕು ವರ್ಷಗಳ ಅವಧಿಯ ಕೋರ್ಸ್‌. ಬಿ ಫಾರ್ಮಾ ಕೋರ್ಸ್‌ನಲ್ಲಿ ಔಷಧ, ಫಾರ್ಮಸ್ಯುಟಿಕಲ್‌ ಎಂಜಿನಿಯರ್‌, ಮೆಡಿಸಿನಲ್‌ ಕೆಮಿಸ್ಟ್ರಿ, ಬಯೋಕೆಮಿಕಲ್‌ ಸೈನ್ಸ್‌ ಮತ್ತು ಹೆಲ್ತ್‌ಕೇರ್‌ ಮೊದಲಾದ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ. ಆಲ್‌ಇಂಡಿಯಾ ಕೌನ್ಸೆಲ್‌ ಆಫ್ ಟೆಕ್ನಿಕಲ್‌ ಎಜುಕೇಶನ್‌(ಎಐಸಿಟಿಇ) ಮತ್ತು ಫಾರ್ಮಸಿ ಕೌನ್ಸೆಲ್‌ ಆಫ್ ಇಂಡಿಯಾ (ಪಿಸಿಐ) ಮಾನ್ಯತೆ ಪಡೆದಿರುವ ಕೋರ್ಸ್‌ ಇದು. ಡಿ ಫಾರ್ಮಾ(ಡಿಪ್ಲೊಮಾ ಇನ್‌ ಫಾರ್ಮಾ) ಕೂಡ ಮಾಡಬಹುದು.

ಉನ್ನತ ಅಧ್ಯಯನ
ಬಿ ಫಾರ್ಮಾ ಮಾಡಿದವರು ಹೆಚ್ಚಿನ ಅಧ್ಯಯನಕ್ಕೆ ಎಂ. ಫಾರ್ಮಾ (ಮಾಸ್ಟರ್‌ ಆಫ್ ಫಾರ್ಮಸಿ) ಮಾಡಬಹುದು. ಅಲ್ಲದೆ ಫಾರ್ಮಾ ಡಿ (ಡಾಕ್ಟರೇಟ್‌ ಇನ್‌ ಫಾರ್ಮಸಿ) ಮಾಡಲು ಕೂಡ ಅವಕಾಶವಿದೆ. ಅಧ್ಯಯನ ಹೆಚ್ಚಾಗುತ್ತಾ ಹೋದಂತೆ ಸಹಜವಾಗಿಯೇ ಬೇಡಿಕೆ ಮತ್ತು ಗಳಿಕೆಯ ಅವಕಾಶಗಳೂ ಅಧಿಕ.

Advertisement

ಸಾರ್ವಜನಿಕ, ಖಾಸಗಿ ರಂಗದಲ್ಲಿ ಬೇಡಿಕೆ
ಫಾರ್ಮಸಿ ಶಿಕ್ಷಣ ಪಡೆದವರಿಗೆ ಅತ್ಯಧಿಕ ಬೇಡಿಕೆ ಇರುವುದು ಖಾಸಗಿ ರಂಗದಲ್ಲಿ. ಆದರೆ ಸರಕಾರದ ಇಲಾಖೆಗಳಲ್ಲಿಯೂ ಉದ್ಯೋಗದ ಅವಕಾಶವಿದೆ. ಡ್ರಗ್‌ ಇನ್‌ಸ್ಪೆಕ್ಟರ್‌ನಂತಹ ಹುದ್ದೆಗಳಿರುತ್ತವೆ. ಭಾರತ ಹಾಗೂ ವಿದೇಶಗಳಲ್ಲಿ ಬೆಳೆಯುತ್ತಿರುವ ಫಾರ್ಮಾಸ್ಯುಟಿಕಲ್‌ ಕಂಪೆನಿಗಳಲ್ಲಿ ಫಾರ್ಮಾಸಿಸ್ಟ್‌ ಆಗಿ, ಉತ್ಪಾದನೆ, ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡಬಹುದು. ಪ್ರೊಡಕ್ಷನ್‌ ಮ್ಯಾನೇಜರ್‌ಗಳಾಗಿ ಯಶಸ್ಸು ಕಂಡವರು ಅನೇಕ ಮಂದಿ ಇದ್ದಾರೆ. ವಿದೇಶಗಳಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಇಂದು ವ್ಯವಸ್ಥಿತವಾಗಿ ಬೃಹತ್‌ ಆಗಿ ಸ್ಥಳೀಯವಾಗಿಯೂ ಬೆಳೆಯುತ್ತಿರುವ ಖಾಸಗಿ ಮೆಡಿಕಲ್‌ ಸಂಸ್ಥೆಗಳಲ್ಲಿಯೂ ಕೆಲಸ ಮಾಡಬಹುದು. ಇದು ದೂರದ ನಗರಗಳಿಗೆ ತೆರಳಲ್ಲಿ ಇಚ್ಛಿಸದೆ, ಸ್ಥಳೀಯವಾಗಿ ಸಾಮಾನ್ಯ ಉದ್ಯೋಗ ಬಯಸುವವರಿಗೆ ಪೂರಕ.

ಬೇಡಿಕೆ ಕಡಿಮೆಯಾಗಿಲ್ಲ
ಬಿ ಫಾರ್ಮಾ ಅಥವಾ ಫಾರ್ಮಸಿಯ ಇತರ ಕೋರ್ಸ್‌ಗಳನ್ನು ಮಾಡಿದವರಿಗೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಇದೆ. ಅದು ಕಡಿಮೆಯಾಗಿಲ್ಲ. ಬೆಂಗಳೂರು, ಹೈದರಾಬಾದ್‌, ಪುಣೆ, ಗುಜರಾತ್‌ ಮೊದಲಾದೆಡೆ ಉತ್ತಮ ಬೇಡಿಕೆ ಇದೆ. ಸ್ಥಳೀಯವಾಗಿಯೂ ಉದ್ಯೋಗ ಪಡೆಯಲು ಅವಕಾಶವಿದೆ. ದೊಡ್ಡ ಕಂಪೆನಿಗಳು ಉತ್ತಮ ವೇತನವನ್ನು ನೀಡುತ್ತಿವೆ. ಅನುಭವ ಪಡೆದ ಅನಂತರ ಸ್ವಯಂ ಆಗಿಯೂ ಕಂಪೆನಿ ಆರಂಭಿಸಬಹುದು. ವಿದೇಶಗಳಲ್ಲಿಯೂ ಉದ್ಯೋಗವಾಕಾಶವಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಮಕ್ಕಳು ಕೂಡ ಫಾರ್ಮಸಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಮಂಗಳೂರು ಶ್ರೀನಿವಾಸ ಕಾಲೇಜ್‌ ಆಫ್ ಫಾರ್ಮಸಿಯ ಉಪಪ್ರಾಂಶುಪಾಲ ಡಾ| ಇ.ವಿ.ಎಸ್‌. ಸುಬ್ರಹ್ಮಣ್ಯ ಅವರು.

ಅವಕಾಶ ಎಲ್ಲಿ ?
· ಕೆಮಿಕಲ್‌/ಡ್ರಗ್‌ ಟೆಕ್ನೀಷಿಯನ್‌
· ಬಯೋ ಟೆಕ್ನಾಲಜಿ ಇಂಡಸ್ಟ್ರೀಸ್‌
· ಡ್ರಗ್‌ ಥೆರಫಿಸ್ಟ್‌
· ಡ್ರಗ್‌ ಇನ್‌ಸ್ಪೆಕ್ಟರ್‌
· ಹಾಸ್ಪಿಟಲ್‌ ಡ್ರಗ್‌ ಕೋ-ಆರ್ಡಿನೇಟರ್‌
· ಹೆಲ್ತ್‌ ಇನ್‌ಸ್ಪೆಕ್ಟರ್‌
· ಫಾರ್ಮಾಸಿಸ್ಟ್‌
· ಪೊಟೋಗ್ರಾಫಿಕಲ್‌ ಲ್ಯಾಬ್‌
· ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌
· ಸಂಶೋಧನಾ ಅಧಿಕಾರಿ ಇತ್ಯಾದಿ

-  ಸಂತೋಷ್‌

Advertisement

Udayavani is now on Telegram. Click here to join our channel and stay updated with the latest news.

Next