Advertisement

New Year: ಹೊಸವರ್ಷ ಸ್ವಾಗತಿಸಲು ಬೆಟ್ಟಕ್ಟೆ ಲಕ್ಷಾಂತರ ಭಕ್ತರ ಆಗಮನ

01:07 PM Jan 01, 2024 | Team Udayavani |

ಚಾಮರಾಜನಗರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದು, ಭಾನುವಾರ ಮಧ್ಯರಾತ್ರಿ ವೇಳೆಗೆ ಅಂದಾಜು 90 ಸಾವಿರಕ್ಕೂ ಹೆಚ್ಚು ಜನರು ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ.

Advertisement

ಮಾದಪ್ಪನ ಭಕ್ತರು ಅನೇಕ ವರ್ಷಗಳಿಂದ ಹೊಸ ವರ್ಷದ ಮುನ್ನಾದಿನ ಬೆಟ್ಟಕ್ಕೆ ಆಗಮಿಸಿ, ವರ್ಷದ ಮೊದಲ ದಿನ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಹಾಗೆಯೇ 2024ರ ಮೊದಲ ದಿನವನ್ನು ಮಾದಪ್ಪನ ದರ್ಶನ ದೊಂದಿಗೆ ಶುಭಾರಂಭ ಮಾಡಲು ಭಕ್ತಾದಿಗಳು ಭಾನು ವಾರ ಬೆಳಿಗ್ಗೆಯಿಂದಲೇ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಕಾಲ್ನಡಿಗೆಯ ಮೂಲಕ, ಕೆಎಸ್‌ಆರ್‌ಟಿಸಿ ಮತ್ತು ಬೆಟ್ಟದ ಬಸ್‌ಗಳಲ್ಲಿ, ಸ್ವಂತ ವಾಹನಗಳಲ್ಲಿ ಬೆಟ್ಟಕ್ಕೆ ಭಕ್ತಾದಿಗಳು ಆಗಮಿಸಿದ್ದಾರೆ. ಸುಮಾರು 90 ಸಾವಿರದಿಂದ ಒಂದು ಲಕ್ಷದವರೆಗೂ ಭಕ್ತಾದಿಗಳು ಹೊಸ ವರ್ಷದ ದಿನ ಸ್ವಾಮಿಯ ದರ್ಶನ ಪಡೆಯಲಿದ್ದಾರೆ ಎಂದು ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಉದಯವಾಣಿಗೆ ತಿಳಿಸಿದರು.

ಪಾದಯಾತ್ರಿಗಳಿಗೆ ಉಚಿತ ನೇರದರ್ಶನ: ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಬರುವ ಭಕ್ತರಿಗೆ ರಾಜಗೋಪುರ ಮಾರ್ಗದಿಂದ ಪ್ರವೇಶಿಸಿ ಸ್ವಾಮಿಯ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಅವರಿಗೆ ಉಳಿದುಕೊಳ್ಳಲು ತಾಳಬೆಟ್ಟದ ಯಾತ್ರಿ ನಿವಾಸದಲ್ಲಿ ಬೆಟ್ಟದ ವಸತಿ ಗೃಹಗಳಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಬೆಟ್ಟಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ. ದಾಸೋಹ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆ ಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಸರಸ್ವತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next