Advertisement
ಕೊಣಾಜೆ ನಡುಪದವಿನಲ್ಲಿರುವ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯು ಮಲ್ಟಿ ಪರ್ಪಸ್ ಹಾಲ್‌ನಲ್ಲಿ ನಡೆದ “ಎಪಿಸ್ಟಿಮ್ 2ಏ19′ ಪ್ರಥಮ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಔಷಧೀಯ ವಿದ್ಯಾರ್ಥಿಗಳಿಗೆ ತನ್ನ ರಂಗದಲ್ಲಿ ವಿಪುಲವಾದ ಉದ್ಯೋಗದ ಅವಕಾಶಗಳಿದ್ದು ಬದ್ಧತೆ ಹಾಗೂ ಜವಾ ಬ್ದಾರಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದರು.
Related Articles
Advertisement
ಪ್ರಥಮ ಸೆಮಿಸ್ಟರ್‌ನಲ್ಲಿ ಗರಿಷ್ಠ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. “ಫಾರ್ಮ ಏಸ್’ ಮ್ಯಾಗಜಿನ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಸಲೀಮುಲ್ಲಾ ಖಾನ್ ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರೊ| ವಿಜೇತ ಸ್ವಾಗತಿಸಿದರು. ಪ್ರೊ| ನಿಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ಜಾಫರ್ ಕಿರಾತ್ ಪಠಿಸಿದರು. ಶಹನಾಜ್ ಮತ್ತು ಶಝನ ಮೆಹ್ರಾ ಕಾರ್ಯ ಕ್ರಮ ನಿರೂಪಿಸಿದರು. ಡಾ| ಮುಹಮ್ಮದ್ ಮುಬೀನ್ ವಂದಿಸಿದರು.
ಹೊಣೆಗಾರಿಕೆಯಿಂದ ಕೂಡಿದೆಮುಖ್ಯ ಅತಿಥಿಗಳಾಗಿ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಮಾತನಾಡಿ, ತಾಂತ್ರಿಕ ತಜ್ಞರು ನಿರ್ಜೀವ ವಸ್ತುಗಳೊಂದಿಗೆ ಕೆಲಸ ಮಾಡುವುದಾದರೆ ಔಷಧೀಯ ತಜ್ಞರು ಜೀವವಿರುವ ವಸ್ತುಗಳೊಂದಿಗೆ ಪ್ರಯೋಗಗಳನ್ನು ನಡೆಸುವವರಾಗಿದ್ದಾರೆ. ಆದ್ದ ರಿಂದ ಔಷಧ ತಜ್ಞರ ಪಾತ್ರವು ಬಹಳ ಸೂಕ್ಷ್ಮವಾಗಿದ್ದು, ಹೊಣೆಗಾರಿಕೆಯಿಂದ ಕೂಡಿದೆ ಎಂದರು.