Advertisement

ಸಮಸ್ಯೆಗಳ ಆಗರ ಅಕ್ಕಮಹಾದೇವಿ ಸಭಾಂಗಣ

02:21 PM May 22, 2019 | Suhan S |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣ ಸಮಸ್ಯೆಗಳ ಆಗರ ವಾಗಿದೆ. ಹೀಗಾಗಿ ದುಡ್ಡು ಕೊಟ್ಟು ಸಭಾಂಗಣ ದೊಳಗೆ ಕಾರ್ಯಕ್ರಮ ನಡೆಸಿದವರು ಸಮಾರಂಭ ಮುಗಿದ ನಂತರ ಯಾಕಾದರೂ, ಈ ಸಭಾಂಗಣ ಬುಕ್‌ ಮಾಡಿದೆವೋ ಎಂದು ನರಳುವಂತಾಗಿದೆ.

Advertisement

ಪುಂಡಲೀಕ ಹಾಲಂಬಿ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ವೇಳೆ ಆರಂಭವಾಗಿದ್ದ ಈ ಕಟ್ಟಡ ಕಾಮಗಾರಿ ಹಾಲಿ ಅಧ್ಯಕ್ಷರ ಅವಧಿಯಲ್ಲಿ ಮುಕ್ತಾಯವಾಯಿತು. ಕರ್ನಾಟಕ ವಸತಿ ನಿಗಮ ಸುಮಾರು 4.20 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಿದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಆಡಳಿತ ಮಂಡಳಿಯ ಕೆಲವು ತೀರ್ಮಾನಗಳಿಂ ದಾಗಿ ಅಕ್ಕಮಹಾದೇವಿ ಸಭಾಂಗಣ ಸಮಸ್ಯೆಯ ಆಗರವಾಗಿಯೇ ಉಳಿದು ಕೊಂಡಿದೆ.

ಕೈ ಬಿಟ್ಟ ಆತ್ಯಾಧುನಿಕ ಆಡಿಟೋರಿಯಂ ಫ್ಲಾನ್‌: ಪುಂಡಲೀಕ ಹಾಲಂಬಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ವೇಳೆ ಅಕ್ಕ ಮಹಾದೇವಿ ಸಭಾಂಗಣವನ್ನು ವಿಶೇಷ ತಂತ್ರ ಜ್ಞಾನ ಬಳಸಿ ನಿರ್ಮಿಸುವ ಆಲೋಚನೆ ಹೊಂದಿ ದ್ದರು. ಅದೇ ರೀತಿಯಲ್ಲಿ ಸಭಾಂಗಣದ ನಕಾಶೆ ಕೂಡ ಸಿದ್ಧವಾಗಿತ್ತು. ಆದರೆ ಅವರು, ಬಯಸಿದ ರೀತಿಯಲ್ಲಿ ಆಡಿಟೋರಿಯಂ ಸಿದ್ಧವಾಗಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಆತ್ಯಾಧುನಿಕ ತಂತ್ರಜ್ಞಾನ ಹೊಂದಿದ ಆಡಿಟೋರಿಯಂ ಇರಲಿ ಎಂಬ ಉದ್ದೇಶ ಕೂಡ ಅವರದ್ದಾಗಿತ್ತು. ಆದರೆ ಹವಾ ನಿಯಂತ್ರಿತ ಥಿಯೇಟರ್‌ ಮಾಡಿದರೆ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸುವರ ಮೇಲೆ ಹೆಚ್ಚಿನ ಬಾಡಿಗೆ ಹೇರಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಮುಂದೆ ಬರುವುದಿಲ್ಲ ಎಂಬ ಉದ್ದೇಶದಿಂದಾಗಿ ಈ ಹಿಂದೆ ಮಾಡಲಾಗಿದ್ದ ಮೂಲ ಯೋಜನೆಯನ್ನು ಕೈ ಬಿಡಲಾಗಿದೆ. ಇದೇ ಈಗ ಸಭಾಂಗಣದೊಗಿನ ದ್ವನಿವರ್ಧಕ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಸಮಸ್ಯೆಗೆ ಒಂದು ಕಾರಣವಾಗಿದೆ ಹೆಸರು ಹೇಳಲು ಇಚ್ಛಿಸದ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರೊಬ್ಬರು ದೂರಿದ್ದಾರೆ.

ಸಭಿಕರಿಗೆ ಕಿರಿಕಿರಿ: ಅಕ್ಕಮಹಾದೇವಿ ಸಭಾಂಗಣ ದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಭಾಗವ ಹಿಸುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿ ಗಳು ಸೇರುತ್ತಾರೆ. ಆದರೆ ಧ್ವನಿ ಗ್ರಹಣದ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದರಿಂದ ಯಾರು ಏನ್‌ ಹೇಳುತ್ತಾರೋ ಎಂಬುವುದೇ ತಿಳಿಯುವು ದಿಲ್ಲ. ಹೀಗಾಗಿ ಈ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುವ ವೇಳೆ ಸಭಿಕರು ಕಿರಿಕಿರಿ ಅನುಭವಿ ಸಬೇಕಾಗುತ್ತದೆ. ಈ ಅವ್ಯವಸ್ಥೆಯ ಬಗ್ಗೆ ಸಭಿಕರ ಮುಂದೆಯೇ ಹಿರಿಯ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

● ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next