Advertisement

ಬೆಳದಿಂಗಳಲ್ಲಿ ಕಳೆದುಹೋಯ್ತು ಒಲವಿನ ನೌಕೆ

05:45 AM May 19, 2020 | Lakshmi GovindaRaj |

ಲಾಕ್‌ಡೌನ್‌ ರಿಲೀಫ್ ಸಿಕ್ಕಿದ್ದೇ ತಡ; ಮುಖ ನೋಡಲಾರದೆ ಬಳಲಿದ್ದ ಕಣ್ಣುಗಳಿಗೆ ಕಡೆಗೂ ಅವಳ ದರ್ಶನ ಆಯಿತು. ಲಾಕ್‌ಡೌನ್‌ನಿಂದ ಮನೆಯೊಳಗೆ ಬಂಧಿಯಾಗಿ, ಕತ್ತಲ  ಲೋಕದಲ್ಲಿ ನಲುಗಿಹೋಗಿದ್ದ ಮನಸಿಗೆ, ಕಳೆದುಹೋದ  ನಿಧಿ ಸಿಕ್ಕಂತಾಗಿತ್ತು. ಇಡೀ ತಿಂಗಳ ಸಂಕಟಕ್ಕೆ, ಮುಕ್ತಿ ಸಿಕ್ಕ ಹೊತ್ತದು. ಆದರೆ, ಇದು ಕನಸು ಎಂದು ಆ ಕ್ಷಣಕ್ಕೆ ಅರ್ಥವೇ ಆಗಲಿಲ್ಲ. ಆಸೆಯ ಅಲೆಗಳು, ಮನದ ಹೊಸ್ತಿಲಿಗೆ ಬಡಿದು ಹಿಂದೆ ಹೋಗುತ್ತವೆ.

Advertisement

ಲಾಕ್‌ಡೌನ್‌ ಇದ್ದರೂ ಆ ಬಯಕೆ  ಎಂಬ ಹೂವುಗಳ ಬೆನ್ನತ್ತಿ ಹೋಗಿ ಬಿಡಬೇಕೆನಿಸುತ್ತಿತ್ತು. ಎದೆನೆಲದಲ್ಲಿ ನೆಮ್ಮದಿಯ ಹಸಿರು ಚಿಗುರೊಡೆಯುವು ದೆಂದು? ಮಂದಹಾಸದ ಮೊಗ್ಗೊಂದು ಮತ್ತೆ ಅರಳುವುದೆಂದು? ಅವಳಿಗಾಗಿ ಬದುಕಿನ ಸಾಲುಗಳನ್ನು ಜೊತೆ  ಮಾಡಬೇಕು. ಒಂದಿಷ್ಟು ಕನವರಿಕೆಯ ಕದ್ದು ತರಬೇಕು! ಮತ್ತೆ ಮತ್ತೆ ನೆನೆಯಬೇಕು, ಮುಗುಳ್ನಗಬೇಕು! ಎಷ್ಟೆಲ್ಲಾ ಆಸೆಗಳಿದ್ದವು ನನಗೆ! ಮುದಗೊಳಿಸುವ ಕಾಮನೆಗಳ ಜೊತೆ ಕಣ್ಣಾಮುಚ್ಚಾಲೆ ಆಡಲು ಕುಳಿತೆ. ಕಾಮನಬಿಲ್ಲಿನ  ಬಣ್ಣಗಳು, ಒಂದೆರಡು ಹೆಚ್ಚಾಗಿ ಇದ್ದಾವಾ ಎಂಬ ಗೊಂದಲಕ್ಕೆ ಬಿದ್ದೆ.

ಆಗಷ್ಟೇ ನಿಲ್ಲುತ್ತಿದ್ದ ಮಳೆಹನಿಗೆ ಬೊಗಸೆಯೊಡ್ಡಿ, ರುಚಿ ನೋಡಲು ಮುಂದಾದೆ. ಈ ಹುಡುಕಾಟದ ಮಧ್ಯೆ, ನನ್ನೊಳಗೇ ಇದ್ದದ್ದು ಅವಳ ನೆನಪು, ಅವಳ ಧ್ಯಾನ. ಭವಿಷ್ಯದ ಬದುಕಿನ ಬಗ್ಗೆ  ಒಂದು, ಎರಡು, ಮೂರು… ನೂರು ಕನಸು ಕಾಣುತ್ತಾ ಮೈಮರೆತೆ. ಈ ನಡುವೆ, ಅದೂ ಸ್ವತ್ಛ ಸ್ವತ್ಛ ಬೆಳದಿಂಗಳಲ್ಲಿ, ಒಲವಿನ ನೌಕೆ ದೂರ ದೂರ ದೂರ ಹೋದದ್ದು ನನಗೆ ಗೊತ್ತಾಗಲೇ ಇಲ್ಲ. ಎಲ್ಲವೂ ಅರ್ಥವಾಗುವ ವೇಳೆಗೆ, ಅವಳೂ,  ನೌಕೆಯೂ ಸಿಗಲಾರದಷ್ಟು ದೂರ ಹೋಗಿಯಾಗಿತ್ತು. ನಾನೀಗ ಒಂಟಿ…

* ಲಕ್ಷ್ಮೀಕಾಂತ್‌ ಎಲ್.ವಿ.

Advertisement

Udayavani is now on Telegram. Click here to join our channel and stay updated with the latest news.

Next