Advertisement

Los Angeles wildfires: ಒಲಿಂಪಿಕ್ಸ್‌ ಆಯೋಜನೆಗೆ ಭೀತಿ?

10:56 PM Jan 14, 2025 | Team Udayavani |

ಲಾಸ್‌ ಏಂಜಲೀಸ್‌: ಅಮೆರಿಕದಲ್ಲಿ ಸಾವು ನೋವಿನ ಬೇಗೆ ಎಬ್ಬಿಸಿರುವ ಕಾಳ್ಗಿಚ್ಚು, ಲಾಸ್‌ ಎಂಜಲೀಸ್‌ನಲ್ಲಿ 2028ರಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಷ್ಠಿತ ಒಲಿಂಪಿಕ್ಸ್‌ಗೂ ಕಂಟಕವಾಗಿ ಪರಿಣಮಿಸುವ ಭೀತಿ ಎದುರಾಗಿದೆ. ಕಾರಣ, ಲಾಸ್‌ ಏಂಜಲೀಸ್‌ ಸೇರಿ ಒಲಿಂಪಿಕ್ಸ್‌ ಆತಿಥ್ಯಕ್ಕೆ ನಿಗದಿಯಾಗಿದ್ದ ಅಮೆರಿಕದ 80ಕ್ಕೂ ಹೆಚ್ಚು ತಾಣಗಳು ಕಾಡ್ಗಿಚ್ಚಿನಿಂದ ಹಾನಿಗೀಡಾಗಿವೆ!

Advertisement

ಹವಾಮಾನ ವೈಪರೀತ್ಯಕ್ಕೆ ಒಳಗಾಗಿರುವ ಅಮೆರಿಕದ ಕೆಲವು ಭಾಗಗಳು ಸ್ಮಶಾನದಂತಾಗಿವೆ. ಇದೇ ಪರಿಸ್ಥಿತಿ ಮುಂದಿನ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ವೇಳೆಯೂ ಮರುಕಳಿಸಿದರೆ ನೀವು ಅಚ್ಚರಿಪಡಬೇಕಾಗಿಲ್ಲ ಎಂದು ಸ್ಥಳೀಯ ಪ್ರೊಫೆಸರ್‌ ಸೈಮನ್‌ ಚಾಡ್ವಿಕ್‌ ಹೇಳಿದ್ದಾರೆ.

ಆದರೆ 2028ರ ಒಲಿಂಪಿಕ್ಸ್‌ ನಡೆಯುವುದು ಜುಲೈನಲ್ಲಿ. ಆ ವೇಳೆ ಈಗ ಭೀಕರ ಕಾಳ್ಗಿಚ್ಚಿಗೆ ಕಾರಣವಾಗಿರುವ “ಸಾಂತಾ ಅನಾ’ ಬಿರುಗಾಳಿ ಬೀಸುವ ಸಾಧ್ಯತೆಯಿಲ್ಲ. ಹೀಗಾಗಿ ಒಲಿಂಪಿಕ್ಸ್‌ ವೇಳೆ ಮತ್ತೆ ಇಂಥ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಬಹಳ ಕಡಿಮೆ ಎಂದು ಇನ್ನೊಂದು ವರದಿ ಹೇಳಿದೆ.

ಲಾಸ್‌ ಏಂಜಲೀಸ್‌ ಈಗಾಗಲೇ 2 ಬಾರಿ ಒಲಿಂಪಿಕ್ಸ್‌ ಕೂಟವನ್ನು ಯಶಸ್ವಿಯಾಗಿ ಆಯೋಜಿಸಿದೆ (1932 ಮತ್ತು 1984).

Advertisement

Udayavani is now on Telegram. Click here to join our channel and stay updated with the latest news.