Advertisement

Punjalkatte: ಲಾರಿ-ಸ್ಕೂಟರ್‌ ಢಿಕ್ಕಿ; ಸಹಸವಾರ ಸಾವು

09:05 PM Jul 06, 2024 | Team Udayavani |

ಪುಂಜಾಲಕಟ್ಟೆ: ಗೂಡ್ಸ್‌ ಮಿನಿ ಲಾರಿ ಹಾಗೂ ಸ್ಕೂಟರ್‌ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್‌ ಸಹ ಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಶನಿವಾರ ಸಂಭವಿಸಿದೆ.

Advertisement

ಸ್ಕೂಟರ್‌ ಸಹ ಸವಾರ ಕಾಸರಗೋಡು ಬೇಕಲ ನಿವಾಸಿ ನಿಖಿಲ್‌ (24) ಅವರು ಮೃತಪಟ್ಟವರು. ಸ್ಕೂಟರ್‌ ಸವಾರ ಗುರುಪ್ರೀತ್‌ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುಂಜಾಲಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಬರುತ್ತಿದ್ದ ಮಿನಿ ಲಾರಿ ಢಿಕ್ಕಿಯಾಗಿದೆ. ಪಿಕಪ್‌ ವಾಹನವೊಂದನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಮಿನಿ ಲಾರಿ ಸ್ಕೂಟರ್‌ಗೆ ಢಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ನಿಖಿಲ್‌ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿನ್ನಪ್ಪಿದ್ದಾರೆ. ತತ್‌ಕ್ಷಣ ಸ್ಥಳೀಯರು ಆಗಮಿಸಿ ಗಾಯಾಳು ಗುರುಪ್ರೀತ್‌ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಂಟ್ವಾಳ ಟ್ರಾಫಿಕ್‌ ಎಸ್‌ಐ ಸುತೇಶ್‌ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next