Advertisement

ಹೆದ್ದಾರಿಯಲ್ಲಿ ಕೋಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ಸಾವನ್ನಪ್ಪಿದ 600ಕ್ಕೂ ಹೆಚ್ಚು ಕೋಳಿಗಳು

09:42 AM Feb 17, 2020 | keerthan |

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಅರೆಹೊಳೆ ಬೈಪಾಸ್ ನಲ್ಲಿ ನಿಯಂತ್ರಣ ತಪ್ಪಿದ ಕೋಳಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಸುಮಾರು 600ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ ಘಟನೆ ಮಧ್ಯರಾತ್ರಿ ನಡೆದಿದೆ.

Advertisement

ರಾತ್ರಿ ಸುಮಾರು 2.30ರ ಸಮಯಕ್ಕೆ ಅರೆಹೊಳೆ ಬೈಪಾಸ್ ನಲ್ಲಿ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರಣ ಪಲ್ಟಿಯಾಗಿದೆ. ಲಾರಿಯ ಚಾಲಕ ಅಥವಾ ಸಹಾಯಕರು ಅಪಾಯವಿಲ್ಲದೆ ಪಾರಾಗಿದ್ದಾರೆ. ಆದರೆ ರಸ್ತೆಗೆ ಬಿದ್ದ ಕೋಳಿಗಳು ಸಾವನ್ನಪ್ಪಿವೆ.

ಸತ್ತು ಬಿದ್ದ ಕೋಳಿಗಳನ್ನು ನಂತರ ಅಲ್ಲಿಂದ ತೆರವುಗೊಳಿಸಲಾಗಿದೆ. ರವಿವಾರ ಬೆಳಿಗ್ಗೆ ಲಾರಿಯನ್ನೂ ಸ್ಥಳದಿಂದ ತೆರವು ಮಾಡಲಾಗಿದೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next