ಬೆಳ್ತಂಗಡಿ: ನಾವೂರು ಗ್ರಾಮದ ಕೋಡಿ ಎಂಬಲ್ಲಿ ಕುರಿಗೊಬ್ಬರ ತುಂಬಿದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದ ಘಟನೆ ಶುಕ್ರವಾರ ಸುಮಾರು 11 ಗಂಟೆಗೆ ನಡೆದಿದೆ.
ಚಾಲಕ ಹಾಗೂ ನಿರ್ವಾಹಕ ಹಾಗೂ ಸಹಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ತುಳು ಚಿತ್ರರಂಗ @50: ‘ಎನ್ನ ತಂಗಡಿ’ ಯಿಂದ ‘ಗಮ್ಜಾಲ್’ ವರೆಗೆ ಚಿತ್ರರಂಗ ನಡೆದು ಬಂದ ಪಯಣ
ಚಿತ್ರದುರ್ಗದಿಂದ ವರ್ಷಂಪ್ರತಿ ನಾವೂರಿಗೆ ಕುರಿಗೊಬ್ಬರ ಆಮದು ಆಗುತ್ತದೆ. ಶುಕ್ರವಾರವು 550 ಬ್ಯಾಗ್ ತುಂಬಿದ ಲಾರಿ ಬಂದಿದೆ. ಕಿರ್ನಡ್ಕ ಕಾಲನಿಯಿಂದ ಬರಮೇಲು ಹಡೀಲು ಕಾಂಕ್ರೀಟ್ ರಸ್ತೆ ಮಧ್ಯ 100 ಮೀ. ಮಣ್ಣಿನ ರಸ್ತೆಯು ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದರಿಂದ ಮೃದುವಾಗಿತ್ತು. ಲಾರಿ ಚಾಲಕ ಇದನ್ನು ಗಮನಿಸದೆ, ರಸ್ತೆ ಅಂಚಿಗೆ ಸರಿದಿದ್ದರಿಂದ ಲಾರಿ ಮಗುಚಿಬಿದ್ದಿದೆ.
ಇದನ್ನೂ ಓದಿ:ಕರಾವಳಿಯಲ್ಲಿ ಹಲವೆಡೆ ಉತ್ತಮ ಮಳೆ: ಒಣಹಾಕಿದ ಅಡಿಕೆ ಒದ್ದೆ, ರೈತರಿಗೆ ನಷ್ಟ
ತಕ್ಷಣ ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷರಾದ ಗಣೇಶ್ ಸಹಿತ ಸದಸ್ಯರು, ಸ್ಥಳೀಯರು ಭೇಟಿ ನೀಡಿದ್ದು, ಅಗತ್ಯ ಕ್ರಮ ವಹಿಸಿದ್ದಾರೆ.