Advertisement

ಲಾರಿ, ಕಾರು ಢಿಕ್ಕಿ: ಮಹಿಳೆ ಸಾವು

06:00 AM Jun 14, 2018 | Team Udayavani |

ಮಡಿಕೇರಿ: ಲಾರಿ ಹಾಗೂ ಕಾರು ಪರಸ್ಪರ ಢಿಕ್ಕಿ ಹೊಡೆ ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ರಸ್ತೆಯ ಆನೆಕಾಡು ಬಳಿ ನಡೆದಿದೆ.

Advertisement

ಮಡಿಕೇರಿ ಸಮೀಪದ ಕಾಟಕೇರಿ ನಿವಾಸಿ ಫಿಲೋಮಿನಾ  ಮೃತರು. ಕಾರು ಚಲಾಯಿಸುತ್ತಿದ್ದ  ಅವರ ಪುತ್ರ ಯೋಧ ಪ್ರವೀಣ್‌ ಡ್ಯಾನಿಯಲ್‌ ಅವರಿಗೆ ಗಂಭೀರ ಗಾಯಗಳಾಗಿದ್ದು,  ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ಮೈಸೂರಿನ ಡೋರ್‌ನಳ್ಳಿ ಚರ್ಚಿಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಪ್ರವೀಣ್‌ ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ.   ಲಾರಿಯೊಂದನ್ನು  ಹಿಂದಿಕ್ಕುವ ಪ್ರಯತ್ನದಲ್ಲಿದ್ದ ಈ ಕಾರು ಎದುರಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next