Advertisement

ಲಾರಿಗಳು ಮುಖಾಮುಖಿ ಢಿಕ್ಕಿ, ಹೆದ್ದಾರಿ ಬಂದ್‌

06:00 AM Jun 24, 2018 | Team Udayavani |

ಮಡಂತ್ಯಾರು: ಮಂಗಳೂರು – ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಅರ್ತಿಲ ಸಮೀಪ ಶನಿವಾರ ಬೆಳಗ್ಗೆ ಲಾರಿಗಳು  ಢಿಕ್ಕಿಯಾಗಿ  ಸುಮಾರು 3 ಗಂಟೆ ಸಂಚಾರ ಸ್ಥಗಿತವಾಗಿತ್ತು. ಬೆಳ್ತಂಗಡಿ ಕಡೆಯಿಂದ ಮಂಗ ಳೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಮಂಗಳೂರಿನಿಂದ ಬೆಳ್ತಂಗಡಿ ಕಡೆ ಹೋಗುತ್ತಿದ್ದ ಲಾರಿ  ಢಿಕ್ಕಿಯಾಗಿತ್ತು.   ಒಂದು ಲಾರಿಯಲ್ಲಿ ಚಾಲಕ, ಇನ್ನೊಂದರಲ್ಲಿ ಚಾಲಕ ಮತ್ತು ಕ್ಲೀನರ್‌ ಇದ್ದರು. ಚಾಲಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾರಿಗಳೆರಡೂ ನಜ್ಜು ಗುಜ್ಜಾಗಿ ರಸ್ತೆಯ ಮಧ್ಯೆ  ಬಾಕಿ ಯಾದ ಕಾರ ಣ ಸಂಚಾರಕ್ಕೆ  ತಡೆಯಾಗಿತ್ತು. ಪುಂಜಾಲ ಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್‌ ಮೂಲಕ ಲಾರಿಗಳನ್ನು ತೆರವುಗೊಳಿಸಿದರು.

Advertisement

ರಸ್ತೆಯಲ್ಲೇ ಸಿಲುಕಿಕೊಂಡರು
ಸಂಚಾರ ವ್ಯತ್ಯಯವಾದ ಕಾರಣ ಕಚೇರಿಗೆ ಹೋಗುವವರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆಗೊಳಗಾದರು.  ಬೆಳ್ತಂಗಡಿಯಿಂದ ಮಡಂತ್ಯಾರು ಪುಂಜಾಲಕಟ್ಟೆ ಶಾಲೆಗೆ ಹೋಗುವ ಕೆಲವು ಮಕ್ಕಳು ನಡೆದು ಕೊಂಡು ಹೋದರು. ಬೆಳ್ತಂಗಡಿ ವಾಣಿ ವಿದ್ಯಾಸಂಸ್ಥೆಯ ವಾಹನ ಬ್ಲಾಕ್‌ ಮಧ್ಯೆ ಸಿಲುಕಿದ್ದು, ಅದರಲ್ಲಿದ್ದ ವಿದ್ಯಾರ್ಥಿಗಳನ್ನು ಮರಳಿ ಮನೆಗೆ  ಬಿಟ್ಟು ಬರಲು ಪ್ರಾಂಶುಪಾಲರು ತಿಳಿಸಿದರು.  

ಶಿರಾಡಿ ರಸ್ತೆ ಬಂದ್‌ನಿಂದ ಸಂಚಾರ ಹೆಚ್ಚು ಶಿರಾಡಿ ರಸ್ತೆ ಬಂದ್‌ ಆದ ಕಾರಣ ಬೆಂಗಳೂರು – ಮಂಗಳೂರು ಹೋಗುವ ವಾಹನಗಳು ಚಾರ್ಮಾಡಿ ರಸ್ತೆಯನ್ನು ಬಳಸುತ್ತಿವೆ. ಪರಿಣಾಮ ಬಿ.ಸಿ. ರೋಡ್‌ – ಉಜಿರೆ ರಸ್ತೆಯಲ್ಲಿ ವಾಹನ ಸಂಚಾರ  ಭಾರೀ  ಹೆಚ್ಚಾಗಿದೆ. ರಾ. ಹೆ.ಆಗಿದ್ದರೂ  ಕೆಲವೆಡೆ  ತುಂಬಾ ಇಕ್ಕಟ್ಟಾಗಿದೆ. ಅರ್ತಿಲ ಸಮೀಪವೂ ರಸ್ತೆ ಕಿರಿದಾಗಿದ್ದು, ಎರಡು ವಾಹನ ಸಂಚರಿಸುವಷ್ಟೇ ಜಾಗವಿದೆ. ಇದರಿಂದಾಗಿ ಇಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಬದಲಿ ರಸ್ತೆ ಬಳಕೆ ಅರ್ತಿಲದಿಂದ ಮದ್ದಡ್ಕವರೆಗೆ ಮತ್ತು ಅರ್ತಿಲದಿಂದ ಕೊಲ್ಪೆದಬೈಲುವರೆಗೆ ಬ್ಲಾಕ್‌ ಆಗಿತ್ತು. ಮಂಗಳೂರಿನಿಂದ ಬರುತ್ತಿದ್ದ ವಾಹನಗಳು ಮಡಂತ್ಯಾರು ಬಳ್ಳಮಂಜ ಕಲ್ಲೇರಿ ರಸ್ತೆಯಾಗಿ ಗುರುವಾಯನಕೆರೆಗೆ ಹೋಗುತ್ತಿತ್ತು. ಬೆಳ್ತಂಗಡಿ ಕಡೆಯ ವಾಹನಗಳು ಕೂಡ ಇದೇ ಮಾರ್ಗವನ್ನು ಬಳಸುತ್ತಿದ್ದವು. 

ವಿದೇಶಕ್ಕೆ ಹೋಗಬೇಕಿದ್ದವರಿಗೆ ಪೊಲೀಸ್‌ ಸಹಾಯ
ವಿದೇಶಕ್ಕೆ ಹೋಗಬೇಕಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದು, ಅವರ ಪ್ರಯಾಣಕ್ಕೆ ಪೊಲೀಸ್‌ ಸಿಬಂದಿ ಸೂಕ್ತ ವ್ಯವಸ್ಥೆ ಮಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next