Advertisement

ಲಾರ್ಡ್ಸ್‌: ಮೊದಲ ದಿನ ಮಳೆಯಾಟ

06:15 AM Aug 10, 2018 | Team Udayavani |

ಲಂಡನ್‌: ಭಾರತ-ಇಂಗ್ಲೆಂಡ್‌ ನಡುವೆ ಇಲ್ಲಿನ ಲಾರ್ಡ್ಸ್‌ ಅಂಗಳದಲ್ಲಿ ಗುರುವಾರ ಆರಂಭವಾಗಬೇಕಿದ್ದ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಭಾರೀ ಮಳೆಯಿಂದ ಅಡಚಣೆಯಾಗಿದೆ. ಇದರಿಂದ ಮೊದಲ ದಿನದಾಟ ಸಂಪೂರ್ಣ ನಷ್ಟವಾಗಿದೆ.

Advertisement

ಬೆಳಗ್ಗಿನಿಂದಲೂ ಜಿಟಿಜಿಟಿ ಮಳೆ ಸುರಿಯುತ್ತಲೇ ಇದ್ದುರಿಂದ ಅಂಪಾಯರ್‌ಗಳಿಗೆ ಅಂಗಳವನ್ನು ಪರಿಶೀಲಿಸಲು ಹೆಚ್ಚಿನ ಅವಕಾಶ ಲಭಿಸಲಿಲ್ಲ. ಟಾಸ್‌ ಹಾರಿಸುವ, ಆಡುವ ಬಳಗವನ್ನು ಅಂತಿಮಗೊಳಿಸುವ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ. ಪಂದ್ಯದ ಆರಂಭದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರೂ ನಿರಾಸೆ ಅನುಭವಿಸಿದರು. ಅಂತಿಮವಾಗಿ ಸಂಜೆ 4.50ರ ಹೊತ್ತಿಗೆ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.ಇದರಿಂದ ಲಾರ್ಡ್ಸ್‌ ಟೆಸ್ಟ್‌ ಪಂದ್ಯ ಕೇವಲ 4 ದಿನಗಳಿಗೆ ಸೀಮಿತಗೊಂಡಿದೆ. ಈ ದಿನಗಳಂದು ದಿನದಾಟವನ್ನು ಬೇಗನೇ ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಪ್ರಕೃತಿ ಎಷ್ಟರ ಮಟ್ಟಿಗೆ ಸಹಕರಿಸುತ್ತದೆ ಎಂಬುದಷ್ಟೇ ಪ್ರಶ್ನೆ.

ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯವನ್ನು 31 ರನ್ನುಗಳಿಂದ ಸೋತ ಭಾರತ, 5 ಪಂದ್ಯಗಳ ಸರಣಿಯಲ್ಲಿ 1-0 ಹಿಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next