ಹೊಸದಿಲ್ಲಿ: ಜಿಹಾದ್ ಪರಿಕಲ್ಪನೆಯನ್ನು ಗೀತೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಪಾಠಗಳನ್ನು ಹೇಳಿದ್ದಾನೆ ಎಂದು ಹೇಳಿದರು.
“ಇಸ್ಲಾಂನಲ್ಲಿ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆಗಳಿವೆ ಎಂದು ಹೇಳಲಾಗುತ್ತದೆ. ಶ್ರೀ ಕೃಷ್ಣನು ಮಹಾಭಾರತದಲ್ಲಿ ಗೀತೆಯ ಒಂದು ಭಾಗದಲ್ಲಿ ಅರ್ಜುನನಿಗೆ ಜಿಹಾದ್ ಪಾಠಗಳನ್ನು ನೀಡಿದ್ದಾನೆ” ಎಂದು ಅವರು ಹೇಳಿದರು.
ಇದನ್ನೂ ಓದಿ:ಹುಣಸೂರು: ತಿಂಗಳಿಗೆ ನೂರು ಅರ್ಜಿ ವಿಲೇವಾರಿಗೆ ಕ್ರಮವಾಗಲಿ: ಶಾಸಕ ಮಂಜುನಾಥ್
2004ರಿಂದ 2008ರವರೆಗೆ ಕೇಂದ್ರ ಸಚಿವರಾಗಿದ್ದ ಶಿವರಾಜ್ ಪಾಟೀಲ್ ಅವರು ನಂತರ ಪಂಜಾಬ್ ನ ರಾಜ್ಯಪಾಲರೂ ಆಗಿದ್ದರು. ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ಶಶಿ ತರೂರ್, ದಿಗ್ವಿಜಯ್ ಸಿಂಗ್, ಫಾರೂಕ್ ಅಬ್ಧುಲ್ಲಾ ಮತ್ತು ಸುಶೀಲ್ ಕುಮಾರ್ ಶಿಂಧೆ ಭಾಗವಹಿಸಿದ್ದರು.
ಶಿವರಾಜ್ ಪಾಟೀಲ್ ಹೇಳಿಕೆಯನ್ನು ಬಿಜೆಪಿ ವಿರೋಧಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಶೆಹಜಾದ್ ಜಯ್ ಹಿಂದ್, ಭಗವಾನ್ ರಾಮನ ಅಸ್ತಿತ್ವವನ್ನು ವಿರೋಧಿಸುವ ಕಾಂಗ್ರೆಸ್ “ಹಿಂದೂ ದ್ವೇಚಿ” ಎಂದು ಆರೋಪಿಸಿದ್ದಾರೆ.