Advertisement
2 ಗಂಟೆಗೆ 250 ಕೆ.ಜಿಒಬ್ಬರು ಯಂತ್ರಕ್ಕೆ ಮರದ ತುಂಡುಗಳನ್ನು ಇಡುವುದಕ್ಕೆ, ಇನ್ನೋರ್ವರು ಯಂತ್ರವನ್ನು ಆಪರೇಟ್ ಮಾಡುವುದಕ್ಕೆ ಬೇಕು. 2 ಗಂಟೆ ಅವಧಿಯಲ್ಲಿ 250 ಕೆ.ಜಿ ಕಟ್ಟಿಗೆ ಒಡೆಯುವ ಸಾಮರ್ಥ್ಯ ಈ ಯಂತ್ರಕ್ಕಿದೆ. ಇದರ ನಿರ್ವಹಣೆ ಕೂಡ ಸುಲಭ. ವಿದ್ಯುತ್ ಚಾಲಿತ ಯಂತ್ರವಾಗಿದ್ದು, ಹೆಚ್ಚು ನಿರ್ವಹಣೆ ಕಷ್ಟವೂ ಇಲ್ಲ. ಇದರ ಬೆಲೆ 1.62 ಲಕ್ಷ ರೂ. ಆಗಿದ್ದು ಮಠಕ್ಕೆ ದಾನಿಯೋರ್ವರು ನೀಡಿದ್ದಾರೆ.
ಮಠದಲ್ಲಿ ಸಾಮಾನ್ಯ ದಿನಗಳಲ್ಲಿ ದಿನವೊಂದಕ್ಕೆ ಕನಿಷ್ಠವೆಂದರೆ 7,000ದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ರಜಾ ದಿನಗಳಲ್ಲಿ ಇವರ ಸಂಖ್ಯೆ ಎರಡು-ಮೂರು ಪಟ್ಟಾಗುತ್ತದೆ. ಇಲ್ಲಿ ಗೋಬರ್ ಗ್ಯಾಸ್ ವ್ಯವಸ್ಥೆಯೂ ಇದ್ದು ಇದರಿಂದ 5 ಸಾವಿರ ಮಂದಿಗೆ ಬೇಕಾದಷ್ಟು ಅಡುಗೆ ಮಾಡಲು ಸಾಧ್ಯವಿದೆ. ಉಳಿದಂತೆ ಕಟ್ಟಿಗೆಯನ್ನೇ ಬಳಸ ಬೇಕಾಗುತ್ತದೆ.
ಈ ಯಂತ್ರವನ್ನು ಉತ್ಪಾದಿಸಿರುವುದು ಮಂಗಳೂರು ಬೈಂಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶ್ರೀ ಕಾಳಿಕಾಂಬಾ ಇಂಡಸ್ಟ್ರೀಸ್‌ನವರು. ಬಳಿಕ ಕಂಪನಿ ತಂತ್ರ ಜ್ಞಾನದಲ್ಲಿ ಸುಧಾರಣೆ ಮಾಡಿ ಹೊಸ ಮಾದರಿ ಯಂತ್ರಗಳನ್ನು ಹೊರತಂದಿದೆ. ಕಟ್ಟಿಗೆ ಒಡೆಯುವವರೇ ವಿರಳವಾಗುತ್ತಿರುವ ಈ ದಿನಗಳಲ್ಲಿ ಇಂಥ ಯಂತ್ರ ಉಪಯುಕ್ತ.
ಶ್ರೀಕೃಷ್ಣಮಠದ ಅನ್ನಪ್ರಸಾದಕ್ಕೆ ದಿನಕ್ಕೆ ಸುಮಾರು 3 ಟನ್‌ಗಿಂತಲೂ ಹೆಚ್ಚು ಕಟ್ಟಿಗೆ ಬೇಕು. ಮಠಕ್ಕೆ ಬರುವ ಕಟ್ಟಿಗೆಯನ್ನು ಒಡೆಯುವುದು ಕೂಡ ಕಷ್ಟದ ಕೆಲಸವೇ ಆಗಿತ್ತು. ಈಗ ದಾನಿಯೋರ್ವರು ಯಂತ್ರ ನೀಡಿದ್ದಾರೆ. ಇದರಲ್ಲಿ ನಮಗೆ ಬೇಕಾದಷ್ಟು ಕಟ್ಟಿಗೆ ಸಿದ್ಧಮಾಡಿಕೊಳ್ಳುತ್ತೇವೆ. ಕಟ್ಟಿಗೆ ಯಂತ್ರದಿಂದ ಕಾರ್ಮಿಕರ ಶ್ರಮ ಉಳಿತಾಯವಾಗಿದೆ.
– ಅಧಿಕಾರಿಗಳು,ಶ್ರೀಕೃಷ್ಣ ಮಠ ಮಠದ ಕೆಲಸಗಾರರಿಗೆ ತರಬೇತಿ
ಕಟ್ಟಿಗೆ ಯಂತ್ರ ನಿರ್ವಹಣೆಗೆ ಮಠದಲ್ಲಿ ಇತರ ಕೆಲಸ ಮಾಡುವವರನ್ನೇ ತರಬೇತಿ ನೀಡಿ ನಿಯೋಜಿಸಲಾಗಿದೆ. ಇಬ್ಬರಿದ್ದರೆ ಈ ಯಂತ್ರ ನಿರ್ವಹಣೆ ಸಲೀಸು ಎನ್ನುತ್ತಾರೆ ಮಠದಲ್ಲಿ ಕಟ್ಟಿಗೆ ಒಡೆಯುವ ಯಂತ್ರ ನಿರ್ವಹಿಸುತ್ತಿರುವ ಸುಂದರ ಮತ್ತು ಕೃಷ್ಣ ಅವರು.
Related Articles
Advertisement