Advertisement

ಗಣಪನಿಗೂ ಬಂತು ಆಧಾರ್‌ ಕಾರ್ಡ್‌!: ಇದರಲ್ಲಿದೆ ವಿನಾಯಕನ ಜನ್ಮ ದಿನಾಂಕ, ವಿಳಾಸ!

05:39 PM Sep 01, 2022 | Team Udayavani |

ಜಾರ್ಖಂಡ್‌: ವಿಘ್ನ ನಿವಾರಕನ ಮೂರ್ತಿಯನ್ನು ಒಂದೊಂದು ಪ್ರದೇಶದಲ್ಲಿ ವಿಭಿನ್ನ ವಿನ್ಯಾಸದೊಂದಿಗೆ ರಚಿಸಿ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಜಾರ್ಖಂಡ್‌ನ ಜೆಮ್‌ಶೇಡ್‌ಪುರದಲ್ಲಿ ಜನರು ಗಣೇಶನಿಗೆ ದೊಡ್ಡ ಗಾತ್ರದ ಆಧಾರ್‌ ಕಾರ್ಡ್‌ ಅನ್ನು ಸಿದ್ದಪಡಿಸಿ ಗಮನ ಸೆಳೆದಿದ್ದಾರೆ.

Advertisement

ಈ ಆಧಾರ್‌ ಕಾರ್ಡ್‌ನಲ್ಲಿರುವ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳ ಗೂಗಲ್ ಲಿಂಕ್ ಪರದೆಯ ಮೇಲೆ ತೆರೆಯುತ್ತದೆ. ಅದರಲ್ಲಿ ನಮೂದಿಸಲಾದ ವಿಳಾಸವು ಶ್ರೀ ಗಣೇಶ್ S/o ಮಹಾದೇವ್, ಕೈಲಾಶ್ ಪರ್ವತದ ತುದಿ, ಮಾನಸರೋವರ, ಕೈಲಾಸ ಇದರ ಜೊತೆಗೆ 000001 ಪಿನ್‌ಕೋಡ್ ಮತ್ತು ಹುಟ್ಟಿದ ವರ್ಷ 01/01/600CE ಎಂದು ನಮೂದಿಸಲಾಗಿದೆ.

ಇದನ್ನೂ ಓದಿ:ದೆಹಲಿ ಶಾಲಾ ಬಾಲಕಿಯ ಮೇಲೆ ಗುಂಡು; ಪ್ರಮುಖ ಆರೋಪಿ ಬಂಧನ

ಗಣೇಶನ ಪೆಂಡಾಲ್‌ನ ಆಯೋಜಕ ಸರವ್ ಕುಮಾರ್ ಮಾತನಾಡಿ, ಕೋಲ್ಕತಾಕ್ಕೆ ಒಮ್ಮೆ ಭೇಟಿ ನೀಡಿದ ಸಂದರ್ಭ ಫೇಸ್‌ಬುಕ್‌ ಥೀಮ್ ಅನ್ನು ಇಟ್ಟುಕೊಂಡು ತಯಾರಿಸಲಾಗಿದ್ದ ಗಣೇಶನನ್ನು ನೋಡಿದ್ದೆ. ಅದನ್ನು ಕಂಡು ಆಧಾರ್ ಕಾರ್ಡ್-ಥೀಮ್ ಪೆಂಡಾಲ್ ತಯಾರಿಸುವ ಆಲೋಚನೆ ನನಗೆ ಬಂದಿತು. “ದೇವರು ಆಧಾರ್ ಕಾರ್ಡ್ ಹೊಂದಿದ್ದರೆ, ಅದನ್ನು ನೋಡಿದ  ಜನರು ಸ್ಫೂರ್ತಿ ಪಡೆಯಬಹುದು ಮತ್ತು ಅದನ್ನು ಅನುಸರಿಸಬಹುದು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next