Advertisement
ನಿಯಮದಂತೆ ಹರಾಜು ಹಾಕಬೇಕು: ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಿದರೆ, ಅದರ ಇಟ್ಟಿಗೆ, ಹಂಚು, ಕಲ್ಲು, ಮರಮುಟ್ಟುಗಳನ್ನು ನಿಯಮದಂತೆ ಹರಾಜು ಹಾಕಬೇಕು. ಆದರೆ ಸರ್ಕಾರಿ ಅಧಿಕಾರಿಗಳು ಈ ಎಲ್ಲ ನಿಯಮಾವಗಳಿಗಳನ್ನು ಗಾಳಿಗೆ ತೂರಿದ್ದು, ಹರಾಜು ಪ್ರಕ್ರಿಯೆ ನಡೆಸಿಲ್ಲ. ಅಲ್ಲದೆ ಕಟ್ಟಡದ ಸಾಮಗ್ರಿಗಳನ್ನು ಯಾರಿಗೂ ಗೊತ್ತಿಲ್ಲದಂತೆ ಇಲ್ಲಿಂದ ಸಾಗಿಸಿದ್ದಾರೆ ಎಂಬ ಆರೋಪವು ಕೇಳಿದೆ. ಹಾಗಾದರೆ ಶಿಕ್ಷಣ ಹಾಗೂ ಕ್ರೀಡಾ ಇಲಾಖೆ ಸುಪರ್ದಿಯಲ್ಲಿ ಇಲ್ಲದ ಲಕ್ಷಾಂತರ ಮೌಲ್ಯದ ಮರಮುಟ್ಟುಗಳು ಹೋಗಿದ್ದೇಲ್ಲಿಗೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.
Related Articles
Advertisement
ಈಜುಕೊಳ್ಳ, ಮಲ್ಟಿ ಜಿಮ್ ನಿರ್ಮಾಣ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸದ್ಯ ಸರ್ಕಾರಿ ಬಾಲಕರ ಕಿರಿಯ ಕಾಲೇಜಿನ ಸುಪರ್ದಿಯಲ್ಲಿದೆ. ಈ ಜಾಗದಲ್ಲಿರುವ ಕೊಠಡಿಗಳನ್ನು ತೆರವುಗೊಳಿಸಿ, ತಾಲೂಕಿನಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಿಸಲು ಈ ಕ್ರೀಡಾ ಇಲಾಖೆಗೆ ಅಂದಿನ ಸಚಿವರು ಶ್ರೀನಿವಾಸ್ ಪ್ರಸಾದರ ಅಣತಿಯಂತೆ ಹಸ್ತಾತಂರಿಸಲಾಗಿತ್ತು. ನಂತರ ಕ್ರೀಡಾಂಗಣ ನಿರ್ಮಿಸಲು ಹೊರಟ ಇಲಾಖೆ, ಈಗ ಆವರಣದಲ್ಲಿದ್ದ ಆ ನಾಲ್ಕೂ ಕೊಠಡಿಗಳನ್ನು ಉರುಳಿಸಿದೆ. ಆದರೆ ಲಕ್ಷಾಂತರ ಮರಮಟ್ಟುಗಳು ಏನಾದವು ಎಂಬುದು ಮಾತ್ರ ನಿಗೂಢವಾಗಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳ ನಡೆ ಮೇಲೆ ಅಕ್ರಮದ ವಾಸನೆ ಕಾಣುತ್ತಿದೆ.
ಅತ್ಯಂತ ಬೆಲೆ ಬಾಳುವ ಈ ಮರದಜಂತಿ ಸೇರಿದಂತೆ ಸಾಮಗ್ರಿಗಳನ್ನು ಸರ್ಕಾರಿ ಬಾಲಕರ ಕಾಲೇಜಿನ ವಶದಲ್ಲಿ ಇರಿಸಲಾಗಿದೆ. ಈ ಜಾಗದಲ್ಲಿ ಅತ್ಯಾಧುನಿಕ ಒಳಂಗಣದ ಈಜುಕೊಳ (25 ಮೀಟರ್) ಮಲ್ಟಿ ಜೀಮ್, ಸೇರಿದಂತೆ ಒಳಾಂಗಣದ ಧ ಆಟಗಳಿಗಾಗಿ ಕ್ರೀಡಾಂಗಣ ಸಿದ್ಧಪಡಿಸುವ ಯೋಜನೆಗಾಗಿ ತೆರವು ಗೊಳಿಸಲಾಗಿದೆ. ಮರದ ಜಂತಿಗಳೆಲ್ಲ ಸುರಕ್ಷಿತವಾಗಿವೆ. ಎರಡ್ಮೂರು ದಿನಗಳಲ್ಲಿ ಪರಿಶೀಲನೆ ನಡೆಸುತ್ತೇವೆ.-ಸುರೇಶ, ಯುವಜನ ಸಬಲೀಕರಣ ಇಲಾಖೆ ಅಧಿಕಾರಿ * ಶ್ರೀಧರ್ ಆರ್. ಭಟ್